ಈ ಪುಟವನ್ನು ಪರಿಶೀಲಿಸಲಾಗಿದೆ

ನನ್ನ ಸಂಸಾರ 39

ವಿಚಕ್ಷಣ ಚತುರೆ !! ವಿವೇಚನಾವಿರಹಿತಜನ ಗೌರವಪ್ರದಾಯಿನಿ !! ಕೊಲೆಗಾರರು ನಿಷ್ಕಲ್ಮಷರಾಗುವುದು ನಿನ್ನಿಂದಲೇ! ಬಡವರು ಹಣವನ್ನು ಇಟ್ಟುಕೊಂಡಿದ್ದರೆ ಕಳ್ಳ ರೆಂದು ಸಮರ್ಥಮಾಡುವ ವಿವೇಕವು ನಿನ್ನ ಮಹಿಮೆಯೇ ! ರಾಜಚರಿಕೆಗಳು ಮಿಥ್ಯಾ ಸ್ತುತಿಯಿಂದ ತುಂಬುವುದು ನಿನ್ನಿಂದಲೇ ! ಒಬ್ಬನು ಮತ್ತೊಬ್ಬನಿಗೆ ಪರಲೋಕಯಾತ್ರೆ ಯನ್ನು ಮಾಡಿಸುವುದು ನಿನ್ನಿಂದಲೇ ! ಸುಳ್ಳಾದ ಸಾಕ್ಷ್ಯಗಳಿಗೆ ನಿಜ ಸ್ಥಾಪನೆ ಯಾಗುವುದೂ ನಿನ್ನಿಂದಲೇ ! ಅಣ್ಣತಮ್ಮಂದಿರನ್ನೂ ಹೆಂಡತಿಮಕ್ಕಳನ್ನೂ ಮಾತಾ ಪಿತೃಗಳನ್ನೂ ತೊರೆಸಿಬಿಡುವ ಮಹಿಮೆಯೂ ನಿನ್ನದೇ ! ಓರಗಿತ್ತಿಯರನ್ನು ಓಡಿಸಿಬಿಡು ವವನೂ ನೀನೇ! ಲಂಚ ಮುಂತಾದವುಗಳ ರೂಪದಿಂದ ಎಷ್ಟೋ ಜನರ ಮನೆಯನ್ನು ಹಾಳುಮಾಡಿದಾಗ್ಯೂ ಕೆಲವರಿಗಾದರೂ ಉಪಕಾರಮಾಡುತ್ತಿರುವ ನಿನ್ನ ಕಾರುಣ್ಯವು ಅನ್ಯಾದೃಶವಾದುದು. ದಿಟವನ್ನು ಸಟೆಯನ್ನಾಗಿಯೂ ಸಟೆಯನ್ನು ದಿಟವನ್ನಾಗಿಯೂ ಕನಿಷ್ಟನನ್ನು ಜ್ಯೇ‍‍ಷ್ಟನನ್ನಾಗಿಯೂ, ಜೈಷ್ಟನನ್ನು ಕನಿಷ್ಟನನ್ನಾಗಿಯೂ ಉತ್ತಮ ಜಾತಿಯನ್ನು ನೀಚಜಾತಿಯನ್ನಾಗಿಯೂ ನೀಚಜಾತಿಯನ್ನು ಉತ್ತಮಜಾತಿಯನ್ನಾಗಿಯೂ ಮಾಡುವ ನಿನ್ನ ಶಕ್ತಿಯು ಅನ್ಯಾದೃಶವಾದುದು. ಹೇ ಅಮೃತಕವಷ ಶೋಭಿತವಾಶಯೆ ! ಮಲಿನೀಕೃತ ಮಹಾಶಯೆ ! ಜಡೀಕೃತದೃಢಾಶಯೆ !..ಅಧರೀಕೃತ ಬುಧಾಶಯೆ ! ನಿಷ್ಪಂದೀಕೃತ ಭಾವಾಶಯೆ ! ತೃಣೀಕೃತ ಗುಣಾಶಯೆ ! ಯಾವ ಉತ್ತ್ತಮ ಗುಣವಂತನನ್ನು ನೀನು ಮಲಿನನನ್ನಾಗಿ ಮಾಡಲಿಲ್ಲ ? ಯಾವ ಸತಿಯ ಸತೀತ್ವವನ್ನು ಅವಮಾನಗೊಳಿಸಲಿಲ್ಲ? ನಿಶ್ಚಯಮನಸ್ಕಳಾದ ಯಾವ ಸತ್ಯವತಿಯನ್ನು ಕಳ್ಳಳನ್ನಾಗಿ ಮಾಡಲು ಪ್ರಯತ್ನಿಸಲಿಲ್ಲ? ಯಾವ ಯಾವ ಅನ್ಯಾಯಗಳು ಬೇಕಾ ದರೂ ಎಲ್ಲವುಗಳಿಗೂ ಸಹಾಯಮಾಡಲು ಬದ್ದಕಂಕಣಳಾದ ನಿನ್ನ ವಿಶುದ್ಧಮಂತ್ರಿತ್ವವನ್ನು ಎಷ್ಟೆಂದು ಹೊಗಳಲಾಗುವುದು. ಅಲ್ಪಜ್ಞಳಾದ ನನಗೆ ನಿನ್ನನ್ನೆಂತು ಹೊಗಳ ಬೇಕೋ ಅದು ತಿಳಿಯದು. ಇಷ್ಟವಿದ್ದರೆ ಮೇಲಣ ಸ್ತುತಿಯನ್ನು ಸ್ವೀಕರಿಸು, ಇಲ್ಲವಾದರೆ ಪಾಠಕರ ಪಠನಕ್ಕೇ ಬಿಟ್ಟುಬಿಡು. ನಿನ್ನಿಂದಲೇ ಎಲ್ಲವೂ ಆಗಬಹುದೆಂಬ ಭಾವನೆಯಿದ್ದರೂ ಇತರ ಸಹಾಯವಿಲ್ಲದ ನಿನ್ನನುಗ್ರಹವು ಪ್ರಯೋಜನವಿಲ್ಲವೆಂಬ ಭಾವನೆಯಿಂದ ನಿನ್ನ ಸ್ತುತಿಯನ್ನು ಇಷ್ಟಕ್ಕೇ ಸಾಕುಮಾಡಿರುವೆನು

                                                     (ವಿವೇಕಮಂಜರಿ.) 
      ಹೀಗೆ ಹಣವನ್ನು ಹೊಗಳುತ್ತಿರುವಾಗಲೇ ನನಗೆ ನಿದ್ದೆ ಬಂದುಬಿಟ್ಟಿತು. ನಿದ್ದೆ ಯೂ ಚೆನ್ನಾಗಿ ಬಂದಿತು. ಲೋಕದಲ್ಲಿ, ಹೊಸದಾಗಿ ಏನಾದರೊಂದು ಕೆಟ್ಟ ಕೆಲಸ ಮಾಡಿದವರಿಗೂ, ಅವಮಾನವಾದವನಿಗೂ, ದುಃಖಪ್ರಾಪ್ತಿಯಾದವನಿಗ, ಪ್ರಯತ್ನ