ಮಧುಸೂದನ
9
ಅವನೂ ಅವರ ಹಾಗೆ ಜೂಜಾಟಗಳನ್ನು ಕಲಿತನು. ಯಾವಾಗ ಜೂಜಾಟವು ಬಂದಿತೋ ಆಗಲೇ ಕುಡುಕತನ ಮುಂತಾದ ದುರ್ನಡತೆಗಳು ಒಂದರ ಹಿಂದೆ ಒಂದಾಗಿ ಬಂದು ಬಿಟ್ಟವು. ತಂದೆಯು ಕಳುಹಿಸುತ್ತಿದ್ದ ಹಣವು ಸಾಲದೆ ಸ್ವಲ್ಪ ಕಾಲದಲ್ಲೇ ಇಪ್ಪತ್ತುಸಾವಿರ ರೂಪಾಯಿಗಳನ್ನು ಸಾಲವಾಗಿ ಆ ಸಂಘದ ಯಜಮಾನನಿಂದ ತರಬೇಕಾಗಿ ಬಂದಿತು. ಈ ವಿಷಯಗಳಾವುವೂ ನನ್ನ ಯಜಮಾನನಿಗೆ ತಿಳಿಯದು. ಮಧುಸೂದನನು ಇಷ್ಟು ಕೆಟ್ಟುಹೋಗಿದ್ದರೂ ವಿದ್ಯೆಯನ್ನು ಹಾಳುಮಾಡಿಕೊಳ್ಳದೆ ಎಫ್.ಎ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿದನು. ಅಷ್ಟಕ್ಕೆ ಅವನ ಇಂಗ್ಲೀಷ್ ವಿದ್ಯಾಭ್ಯಾಸವು ಸಾಕೆಂದು ಸೋಮಸುಂದರನು ಅವನನ್ನು ಕರತರಿಸಿ ಸಂಸ್ಕೃತವನ್ನು ಕಲಿಯುವಹಾಗೆ ವಿದ್ವಾಂಸರ ಕೈಕೆಳಗೆ ಬಿಟ್ಟನು. ಮಧುಸೂದನನು ಸಕಲ ವಿದ್ಯದಲ್ಲಿಯೂ ನೈಪುಣ್ಯವನ್ನು ಹೊಂದಿದನು. ಇಲ್ಲಿಗೆ ಬಂದಮೇಲೆ ಅವನಿಗೆ ತಾನು ಕಲ್ಕತ್ತಾ ನಗ ರದಲ್ಲಿ ನಡೆಸಿದ ಅಕೃತ್ಯಗಳೆಲ್ಲಾ ಮನಸ್ಸಿಗೆ ಹೊಳೆದು ಬಹಳ ಪಶ್ಚಾತ್ತಾಪಪಟ್ಟುಕೊಂಡು ತಂದೆಯ ಬಳಿ ತನ್ನ ಸಾಲದ ವಿಷಯವನ್ನು ಹೇಳುವುದಕ್ಕೆ ಹೆದರಿ ನನಗೆ ಎಲ್ಲವನ್ನೂ ತಿಳಿಯಪಡಿಸಿದನು. ಆ ಸಾಲದ ನಿಷಯವಾಗಿ ಅವನಿಗೆ ಆಗಾಗ್ಯೆ ಕಾಗದಗಳು ಬರುತ್ತಿದ್ದಹಾಗೆ ಕಂಡು ಬರುತ್ತದೆ. ಒಂದು ದಿವಸ ಅಂದರೆ ಈಗ ಹತ್ತುದಿವಸಗಳ ಕೆಳಗೆ ಒಂದುಕಾಗದವು ಬಂದಿತ್ತು. ಆ ಕಾಗದವು ಬಂದಾಗ ನಾನು ಅವನ ಕೊಠಡಿಯಲ್ಲೇ ಕುಳಿತಿದ್ದೆನು. ಅದು ಅವನಿಗೆ ತಿಳಿದಿರಲಿಲ್ಲ. ಅವನು ಕಾಗದವನ್ನು ಓದುತ್ತಾ ಓದುತ್ತಾ ಏನೇನೋಹೇಳಿಕೊಂಡನು. ಅವುಗಳಲ್ಲಿ ನನಗೆ ಕೇಳಿ ಬಂದವುಗಳು ಇಷ್ಟು ಮಾತ್ರ “ ಅಯ್ಯೋ ನಾನು ಇನ್ನೇನು ಮಾಡಲಿ. ನಮ್ಮ ತಂದೆಗೆ ತಿಳಿದು ಬಂದರೆ ಅವನೇ ನನ್ನುವನು. ನನ್ನ ವಿವಾಹಕಾಲವು ಸಮೀಪಿಸುತ್ತಾ ಬಂದಿತಲ್ಲಾ.. ಅವರೇನಾದರೂ," ಎಂದುಹೇಳಿ ನನ್ನ ಕಡೆತಿರುಗಿ ನನ್ನ ಮುಖವನ್ನು ನೋಡಿದನು. ತಕ್ಷಣವೇ ಅವನು ಕಾಗದವನ್ನು ಬಚ್ಚಿಟ್ಟು ನನ್ನನ್ನು "ಯಾವಾಗಬಂದೆ" ಎಂದು ಕೇಳಿದನು.
ಈ ರೀತಿಯಾಗಿ ಆ ಮುದುಕನು ತನ್ನನ್ನು ಕೇಳದೆಇದ್ದರೂ ಈವಿಷಯಗಳನ್ನೆಲ್ಲಾ ಹೇಳಿದನು. ಭಾಸ್ಕರನು ನಡುವೆ ಮಾತನಾಡದೆ ಆಗಾಗ್ಯೆ ತನ್ನ ಬುಕ್ಕಿನಲ್ಲಿ ಏನೇನೋ ಬರೆದುಕೊಳ್ಳುತ್ತಿದ್ದನು. ಕೃಷ್ಣನು ಮಾತನಾಡಿ ನಿಲ್ಲಿಸಿದ ಮೇಲೆ ನಗುಮುಖದಿಂದ ಅವನ ಕಡೆಗೆ ತಿರುಗಿ « ಅಯ್ಯಾ ನೀನು ಈಗ ಹೇಳಿದ ವಿಷಯಗಳೆಲ್ಲಾ ಬಹಳಸಹಾಯ ಮಾಡಿದವು. ನಿನಗೆ ಮಧುಸೂದನನು ಕಾಗದಗಳನ್ನಿಟ್ಟಿದ್ದ ಸ್ಥಳವು ಗೊತ್ತಿದೆಯೋ" ಎಂದು ಕೇಳಿದನು.
2