ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು



                                   ಮಧುಸೂದನ                        3
         ಹೋದಳು. ಈ ವೃತ್ತಾಂತವು ಕ್ಷಣಕಾಲದಲ್ಲಿ ಊರಲ್ಲೆಲ್ಲಾ ಹಬ್ಬ ಎಲ್ಲರೂ ಇದೇ ವಿಷಯವನ್ನೇ ಮಾತಾಡುತ್ತಿದ್ದರು.
       ಇಷ್ಟು ಗದ್ದಲ ನಡೆಯುತ್ತಿದ್ದಾಗ ಒಂಭತ್ತು ವರ್ಷ ವಯಸ್ಸಿನ ಮದುವಣ ಗಿತ್ತಿಯಾದ ಸರಳಬಾಲೆಯು ಏನುಮಾಡುತ್ತಿರಬಹುದು ? ಬಲ್ಲಿರಾ ? ಸುಶಿಕ್ಷಿತಳೂ ವಿವೇಕಿಯೂ ಆದ ಆ ಕನ್ಯಯು ಈ ಘಟನೆಯನ್ನು ನೋಡಿ ವ್ಯಸನಮಗ್ನಳಾಗಿ ಕೂಡಲೆ ದೇವರ ಮನೆಗೆ ಹೋಗಿ “ ತನ್ನ ಗಂಡನಿಗೆ ಶುಭವಾಗಲೆಂದು ” ಗೌರೀ ಪೂಜೆಯನ್ನು ಮಾಡತೊಡಗಿದಳು. ವಿವಾಹವು ಪೂರ್ಣವಾಗಿ ನಡೆಯದಿದ್ದರೂ ಮಧು ಸೂದನನೇ ತನ್ನ ಯಾವಜ್ಜೀವವೂ ಪತಿಯಾಗಿರುವವನೆಂದು ಅವಳು ದೃಢನಿಶ್ಚಯ ಮಾಡಿ ಕೊಂಡು ಭಕ್ತಿಯಿಂದ ದೇವರನ್ನು ನುತಿಸತೊಡಗಿದಳು.
           ಸೋಮಸುಂದರನು ಈ ವೃತ್ತಾಂತವನ್ನು ಕೂಡಲೆ ಪೋಲಿಸಿನವರಿಗೆ ತಿಳಿಸಿದನು. ಅವರೂ ಹುಡುಕುವುದಕ್ಕೆ ಆರಂಭಿಸಿದರು. ಒಳಿಕ ಸೋಮಸುಂದರನು ತ್ರಿಯಂಬಕ ಶಾಸ್ತ್ರಿಗಳನ್ನು ಕುರಿತು ಮುಂದೇನು ಮಾಡಬೇಕೆಂದು ಕೇಳಲು ಆತನು ಸ್ವಾಮಿ ! ಈಗ ನನಗೇನೂ ತೋರದು. ಮಾಂಗಲ್ಯಧಾರಣೆಯು ಆಗದಿದ್ದರೂ ವಿವಾಹವು ನಡೆ ಯಿತೆಂದೇ ನಾವು ಭಾವಿಸಬೇಕು. ನಾನು ನನ್ನ ಮಗಳನ್ನು ಇನ್ನೊಬ್ಬನಿಗೆ ಕೊಟ್ಟು ಆ ಹುಡುಗಿಯ ಸತೀತ್ವವನ್ನು ಹಾಳುಮಾಡಲಾರೆನೆನಲು ಸೋಮಸುಂದರನು, ಸ್ವಾಮಿ ! ನಿಮ್ಮ ಮಗಳು ನನ್ನ ಸೊಸೆಯೇ ಸರಿ! ಆದರೆ ಆ ಕನ್ಯೆಯು ನನ್ನ ಮನೆಯಲ್ಲಿದ್ದರೆ ನನಗೆ ಆಗಾಗ್ಗೆ ಆ ಮಗುವಿನ ಮುಖವನ್ನು ನೋಡಿ ದುಃಖ ಬರು ವುದರಿಂದ ನನ್ನ ಮಗನು ಸಿಕ್ಕುವವರಿಗೆ ಆ ಹುಡುಗಿಯು ನಿಮ್ಮ ಮನೆಯಲ್ಲೇ ಇರಲಿ. ನನ್ನ ಮಗನು ಸಿಕ್ಕಿದೊಡನೆ ವಿವಾಹ ಕಾರ್ಯಗಳನ್ನು ಮುಂಬರಿಸೋಣ ವೆಂದು ಹೇಳಲು ಇಬ್ಬರೂ ಸುಮ್ಮನಾದರು.


              ಎ ರ ಡ ನೆ ಯ ಅ ಧ್ಯಾ ಯ.
                      (ಭಾಸ್ಕರ)
             ಮೇಲೆಕಂಡ ವಿಷಯಗಳು ನಡೆದು ಹತ್ತುದಿನಗಳಾದವು. ಪೋಲೀಸ್ ಆಫೀಸ ರು ಬಂದು ವಿಷಯಗಳನ್ನೆಲ್ಲಾ ವಿಚಾರಿಸಿಕೊಂಡು ಹೋಗಿ ತಮ್ಮ ಕೈಲಾದ ಪ್ರಯತ್ನ ವನ್ನೆಲ್ಲಾ ಮಾಡಿ ಮಧುಸೂದನನನ್ನು ಹುಡುಕಿಸಿದರು. ಆದರೂ ಯಾವ ಪ್ರಯೋಜ