ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬೆನಕವಮಹಿಮೆ
ಮಾನಹೀನನೆ ನಿನ್ನ ನಿರಿವನು| ತಾನು ಬೆನಕನು ಜನಿಸುತಿಲ್ಲಿಯ| ದೀನಪೋಷಕನೆಂದು ಪೇಳಲು ದುರುಳಗರ್ಜಿಸಿದ|| || ೮ || ವಿಷ್ಟರವ ಬಿಟ್ಟಿದ್ದು ಬೇಗನೆ| ವಿಷ್ಟರಶ್ರವನಲ್ಲಿಗೇಳಲು| ದೃಷ್ಟಿಗೊಡೆಯನು ತಾನು ಸಿಂಧುರಬೆನ್ನನಟ್ಟಿದನು || ದೃಷ್ಟಿಸುತ್ತ ಜನೆರಗಿ ಶೌರಿಗೆ| ನಿಷ್ಟೆಯಿಂದಲಿನುತಿಸೆ ಮುರಹರ| ನಿಷ್ಟ ಪುತ್ರನ ಮೊಗದಕುಂದನು ದಿಟ್ಟಿಸುತನುಡಿದ || ೯ || ಏಕೆಚಿಂತಿಪೆಸುತನೆ! ಪೇಳೈ| ಸಾಕುಕಡುಸುಯ್ ನಿನ್ನ ಪಿಂದಿ| ರ್ಪಾ ಕುಮಾರಕ ನಾರುಪೇಳೆಂದಾತಬೆಸಗೊಳಲು || ನಾಕಜಾಧಿಪನಾನು ಜೃಂಭಿಸ|ಲೀ ಕುಮಾರನು ಚಾರುಗಂಧನು| ಮೀಕುಮಂಡಲದೊಗೆದು ಪಡೆದನು ಸಿಂಧುರಾಖ್ಯೆಯನು || ೧೦ || ಇವನು ಬೇಡಲು ಸುಂದರಸ್ಥಾ| ನವನು ಕೊಟ್ಟೆನು ಮತ್ತಮೀತಂ| ಬುವಿಯೊಳಾರನು ತಳ್ಕಿಸಲ್ಕವನಂದು ಸುಟ್ಟಪನು || ಕವಿಯದಂತೆಯೆ ಸೋಲಮೇಗಳ್ | ದಿವಿಷದರ್ಕಳಿ ನಿಳೆಯನೃಪರಿಂ| ದಿವಗೆ ಕೊಟ್ಟೆನು ವರವನೆನ್ನು ಮನಪ್ಪಲೈತಂದ || ೧೧ || ಅದುವೆಕಾರಣಮಳ್ಕನಾಂತಾಂ| ಪದುಮನಾಭನೆ! ಬಂದೆನಿಲ್ಲಿಗೆ| ಪದೆದುಕಾವುದು ವರದನಿಜಕಾಂ ಲಕ್ಷ್ಮವಾಗಿಹೆನು || ಸದಯಕೇಳೆಂದೊರೆಯೆ ಶೌರಿಯು| ಬಿದಿಯೆಚಿಂತಿಸದಿಂತು ಮೆಲ್ಲವಿ| ಬುಧಸಮೂಹಕೆ ಭಯವ ಮೂಳ್ಪೀವರವನೇಕಿತ್ತೆ || ೧೨ || ಇದುವರೆಗೆ ಕಂಡಿಲ್ಲ ಕೇಳ್ದಿ| ಲ್ಲದನು ಬೊಮ್ಮನೆ ನಿನ್ನ ನುಡಿಯುಂ| ತೊದಳು ಮಲ್ಲಿವ ನೆಮ್ಮಯಾಬಲ ಪೌರುಷಂಗಳನು || ಪದೆದು ನೋಡಿದನೆಲ್ಲವ ಸುರನು| ಮೊದಲವರದಾಬಲಕೆ ಲೋಕವ| ನದುರಿಪಂಗಡ! ಶಿವನು ಕರುಣಿಸಲಿವನು ಮಡಿಯುವನು || ೧೩ ||
ಹರಿಯು ನುಡಿಯಲ್ಕಿಂತು ಸಿಂಧುರ| ನಿರದೆ ಹರಿಯನು ಕರೆಯೆಕೊಳಗೊಳ| ಕೆರಗದಿರ್ದೊಡೆ ನಿನ್ನ ನೀಬಿದಿಸಹಿತ ದಹಿಸುವೆನು || ಮುರನಿಷೂದನ ಕೇಳುನೀನೆನೆ| ನಿರುಕಿಸುತ್ತೆಲೆ ಶಕ್ತಿಹೀನರು| ನೆರೆನಿರೀಹರು ಬಗೆವೊಡೆಂತುಟುಕಾದಲೆಳಸುವರು || ೧೪ ||