ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು



4                    ಕಾದಂಬರೀ ಸಂಗ್ರಹ

ನವೂ ಆಗಲಿಲ್ಲ. ಬಹಳ ಕಾತರನಾದ ಸೋಮಸುಂದರನು ಪತ್ರಿಕೆಗಳಲ್ಲೇನಾದರೂ ತನ್ನ ಮಗನ ವಿಷಯವನ್ನು ತಿಳಿಯಬಹುದೆಂದು ಒಂದು ವಾರ ಪತ್ರಿಕೆಯನ್ನು ಓದು ತ್ತಿದ್ದನು. ಅದರ ಒಂದು ಭಾಗದಲ್ಲಿ "ಘೋರವಾದ ಕೊಲೆಯೂ ಅದರ ಪರ್ರ್ಯವಸಾನ ವೂ" ಎಂದು ಬರೆಯಲ್ಪಟ್ಟಿದ್ದ ಲೇಖನವನ್ನು ಓದತೊಡಗಿದನು. ಈಗ್ಗೆ ಸುಮಾರು ಹತ್ತುದಿವಸಗಳ ಕೆಳಗೆ ರಾಣೀಗಂಜಿನಲ್ಲಿ ಒಂದು ಮನೆಯಲ್ಲಿ ಒಂದೇರಾತ್ರಿಯಲ್ಲಿ ಮೂರು ಜನಗಳು ಕೊಲ್ಲಲ್ಪಟ್ಟರು. ಆ ವಿಷಯದಲ್ಲಿ ಪೋಲೀಸಿನವರು ತಮ್ಮ ಸಾಮರ್ಥ್ಯವನ್ನೆಲ್ಲಾ ಉಪಯೋಗಿಸಿ ಕಂಡುಹಿಡಿಯಲು ಪ್ರಯತ್ನಪಟ್ಟರೂ ಯಾವ ಪ್ರಯೋಜನವನ್ನೂ ಹೊಂದದೇಹೋದರು. ಆಗ ಪೋಲೀಸ್ ಮುಖ್ಯಾಧಿಕಾರಿಯೇ ಬೊಂಬಾಯಿಯಲ್ಲಿದ್ದ ಪ್ರಸಿದ್ಧ ಪತ್ತೇದಾರರಾದ ಭಾಸ್ಕರ ಎಂಬುವರನ್ನು ಕರತರಿಸಿ ಅವರಿಗೆ ಈ ವಿಷಯವನ್ನು ಒಪ್ಪಿಸಿದನು. ಅವರು ನಾಲ್ಕುದಿವಸಗಳೊಳಗಾಗಿ ಕಷ್ಟಪ ಟ್ಟು ಕೊಲೆಪಾತಕನನ್ನು ಪತ್ತೇಮಾಡಿದರು. ಆ ಕೊಲೆಪಾತಕನು ಎಲ್ಲವನ್ನೂ ಒಪ್ಪಿ ಕೊಂಡು ಈ ದಿನ ಮಧ್ಯಾಹ್ನ ಯಾರಿಗೂ ಅರಿಯದ ರೀತಿ ತನ್ನನ್ನು ಕೂಡಿದ್ದ ಕೊಠ ಡಿಯ ಬಾಗಲಿನ ಕಂಬಿಗಳಿಗೆ ನೇಣುಹಾಕಿಕೊಂಡು ಸತ್ತನು.

            ಸೋಮಸುಂದರನು ಇದನ್ನೋದಿ ಸ್ವಲ್ಪಹೊತ್ತು ಏನೋ ಯೋಚಿಸಿ ತನ್ನ ಗುಮಾಸ್ತೆಯನ್ನು ಕರಸಿ ರಾಣೇಗಂಟಿನ ಪೋಲೀಸ್ ಅಧಿಕಾರಿಗೆ ತಕ್ಷಣವೇ ಭಾಸ್ಕರನ ನ್ನು ಕಳುಹಿಸುವ ಹಾಗೆ ತಂತಿಯನ್ನು ಕೊಡುವಂತೆ ಆಜ್ಞಾಪಿಸಿದನು.

- ಮಾರನೇದಿನ ಒಂಭತ್ತುಗಂಟೆಯ ಸಮಯದಲ್ಲಿ ಸುಮಾರು ಇಪ್ಪತ್ತೈದು ವರ್ಷ ಪ್ರಾಯದ ಮನುಷ್ಯನೊಬ್ಬನು ಬಂದು ಸೋಮಸುಂದರನನ್ನು ನೋಡಲಪೇಕ್ಷಿ ಸಿದನು. ಸೋಮಸುಂದರನು ಅವನನ್ನು ಒಳಕ್ಕೆ ಬರುವಹಾಗೆ ಹೇಳಿ ತನ್ನ ಬೈಠಕಖಾ ನೆಯಲ್ಲಿ ಕಾದಿದ್ದನು. ಬಂದ ಮನುಷ್ಯನು ಸೋಮಸುಂದರನಿಗೆ ವಂದಿಸಿ ಅಲ್ಲೇ ಇದ್ದ ಒಂದು ವೇತ್ರಾಸನದಮೇಲೆ ಕುಳಿತುಕೊಂಡನು. ಸೋಮಸುಂದರನು ಅವನೇ ಭಾಸ್ಕರನಿರಬಹುದೆಂದು ಯೋಚಿಸಿ ಸ್ವಾಮಾ ಸೀವೇನೋ ಭಾಸ್ಕರರೆಂಬುವರು, ಎಂದು ಕೇಳಿದನು.

          ಹೊಸಮನುಷ್ಯ-ಹೌದು. ನಿಮ್ಮ ತಂತಿಯನ್ನು ನೋಡಿ ನನ್ನನ್ನು ಪೋಲೀಸ್ ಸೂಪರಿಂಟೆಂಡೆಂಟರು ಕಳುಹಿಸಿರುವರು. ನನ್ನನ್ನು ಕರೆಯಕಳುಹಿಸಿದ ಕಾರಣವೇನು?
    ಸೋಮಸುಂದರ-ಸ್ವಾಮಿಾ !ನಾನು ಏನು ಹೇಳಲಿ" ಎಂದು ಕಣ್ಣೀರು ಸುರಿಸುತ್ತಾ ತನ್ನ ಮಗನು ಕಾಣದೇಹೋದ ವಿಷಯವನ್ನೆಲ್ಲಾ ಕ್ರಮವಾಗಿ ತಿಳಿ ಸಿದನು.