ಈ ಪುಟವನ್ನು ಪರಿಶೀಲಿಸಲಾಗಿದೆ
40 ಕಾದಂಬರಿ ಸಂಗ್ರಹ
ವಿಲ್ಲದೆ ಅತ್ಯಂತ ಸಂತೋಷವೊದಗಿದವನಿಗೂ, ವಾಂಛಿತಫಲವು ಕೈಗೂಡುವದು ಸ್ವಲ್ಪ ದಿವಸವಿದೆ ಎಂದು ಯೋಚಿಸುವವನಿಗೂ, ಮದುವೆ, ನಿಷೇಕ, ಪರೀಕ್ಷಾಫಲಿತಾಂಶ, ಸೆರೆಮನೆಯ ಬಿಡುಗಡೆ, ಮುಂತಾದವು ಹತ್ತಿರದಲ್ಲಿದ್ದವನಿಗೂ, ರೋಗಿಗೂ, ನಿದ್ದೆಯು ಹತ್ತುವುದಿಲ್ಲ. ನನಗೆ ಯಾವ ಯೋಚನೆಯೂ ಇಲ್ಲದ್ದರಿಂದ ನಿದ್ದೆಯು ಚೆನ್ನಾಗಿ ಹತ್ತಿತು. ನಿದ್ದೆ ಹತ್ತಿದಾಗ್ಯೂ ನಿದ್ದೆಯ ಮಧ್ಯದಲ್ಲಿ ಹಗಲು ನಡದ ಹಣದ ವಿಚಾರಗಳು ಕನಸಿನರೂಪವಾಗಿ ಭಾಸಿಸುತ್ತಿದ್ದುವು.
VIII ಬೆಳಗಾಯಿತು. `ಉದ್ಯೋಗಿಗಳು ತಮ್ಮ ತಮ್ಮ ಕಾರ್ಯಗಳಲ್ಲಿ ನಿರತರಾದರು. ನಮ್ಮ ಅತ್ತಮ್ಮನವರೂ, ನಮ್ಮ ತಾತನೂ ಅದೇದಿನ ಅವಶ್ಯಕವಾದ ಕೆಲವು ಗೃಹಕೃ ತ್ಯಗಳಿಗಾಗಿ ಹರಪುರಕ್ಕೆ ಪ್ರಯಾಣಮಾಡಿದರು. ಆದಿನ ಮನೆಯಲ್ಲಿ ನಾನೂ, ಅಕ್ಕ, ಭಾವ ಇಷ್ಟುಮಂದಿಮಾತ್ರವೇ ಇದ್ದೆವು, ನನ್ನನ್ನು ಆದಿನ ಯಾರೂ ಮಾತನಾಡಿಸಲಿಲ್ಲ. ಮಧ್ಯಾಹ್ನವಾಯಿತು, ಎಲ್ಲರಿಗೂ ಊಟವಾಯಿತು. ನಾನೂ ಹೇಗೋ ಊಟ ಮಾಡಿದೆನು, ಮದ್ಯಾಹ್ನ ಮೂರುಗಂಟೆಯ ಸಮಯದಲ್ಲಿ ಅಂಚೆಯ ಜವಾನನು ಬಂದು ನನ್ನ ಹೆಸರಿಗೊಂದು, ನಮ್ಮ ಭಾವನವರ ಹೆಸರಿಗೊಂದು ಈ ರೀತಿ ಎರಡು ಕವರುಗಳನ್ನು ಕೊಟ್ಟು ಹೊರಟುಹೋದನು. ಅವೆರಡು ತಂತಿಯ ಮೂಲಕ ಬಂದ ಕವರುಗಳಾಗಿದ್ದುವು. ಟಪಾಲಿನ ಮುದ್ರೆಯು ಇರಲಿಲ್ಲ. ಒಡೆದು ನೋಡಲು ರಂಗಪುರದಿಂದ ನಮ್ಮ ಯಜಮಾನರಕಡೆಯಿಂದ ಬಂದ ತಂತೀವರ್ತಮಾನವೆಂದು ತಿಳಿದು ಬಂದಿತು. ಅವೆರಡಕ್ಕೂ ಏನು ವಿಚಾರವಿರುವುದೆಂಬುದನ್ನು ತಿಳಿಯಲು ನಮ್ಮ ಪಾಠಕರು ಕುತೂಹಲಿಗಳಾಗಿರುವುದರಿಂದ ಅದನ್ನು ಒಂದೊಂದನ್ನಾಗಿ ಈ ಕೆಳಗೆ ಬರೆ
ಯುವೆನು.
ನಮ್ಮ ಭಾವನವರಿಗೆ ಬಂದವರ್ತಮಾನ. ನಾನು ನಿನ್ನೆರಾತ್ರಿ ಇಲ್ಲಿಗೆಬಂದು ಸ್ನೇಹಿತರೊಬ್ಬರ ಮನೆಯಲ್ಲಿ ಮಲಗಿದ್ದೆನು. ಬೆಳಗಾದಮೇಲೂ ನಮ್ಮ ಮಾವನವರ ಮನೆಗೆ ಹೋಗಲಿಲ್ಲ. ಅವರ ಮನೆಗೆ ಊಟಕ್ಕೆ ಹೋಗಲು ನನಗೆ ಇಷ್ಟವಿಲ್ಲದೆ ಸರ್ಕಾರದ ಛತ್ರದಲ್ಲಿ ಊಟಮಾಡಿಕೊಂಡು ಬಳಿಕ ನಮ್ಮ ಮಾವನವರ ಮನೆಗೆ ಹೋಗಿ ಒಂದೆರಡುಗಳಿಗೆ ಯಾವ ಯಾವುದೋ ಮಾತನ್ನಾಡುತ್ತ ಕುಳಿತಿದ್ದೆನು. ಆಗ ಅತ್ತಮ್ಮನವರು ನಡುಮನೆಯಲ್ಲಿ ಊಟದೆಲೆಯನ್ನು ಹಚ್ಚುತ ಕುಳಿತಿದ್ದರು. ಎಷ್ಟುಹೊತ್ತಾದರೂ ಈಚಿಗೆಬರಲಿಲ್ಲ, ಒಂದೆರಡು ಗಳಿಗೆಯಾದನಂತರ ನಾನೇ ನಡುಮನೆಗೆ ಹೋಗಿ, ಅತ್ತಮ್ಮನವರನ್ನು ನಿರ್ದೆಶಿಸಿ ನೀವು ನಿಮ್ಮ ಮಗಳಿಗೆ