10 ಕಾದಂಬರೀ ಸಂಗ್ರಹ
ಕೃಷ್ಣ:--ಆಹಾ ಗೊತ್ತಿದೆ. ಅವನು ಬಹಳ ದಿವಸದಿಂದ ಕಾಗದಗಳನ್ನಿಡುತ್ತಿದ್ದ ಸ್ಥಳವು ನನಗೆಗೊತ್ತಿದೆ. ಬೇಕಾಗಿದ್ದರೆ ಈಗಲೇ ತೋರಿಸುವೆನು. ಭಾಸ್ಕರ:--ಆಗಲಿ. ಮೊದಲು F ಒಂದುಪ್ರಶ್ನೆಗೆ ಉತ್ತರಕೊಡು. ಈ ನಿಮ್ಮ ಮಧುಸೂದನನಿದ್ದ ಕೊಠಡಿಗೆ ಯಾವುದಾದರೂ ಗುಪ್ತಮಾರ್ಗವಿರುವುದೋ ? ಕೃಷ್ಣ:--(ಸ್ವಲ್ಪಹೊತ್ತು ಯೋಚಿಸಿ) ಆಹಾ! ಈಗ ಜ್ಞಾಪಕಕ್ಕೆಬಂದಿತು. ಈಗ ಒಂದು ತಿಂಗಳ ಕೆಳಗೆ ಮಧುಸೂದನನಿಗೆ ಅವನ ಕೊಠಡಿಯಲ್ಲಿದ್ದ ಗುಪ್ತ ಮಾರ್ಗದ ವಿಷಯವನ್ನು ತಿಳಿಸಿದೆನು. ಈಗ ನೀವು ಕೇಳದಿದ್ದರೆ ಅದರ ವಿಷಯವು ನನಗೆ ಜ್ಞಾಪಕವೇ ಬರುತ್ತಿರಲಿಲ್ಲ. ಆ ಗುಪ್ತಮಾರ್ಗವು ಬಹ ವಿಚಿತ್ರವಾದದ್ದು. ಮೇಲಿನಿಂದ ನೋಡುವುದಕ್ಕೆ ಏನೂ ತಿಳಿಯುವುದಿಲ್ಲ. ಎಲ್ಲಾ ಗುಪ್ತ ಮಾರ್ಗಗಳಿಗೂ ಇರುವಹಾಗೆ ಮೇಲುಗಡೆ ಯಾವವಿಧವಾದ ಕೀಲಾಗಲೀ ಮೊಳೆಯಾಗಲೀ ಇಲ್ಲ. ಆದ್ದರಿಂದ ನೀವು ಒಂದುವರ್ಷವೆಲ್ಲಾ ಹುಡುಕಿದರೂ ಏನೂ ತಿಳಿದುಬರುವುದಿಲ್ಲ. ಆ ಗುಪ್ತಮಾರ್ಗವು ಆ ಕೊಠಡಿಯಲ್ಲಿರುವ ಮಂಚದ ಕೆಳಗಿದೆ.(ಭಾಸ್ಕರನು ತಾನು ಸಂದೇಹಪಟ್ಟದ್ದು ನಿಜವಾಯಿತೆಂದು ಯೋಚಿಸಿದನು.) ಅದನ್ನು ತೆರೆಯುವುದು ಹೇಗೆಂದು ನೀವು ಯೋಚಿಸಬಹುದು. ಆ ನಮ್ಮ ಮನೆಗೆ ಅರ್ಧ ಫರಲಾಂಗ್ ದೂರದಲ್ಲೊಂದು ಪುರಾತನ ಮನೆಯಿರುವುದು. ಆ ಮನೆಯಲ್ಲಿ ಎರಡು ಕೊಠಡಿಗಳಿರುವುವು. ಅವುಗಳಲ್ಲಿ ಮೊದಲನೇ ಕೊಠಡಿಯಲ್ಲಿ ಮಹಡಿ ಹತ್ತುವುದಕ್ಕೆ ಮೆಟ್ಟಲುಗಿರುವವು. ಆ ಮೆಟ್ಟಿಲುಗಳ ತಳದಲ್ಲಿ ಒಂದು ಗುಪ್ತ ಮಾರ್ಗವಿರುವದು. ಅದನ್ನು ಸುಲಭವಾಗಿ ಒಂದು ಹಾರೆಯ ಸಾಹಾಯದಿಂದ ನಾಟಿ ತೆಗೆಯಬಹುದು. ಅಲ್ಲಿಂದ ಮಧುಸೂದನನ ಕೊಠಡಿಯೊಳಕ್ಕೂ ಒಂದು ಸುರಂಗ ಮಾರ್ಗವಿರುವುದು. ಈ ಮಧುಸೂದನನ ಕೊಠಡಿಯಲ್ಲಿರುವ ಗುಪ್ತ ಮಾರ್ಗದ ಬಾಗಲು ದುಂಡಾಗಿ ರುವದು. ಅದರಮೇಲೆ ಮಣ್ಣು ಮೆತ್ತಲ್ಪಟ್ಟಿರುವದು. ಅದಕ್ಕೆ ಅಡಿಯಲ್ಲಿ ಚಿಲುಕವಿರುವುದು. ಆ ಚಿಲುಕವನ್ನು ತೆಗೆದು ಅಡಿಯಲ್ಲಿರುವ ಪಿಡಿಯನ್ನುಹಿಡಿದು ಆ ಬಾಗಿಲನ್ನು ಎತ್ತಿದರೆ ಅದು ಮೇಲಕ್ಕೆ ಬಂದು ಒಂದುಗುಂದಾದ ಮಾರ್ಗವು ಕಾಣುವುದು. ಈ ವಿಧವಾದ ಸುರಂಗಮಾರ್ಗವು ಈಗ್ಯೆ ಇನ್ನೂರು ವರ್ಷಗಳಹಿಂದೆ ಮಾಡಲ್ಪಟ್ಟಿತು. ಆ ಕಾಲದಲ್ಲಿ ಹಿಂಡಾಲಿಗಳು ಪಂಜುಕಳ್ಳರು ಇವರುಗಳ ಹಾವಳಿಯಿಂದಲೂ ಮತ್ತು ಅನೇಕ ಪರದೇಶೀಯರು ದಂಡೆತ್ತಿ ಬಂದು ಐಶ್ವರ್ಯವನ್ನು ಕೊಳ್ಳೇಹೊಡೆದುಕೊಂಡು ಹೋಗುತ್ತಿದ್ದದ್ದರಿಂದಲೇ ಐಶ್ವರ್ಯವಂತರು ತಮ್ಮ ಹಣದ ವಿಷಯವಾಗಿ ಯಾವಾಗಲೂ ಹೆದರಿಕೆಯಿಂದಲೇ ಇರುತ್ತಿದ್ದರು. ಆಗ ವಾಸವಪುರದ ಜಹಗೀರ್ದಾರರೊಬ್ಬರು ಯಾರಿಗೂ ತಿಳಿಯದ ರೀತಿ ಈ ರೀತಿ ಸುರಂಗ ಮಾರ್ಗವನ್ನೂ ಗುಪ್ತಮಾರ್ಗಗಳನ್ನೂ ರಚಿಸಿ ಅದರಲ್ಲಿ ತಮ್ಮ