ಈ ಪುಟವನ್ನು ಪರಿಶೀಲಿಸಲಾಗಿದೆ
18
ಕಾದಂಬರೀ ಸಂಗ್ರಹ



^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^
ಮೇಜು (Round Tables) ಗಳ ಮೇಲೆ ಬ್ರಾಂದಿ, ವೈನು ಮುಂತಾದವುಗಳೂ,
ಗಾಜಿನ ಬಟ್ಟಳುಗಳೂ ಇಡಲ್ಪಟ್ಟಿದ್ದವು. ಮನೆಯ ತುಂಬ ಹೊಗೆಯ ಬತ್ತಿಯ
ಧೂಮ್ರವು ತುಂಬಿಕೊಂಡಿದ್ದಿತು. ಒಂದೊಂದು ಕಡೆಯಲ್ಲಿ ಐದಾರು ಜನಗಳಾಗಿ
ಗುಂಪುಕೂಡಿಕೊಂಡು ಇಸ್ಪೀಟುಗಳನ್ನಾಡುತ್ತಲೂ, ಇಲ್ಲವೆ ನಾನಾವಿಧವಾದ ಜೂಜಾ
ಟಗಳನ್ನಾ ಡುತ್ತಲೂ ಇದ್ದರು. ಜೂಜಾಡುತ್ತಿದ್ದ ಜನಗಳ ಕೂಗೂ, ಅವರು ಎಸೆದಾ
ಡುತ್ತಿದ್ದ ಹಣಗಳ ಧಣ್ ಧಣ್ ನಾದವೂ, ಮದ್ಯಪಾಯಿಗಳ 'ಎಲ್ಲಿ ಆ ಓಲ್ಡು
ವೈನ್ (old svine) ಕೊಡು, ಈ ಬಟ್ಟಲಿಗೆ ಇನ್ನಿಷ್ಟುಹಾಕು” ಎಂಬ ಆರ್ಭಟವೂ,
ಮತ್ತೆ ಕೆಲವರ, ವೈದೀಕರನ್ನು ಹೇಳನಮಾಡತಕ್ಕಂಥಾ ನಿಂದನಾ ವಾಕ್ಯಗಳೂ
ಕೇಳಿಬಂದು ಆ ಮನೆಯು ಮದ್ಯಪಾಯಿಗಳೂ ಮತ್ತು ಸೋಮಾರಿಗಳೂ ಆದವರ
ದೊಡ್ಡಗುಹೆಯಂತೆ ಕಂಡುಬರುತ್ತಿತ್ತು, ಇವರನ್ನೆಲ್ಲಾ ಬಿಟ್ಟು ಒಬ್ಬ ಯೌವನಸ್ಥನು
ಸ್ವಲ್ಪ ದೂರದಲ್ಲೇ ಇದ್ದ ಒಂದು ಆಸನದಮೇಲೆ ಕುಳಿತುಕೊಂಡು ತಲೆಯನ್ನು ಬಗ್ಗಿ
ಸಿಕೊಂಡು ಏನೇನೋ ಯೋಚಿಸುತ್ತಿದ್ದನು. ಅವನು ಸುಮಾರು ಮೂವತ್ತೈದುವರ್ಷ
ವಯಸ್ಸಿನಂತೆ ಕಾಣಬಂದನು. ಆಗಾಗ್ಗೆ ಯಾರಾದರೂ ಬಂದು ಕರೆದರೆ ಆಮೇಲೆ
ಬರುವೆನೆಂದು ಹೇಳುತ್ತಿದ್ದನು. ಅವನು ಯಾರೆಂಬುವಾಗಲೀ, ಯಾಕೆ ಹಾಗೆ ಕುಳಿತಿರು
ತ್ತಾನೆಂಬುದಾಗಲೀ ಯಾರಿಗೂ ತಿಳಿಯದು.
ಸುಮಾರು ರಾತ್ರಿ ಏಳುವರೆಗಂಟೆಯ ಹೊತ್ತಿಗೆ ಆಟಗಳೆಲ್ಲವೂ ಮುಗಿದವು.
ಅನೇಕರು ತಮ್ಮ ಹಣವೆಲ್ಲಾ ಹೋಯಿತೆಂದು ಗೊಣಗುಟ್ಟಿಕೊಳ್ಳುತ್ತಿದ್ದರು. ಮದ್ಯವೂ
ಮುಗಿದುಹೋಗಿದ್ದಿತು. ಹೊಸಮದ್ಯವು ತರಲ್ಪಟ್ಟಿತು. ಎಲ್ಲರೂ ಮದ್ಯವನ್ನು ಪಾನ
ಮಾಡಿದರು. ವ್ಯಸನಾಕ್ರಾಂತನಾದ ಮನುಷ್ಯನೂ ಅಲ್ಲಿದ್ದವನೊಬ್ಬನ ಬಲವಂತ
ದಿ:ದ ಎರಡು ಮೂರು ಬಟ್ಟಲು ದ್ರಾಕ್ಷಾರಸವನ್ನು ಕುಡಿದನು. ಕ್ಷಣಮಾತ್ರ
ದಲ್ಲೇ ಗುಂಡಾದ ಮೇಜುಗಳೆಲ್ಲಾ ತೆಗೆಯಲ್ಪಟ್ಟು ಕುರ್ಚಿಗಳು ಸಾಲುಸಾಲಾಗಿ
ಇಡಲ್ಪಟ್ಟವು. ಒಂದುಭಾಗದಲ್ಲಿ ಒಂದು ಎತ್ತರವಾದಸ್ಥಳದಲ್ಲಿ ಮೂರುಕುರ್ಚಿಗಳಿ
ದ್ದವು. ಎಲ್ಲರೂ ಕುರ್ಚಿಗಳಮೇಲೆ ಕುಳಿತುಕೊಂಡರು. ಆಗ ಒಬ್ಬ ತರುಣನೆದ್ದು
ಈ ದಿವಸದ ಸಂತೋಷ ಕೂಟಕ್ಕೆ ನಮ್ಮ ಸಹೋದರರಾದ ಬಿ. (B) ಕೂಟದ ಮುಖ್ಯ
ಸ್ಥರನ್ನು ಅಧಿಪತಿಗಳಾಗಿರಬೇಕೆಂದು ನಾನು ಕೋರುತ್ತೇನೆ ಎನಲು ಎಲ್ಲರೂ ಹಾಗೇ
ಆಗಬೇಕೆಂದು ಒಪ್ಪಿದರು. ಆಗ ಸುಮಾರು ಮುವ್ವತ್ತು ವಯಸ್ಸಿನ ಮನುಷ್ಯನೊಬ್ಬನು
ಎದ್ದು ಹೋಗಿ ಎತ್ತರವಾದ ಸ್ಥಳದಲ್ಲಿ ಕುಳಿತನು. ಕೂಡಲೇ ಈ ಯಂ (M) ಕೂಟದ
ಮುಖ್ಯಸ್ಥನು ವ್ಯಸನಾಕ್ರಾಂತನಾಗಿ ಕುಳಿತಿದ್ದ ಮನುಷ್ಯನನ್ನೂ ಸಂಗಡ ಕರೆದು