ಈ ಪುಟವನ್ನು ಪರಿಶೀಲಿಸಲಾಗಿದೆ

 ಕಾದಂಬರಿ ಸಂಗ್ರಹ ೨೭

   ಇಂದು ನೀ ವೇನಾಗಿ ಪೋದಿರಿ|ವೃಂದವೆಲ್ಲ ವು ಸೋತವಿವುನಿ। 

ಮ್ಮಿಂದೆರಣದೊಳ್ನೀವದೆಂತುಟು ಸಂದಿರೆಂದೊರೆದ ||೪||

   ಮಿಡಿದು ಕಣ್ಣೀರ್ಗಳನು ಗಣನುಂ| ಪೊಡವಿಯಲ್ಲಿರಲಾರೆನಾಂಕೇ|

ಡಡಿಸಿತಿಂತು ಕುಲಕ್ಕೆ ವೀರರು ಮರಣವೈದಿದರು ||

   ಉಡುಗಿಪೋಗುವೆವೆನ್ನ ಹರಣ| ಗಳಡಿಗಡಿಗೆ ನಾವೇಗನೆಂದೆನೆ|
ನುಡಿದರಾತಂಗಂದು ಸಚಿವರು ಶಾಂತವಚನವನು                  ||೫||

   ತಿರೆಯೊಳಾರೈ ಮರಣವೆಯ್ದದ|  ರಿರುವರಧಟಿಂಶತ್ರುವೀರರ|

ತರಿದು ಮಡಿದಿರಲದಕೆ ಬೀರರುವ್ಯಥೆಯಮಾಣುವರು ||

   ಅರಸನೀಂನಾನಿಂದು ಹಗೆಗಳ| ಧುರದೊಳಿದಿರಿಸಿ ಜೀವಿಸಿರ್ದೊಡೆ| 

ತರಳರಿರ್ವರ ಬಿಡಿಸಿ ಬರ್ಪೆವೆನುತ್ತೆ ಬೆಸಸಿದರು ||೬||

    ಅರಿಪೆ, ಕೇಳ್ದುಂ ಗಣನು ಬಳಿಕಾ | ನಿರದೆ ಭಕ್ಷಿ ಪೆನೆಲ್ಲ ಮುನಿಗಳ| 

ಧರೆಯೊಳೀಗಳೆನುತ್ತೆ ಸೈನ್ಯಕೆ ಪೇಳ್ದು ರಥದೊಡನೆ ||

    ತೆರಳೆ ಪಿಂತನೆ ನಾಲ್ಕು ದಳವುಂ। ಬರಲು ಚಣದೊಳ್ಬೆನಕನಲ್ಲಿಗೆ |
ಧರಿಸಿ ಬಂದನು ಪರಶುಕಮಲವ ಕರದೆಮೋದಕವು                 ||೭||
    ಕರಚತುಷ್ಟಯದಲ್ಲಿ ಧರಿಸು | ತ್ತಿರದೆ ಸಿದ್ಧಿಸುಬುದ್ಧಿಯೆಂಬರು | 

ಮೆರಡುವಕ್ಕದೊಳಿರಲು ಸಿಂಗವನೇರಿ ಮಕುಟದೊಳು ||

    ಮೆರೆವ ತೇಜೋನಿಧಿಯ ವಿಘ್ನೇ| ಶ್ವರನ ಮುನಿಯುಂಸ್ತುತಿಸುತಿರೆತಾ| 

ಮಿರದೆ ಕಂಡರು ಗಣನ ಸೇನಾಚರರು ಬೆರಗಾಗಿ ||೮||

    ಪರಿಕಿಸಿಲ್ಲಂ ನಾವು ಮಿಂದಿನ| ವರೆಗೆ ಪೇಳೆನೆ ಗಣನ ಸೈನ್ಯವು| 
ಕೆರಳಿ ದೈತ್ಯನು ಗಣನು ಕಪಿಲನಕೂಡೆ ಬೆನಸಿದನು ||
    ವರಮುನೀಶ್ವರ ಪೇಳು ಬೇಗನೆ | ಪುರುಷನಾವನು ನಿನ್ನ ಸನಿಯದೊ| 
ಳಿರುವ ನಿಲ್ಲ ದೊಡವನಜತೆಯಲಿ ನಿನ್ನ ಕೊಲ್ಲುವೆನು               ||೯||

    ಆರುಮಂದಿಯ ಹಗೆಗಳೊಡನೆಯೆ |ಹಾರಿಯಾಡುವೆ ಹೀನಕರುಣನೆ|
ಯಾರು ಪೇಳೈಯಿವನು ? ಲೋಕದ ಜನಕೆ ಕೇಡುಗಳ ||
    ಬಾರಿಬಾರಿಗು ಮಾಳ್ಪನಿವನಿಂ| ದಾರಿಯಾಯ್ತಾ ಜಗಳಕಂ। 
ಬೀರನೊಡನೆಯೆ ನಿನ್ನ ಕೊಲ್ಲದೆಬಿಡೆನು ದಿಟವೆಂದ                ||೧೦||