ಈ ಪುಟವನ್ನು ಪರಿಶೀಲಿಸಲಾಗಿದೆ
ಮಧುಸೂದನ
19



^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^
ಕೊಂಡು ಉಳಿದಿದ್ದ ಕುರ್ಚಿಗಳಲ್ಲಿ ಅವರನ್ನೂ ಕೂರಿಸಿ ತಾನೂ ಕುಳಿತನು. ಅಗ್ರಾಸ
ನಾಧಿಪತಿಯು 'ಎಂ' ಕೂಟದ ಮುಖ್ಯಸ್ಥನನ್ನು ಕಳೆದ ವರ್ಷದ ರಿಪೋರ್ಟನ್ನು ಓದು
ವಹಾಗೆ ಕೇಳಿದನು. ಅವನು ತನ್ನಾಸನದಿಂದ ಎದ್ದುನಿಂತು ಈ ರೀತಿಯಾಗಿ ಹೇಳತೊ
ಡಗಿದನು.
ಸಹೋದರರೇ!
ನಮ್ಮ ಸಂಘವು ಸ್ಥಾಪಿಸಲ್ಪಟ್ಟು ಇಂದಿಗೆ ಐದುವರ್ಷಗಳಾದುವು. ಈ ಐದು
ವರ್ಷಗಳಲ್ಲಿ ನಾವು ಎಷ್ಟೋ ಕೆಲಸವನ್ನು ಮಾಡಿರುವೆವು. ಮುಖ್ಯವಾಗಿ ಹೋದ
ವರ್ಷದಲ್ಲಿ ಅನೇಕ ಕೆಲಸಗಳನ್ನು ಮಾಡಿರುವೆವು. ಅವುಗಳಲ್ಲಿ ಮುಖ್ಯವಾದವುಗಳಾ
ವುವೆಂದರೆ:----ನಮ್ಮ ಸಂಘದಲ್ಲಿ ನಾಲ್ವರು, ವಿಧವೆಗಳನ್ನು ವಿವಾಹಮಾಡಿಕೊಂಡರು.
ದೇಶೋನ್ನತಿಗಾಗಿ ಯಾವ ಸಹಾಯವನ್ನೂ ಮಾಡದೇ ಇದ್ದ ಶುದ್ಧಲೋಭಿಯಾದ
ಚರ್ಮದ ವ್ಯಾಪಾರಿಯೊಬ್ಬನನ್ನು ಸೂರೆಗೊಂಡೆವು. ನಮ್ಮವರಿಗೆ ರಿವಾಲ್ವರುಗಳು
ಸಾಲದೇ ಇದ್ದದ್ದರಿಂದ ಒಂದು ಕಂಪನಿಯನ್ನು ಲೂಟಿಮಾಡಿ ಐವತ್ತು ರಿವಾಲ್ವರುಗ
ಳನ್ನೂ ಅನೇಕ ತೋಟಾಗಳನ್ನೂ ಕದ್ದು ತಂದೆವು. ನಮ್ಮ ಮೆಂಬರ್‌ಗಳು ಇಪ್ಪತ್ತರಿಂದ
ಇಪ್ಪತ್ತೈದಕ್ಕೇರಲ್ಪಟ್ಟರು. ಖರ್ಛು ಕಳೆದು ಈಗ ೧೦ಸಾವಿರ ರೂಪಾಯಿ ಉಳಿದಿರುವುದು.
ಇದೋ ನನ್ನ ಪಕ್ಕದಲ್ಲಿ ಕುಳಿತಿರುವವರೊಬ್ಬರು ನಮ್ಮ ಸಂಘಕ್ಕೆ ಹೊಸಬರು. ಇವರು
ಮಹಾದೈಶ್ವರ್ಯ ಸಂಪನ್ನರು. ಇವರು ಸ್ವಲ್ಪ ಕಾಲದಲ್ಲೇ ನನ್ನ ಮಗಳನ್ನು ವಿವಾಹಮಾಡಿ
ಕೊಳ್ಳುವುದಾಗಿ ಒಪ್ಪಿರುತ್ತಾರೆ. ಅವರ ಈಗಿರುವ ಆಕಾರವು ನಿಜವಾದದ್ದಲ್ಲ.
ಇನ್ನೂ ಸ್ವಲ್ಪ ಕಾಲ ಹೀಗಿದ್ದು ಆ ಮೇಲೆ ತಮ್ಮ ನಿಜರೂಪವನ್ನು ಧರಿಸುವರು.
ಮುಂದೆ ನಮ್ಮ ಸಂಘವನ್ನು ಕಾಪಾಡುವುದಾಗಿ ವಾಗ್ದಾನಮಾಡಿರುತ್ತಾರೆ. ಅವರು
ಯಾರೆಂಬುದಾಗಲೀ, ಅವರ ಹೆಸರೇನೆಂಬುದಾಗಲೀ ಇನ್ನೂ ಸ್ವಲ್ಪಕಾಲ ಯಾರಿಗೂ
ತಿಳಿಯದೇ ಇರುವುದೇ ಒಳ್ಳೇದು. ಈಗ ನಿಮ್ಮನ್ನು ನಾನು ಒಂದು ಪ್ರಶ್ನೆಯನ್ನು
ಕೇಳಬೇಕೆಂದಿರುತ್ತೇನೆ. ಅದಕ್ಕೆ ದಯವಿಟ್ಟು ಸರಿಯಾದ ಉತ್ತರವನ್ನು ಕೊಡಿರಿ.
ಒಂದು ಮದುವೆಯು ಮಾಂಗಲ್ಯಸೂತ್ರಧಾರಣಕ್ಕೆ ಮುಂಚೆ ನಿಂತು ಹೋದರೆ ಆಗ
ಆ ಹುಡುಗಿಯು ವಿವಾಹಿತಳೇ, ಅಥವಾ, ಅವಿವಾಹಿತಳೇ? ಒಂದುವೇಳೆ ಹಾಗೆ ವಿವಾಹ
ಭಂಗವಾದ ಮೇಲೆ ಆ ಕನ್ಯೆಯು ಋತುವಾದರೆ ಏನುಮಾಡುವುದು ?
ಆಗ ಅನೇಕರು ಎದ್ದು ನಿಂತು ಹಾಗೆ ನಿಂತುಹೋದ ಮದುವೆಯು ಶಾಸ್ತ್ರಗಳಲ್ಲಿ
ವಿವರಿಸಿರುವ ಹಾಗೂ ಮಾಂಗಲ್ಯಸೂತ್ರ ಕಟ್ಟದೇ ಇದ್ದದ್ದರಿಂದ ವಧೂವರರಿಗೇನೂ
ಸಂಬಂಧವೇ ಇಲ್ಲವೆಂತಲೂ ಹಾಗೆ ಕನ್ಯೆಯು ಋತುವಾದರೆ ಅವಳು ಹಿಂಡುಗಳ