ಮಧುಸೂದನ 23 ಅದನ್ನು ಕೇಳದೇಹೋಗಲು ಮಾರನೇ ದಿವಸದಿಂದ ಮಧುಸೂದನನೂ ಅವನ ಸ್ನೇಹಿ ತರೂ ಇಲ್ಲಿಗೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಆ ಮೇಲೆ ಅವರೆಲ್ಲಾ ಏನಾದರೋ ನನಗೆ ತಿಳಿಯದು. ಆದರೆ ಅವರಲ್ಲಿ ಕೆಲವರು ಈಗಲೂ ಅದೋ ಅಲ್ಲಿ ಕಾಣುವ ಮದ್ಯದಂಗಡಿಗೆ ರಾತ್ರೀ ಕಾಲದಲ್ಲಿ ಬರುತ್ತಾರೆಂದು ಕೇಳಿ ಬಲ್ಲೆನು. ಭಾಸ್ಕರ:__ನಾನು ಇಷ್ಟೇ ತಿಳಿದುಕೊಳ್ಳಬೇಕಾಗಿದ್ದದ್ದು ಎಂದು ಯೋಚಿಸಿ ನಾನು ಹೋಗಿ ಬರುವೆನು ಎಂದು ಆತನ ಅಪ್ಪಣೆಪಡೆದು ಹೊರಟು ಹೋದನು. ಭಾಸ್ಕರನು ನೆಟ್ಟಗೆ ಮನೆಗೆ ಬಂದು ಗೋವಿಂದನನ್ನು ಒಬ್ಬ ಕುಡುಕನ ಉಡು ಪನ್ನು ತರುವಂತೆ ಕೇಳಿಕೊಂಡನು. ಅದರಂತೆ ಮಾರನೇ ದಿವಸ ಗೋವಿಂದನು ಒಂದು ಹಳೆಯ ಉಡುಪನ್ನು ತಂದು ಕೊಟ್ಟನು. ಭಾಸ್ಕರನು ತನ್ನ ರೂಪವನ್ನು ಬದಲಾಯಿಸಿ ಕೊಂಡು ಉದ್ದವಾದ ಕೃತಕದಾಡಿಗಳನ್ನೂ ಮೀಶೆಗಳನ್ನೂ ಕಟ್ಟಿಕೊಂಡು ಮುಖ ಕ್ಕೆಲ್ಲಾ ಯಾವದೋ ಒಂದು ವಿಧವಾದ ಬಣ್ಣವನ್ನು ಬಳಿದು ಕೊಳ್ಳಲು ಮುಖವು ಘೋರವಾಗಿ ಕಾಣುತ್ತಾ ನೋಡುವುದಕ್ಕೆ ಠಕ್ಕನ ಮುಖದಂತೆ ಕಾಣುವಂತೆಮಾಡಿ ಕೊಂಡು ಗೋವಿಂದನು ತಂದು ಕೊಟ್ಟ ಉಡುಪನ್ನು ಧರಿಸಿದನು. ಆಗ ಅವನನ್ನು ನೋಡಿದ್ದೇ ಆದರೆ ಯಾರೇ ಆಗಲೀ ಅವನನ್ನು ಒಬ್ಬ ಕಳ್ಳನೆಂದು ಹೇಳುತ್ತಿದ್ದರು. ಸಾಯಂಕಾಲ ಏಳುಘಂಟೆಯವರಿಗೂ ಕಾದಿದ್ದು ಆ ಮೇಲೆ ಇನ್ನೂರು ಮುನ್ನೂರು ರೂಪಾಯಿಗಳನ್ನು ತೆಗೆದುಕೊಂಡು ತನ್ನ ಒಳಜೋಬಿನಲ್ಲಿ ಭದ್ರಪಡಿಸಿಕೊಂಡು ಎರಡು ರಿವಾಲ್ವರುಗಳನ್ನೂ ಒಳಗಿಟ್ಟು ಕೊಂಡು ಹೊರಕ್ಕೆ ಹೊರಟು ನೆಟ್ಟಗೆ ಕಾಳೇಬೀದಿಗೆ ಹೋದನು. ಅಲ್ಲಿಗೆ ಹೋಗುವಹೊತ್ತಿಗೆ ಎಂಟುಗಂಟೆಯ ಸಮಯವಾಗಿದ್ದಿತು. ಅಲ್ಲಿಂದ ಭಾಸ್ಕರನು ಕೂಗಾಡುತ್ತಲೂ ಕುಣಿಯುತ್ತಲೂ, ಹಾಡುತ್ತಲೂ, ಬಾಯಿಗೆ ಬಂದಹಾಗೆಲ್ಲಾ ಮಾತನಾಡುತ್ತಲೂ ಸಂಪೂರ್ಣವಾಗಿ ಕುಡಿದವನಂತೆ ನಟಿಸುತ್ತಾ ಅಲ್ಲಲ್ಲಿ ಬಿದ್ದೇಳುತ್ತಾ ಕೊನೆಗೆ ಆ ಬೀದಿಯಲ್ಲಿದ್ದ ಮದ್ಯದಂಗಡಿಯನ್ನು ಪ್ರವೇಶ ಮಾಡಿದನು. ಮದ್ಯಪಾಯಿಗಳಿಗಾಗಿಯೇ ಕಾದಿರತಕ್ಕಂಥಾ ಅಲ್ಲಿಯ ಜನಗಳು ಇವನನ್ನು ಎದುರುಗೊಂಡು ಬಂದು ಒಳಕ್ಕೆ ಕರೆದುಕೊಂಡು ಹೋದರು. ಸಂಘಸಂಸ್ಕರಣ ಕರ್ತರೂ ಇತರರೂ ಸೇರಿ ಬಾಲ್ಯ ವಿವಾಹದಿಂದಲೂ ಮತ್ತು ಇತರ ಆಚಾರಗಳಿಂದಲೂ ಇಂಡಿಯಾ ದೇಶದ ಮರಣವು ಹೆಚ್ಚಾಗಿದೆಯೆಂದು ಅನ್ಯಾ ಯವಾಗಿ ಸರಿಯಾದ ಕಾರಣಗಳಿಲ್ಲದೇನೇ ಹೇಳುತ್ತಾರೆ. ಸರಿಯಾಗಿ ಯೋಚಿಸಿ ನೋಡುವಲ್ಲಿ ಬಾಲ್ಯ ವಿವಾಹದಿಂದ ಮರಣಗಳೇನೂ ಹೆಚ್ಚಿಲ್ಲವು. ಮದುವೆಯಾಗ ತಕ್ಕಂಥಾ ಹೆಣ್ಣೇನೂ ತನ್ನ ಗಂಡನನ್ನು ಕಚ್ಚಿ ಕೊಲ್ಲುವುದಕ್ಕೆ ಸರ್ಪವಲ್ಲವು. ವಿವಾಹ
ಪುಟ:ನನ್ನ ಸಂಸಾರ.djvu/೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.