ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚನನಮುಹಿಮ
ಜಾನುಮಧ್ಯದೆ ಪಾರ್ವನೈತಂ| ದೇನುದೈತ್ಯನೆ | ಸೆಣಸುಶಿವನೊಡೆ| ನೀನು ಗೆಲ್ಲೊಡೆಶಿವೆಯ ಕೈಕೊಳ್ಳಿದಕೆ ನಿಮ್ಮೊಳಗೆ || ನಾನು ಮಧ್ಯಸ್ಥಾನವಾಂಪೆನು | ಮಾನಿಯೆನ್ನುತೆ ಪರಶುಮಧ್ಯ| ಸ್ಥಾನದಲ್ಲಿಡೆ ಚಿರದೊಳಿರ್ವರು ಕಾದಿಸೆಣಸಿದವು || ೨೨ ||
ಪರಶುಧಾವಿಸಿ ಬರುವ ದೈತ್ಯನಿ| ಗುರದೆ ನಾಂಟುತಲವಗೆ ಹಿಂಸೆಯ| ಮರೆಯೊಳಾಚರಿಸುತ್ತೆ ಬಲವನವಂಗೆ ತಳ್ಗಿಸಿತ|| ಮರಳಿ ಪಾರ್ಛನು ಶಿವನೆ! ಗೆಲ್ದನು| ದುರುಳ ! ದೇವಿಯನಿತ್ತು ಬೇವಿಸು| ಬರಿದೆ ಶೂಲದಬಾಯ್ಗೆ ಸಿಲ್ಕುತೆ ಸಾಯಬೇಡೆಂದ || ೨೩ ||
ಖಳನು ಕೇಳುತೆ ಭಯದೋಳುಳಿದನು | ಮುಳಿದು ಶಿವೆಯನು ನಾಗಲೋಕ | ಕ್ಕಿಳಿದು ಪೋದನುಬಳಿಕ ಪಾರ್ವತಿಪಾರ್ವನಂ ನೋಡಿ|| ಗಳಿಗೆಮಾತ್ರದೆ ನೀನು ದೈತ್ಯನ| ಗೆಲಿದು ತಪ್ಪಿಸಿಸೆರೆಯನೆನಗಂ| ಬಳಿಕ ಕಾಯ್ದೆ ನಿನ್ನ ಮನೆಯೆಲ್ಲಿಹುದು ನೀನಾರು || ೨೪ ||
ಎನುತ ಪೇಳ್ದಾಶಿವೆಯ ಮಾತಿಗೆ| ತೊನೆದುವಾರ್ವನು ತನ್ನ ರೂಪದ|
ಘನತೆಮೆರೆಯಿಸೆ ಗೌರಿಬೆಕ್ಕ ಸಮೆಯ್ದಿ ಬಗೆಯೊಳಗೆ ||
ವಿನತಳಾಗಿಯೆ ನಾಲ್ಕು ತೋಳಿನ ವಿನುತ ಸಿಂಹಾಸೀನ ಸುಮುಖನ| ಧನುವನಾಂತನ ನೋಡಿ ನಲಿದಿರೆ ಬಳಿಕ ಗಣಪತಿಯು || ೨೫ || ಮೇನಕಾತ್ಮಜೆ ಕೇಳಜಾದ್ಯರು| ಮೌನಿಮುಖ್ಯರು ಜಂತುನಿವಹಂ| ಧ್ಯಾನದಿಂದ ವಿರೋಧದಿಂದಲಿ ಭವವದಾಂಟುವರು || ನಾನು ಸಿಂಧುರ ದೈತ್ಯಹನನಕೆ | ಮಾನಿನೀಮಣಿ ನಿನ್ನ ಜಠರದೆ| ಸಾನುರಾಗದೊಳೊಗೆವೆನೆನೆ ನಾವ್ ಬಂದೆವೀಸ್ಥಳಕೆ || ೨೬ ||
ಇಂತು ಸ್ಕಾಂತಪುರಾಣಾಂತರ್ಗತಮಾದ ವಿನಾಯಕ ಮಹಾಮಹಿಮೆಯೊಳ್ ಒಂಭತ್ತನೆಯ ಪ್ರಕರಣವು ಮುಗಿದುದು. ಹತ್ತನೆಯ ಕರಣ. ಸೂ|| ಗಿರಿಜೆಯುದರದೊಳೊಗೆದು ದೇವನು ವರಗಜಾನನನಿರಿದು ದೈತ್ಯನ| ಸುರರ ಪಾರ್ವರಾಯ್ದ ನೆನ್ನುತೆ ಗುಹಗೆ ಶಿವನೆರೆದ|| ರಸೆಯೊಳೆಲ್ಲರ ದೈತ್ಯನಳಿಸುತೆ | ವಸುಧೆಯೊಡೆಯರ ವೀರಮುಖ್ಯರ| ಹೊಸೆದು ಬಾಧಿಸಿ ಮತ್ತೆ ನಾಲ್ವರ ವೇದನಿಷ್ಟರನು || ಆಸುಗಳೆದು ಪೆಣ್ಗ ಳನಪಹರಿಸಿ| ವಸತಿಗಗ್ಗಿ” ಯನಿಕ್ಕಿ ಮುರಿದನು | ಮಸಗಿಯಜ್ಞ-ಮಹೀಜ-ಕಾಸಾರಾದಿಮಂಟಪವ ||೧||