ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಕಾದಂಬರೀ ಸಂಗ್ರಹ

ವಾದ ಕೂಡಲೇ ಗಂಡನಾದವನು ಸಾಯ ಬೇಕೆಂದು ಯಾವಶಾಸ್ತ್ರದಲ್ಲಿ ಯೂ, ಯಾವ ಆರೋಗ್ಯ ಸೂತ್ರಗಳಲ್ಲಿ ಯೂ ಹೇಳಿಲ್ಲವು, ವಿವಾಹ ನೂಡಿಕೊಳ್ಳತಕ್ಕಂಥಾ ಹುಡುಗ ನಾದವನು ತನ್ನ ದೇಹವನ್ನು ಸರಿಯಾಗಿಟ್ಟು ಕೊಂಡಿದ್ದು ತನ್ನ ಬ್ರಹ್ಮಚರ್ಯವನ್ನು ಕಾಪಾಡಿ ಕೊಂಡಿದ್ದರೆ ಅವನು ವಿವಾಹವಾದಕೂಡಲೇ ಹೇಗೆ ಸಾಯುವನು? ಇದನ್ನು ಯೋಚಿಸದೆ ಬಾಲ್ಯ ವಿವಾಹವು ಮರಣಕ್ಕೆ ಕಾರಣವಾಗಿದೆಯೆಂದು ಹೇಳಿದರೆ ಹೇಗೆ ಅದನ್ನು ನಂಬಬಹುದು. ಬಾಲ್ಯವಿವಾಹವನ್ನು ಬಿಟ್ಟು ಪ್ರೌಢಾವಿವಾಹ ಮಾಡಬೇ ಕೆಂಬುವರ ಸಂಖ್ಯೆಯು ಈಗ ಅಧಿಕವಾಗಿರುವದು. ಒಂದು ಭಾಗವಾದ ಬ್ರಾಹ್ಮ ಣರಲ್ಲೂ ವೈಶ್ಯರಲ್ಲೂ ಬಾಲ್ಯ ವಿವಾಹವು ಕಂಡುಬರುವುದು. ಆದರೆ ಸರಿಯಾಗಿ ವಿಚಾರಿಸಿ ನೋಡಿದ್ದರಲ್ಲಿ ಇತರ ಜಾತಿಯವರಲ್ಲಾಗುವಷ್ಟು ಮರಣವು ಇವರಲ್ಲಾ ಗುವುದಿಲ್ಲವೆಂದು ತಿಳಿದು ಬಂದಿದೆ. ಹಾಗಾದರೆ ಚಿಕ್ಕ ವಯಸ್ಸಿನ ಮರಣಕ್ಕೇನು ಕಾರಣ? ಸ್ವಲ್ಪ ಯೋಚಿಸಿನೋಡಿದರೆ ತಿಳಿಯುವುದು.ಇತರ ಜಾತಿಯವರು ಅಧಿಕ ವಾಗಿ ಮದ್ಯವನ್ನು ಪಾನಮಾಡುವುದರಿಂದಲೂ ಮಾದಕ ಪದಾರ್ಥಗಳನ್ನು ತಿನ್ನು ವು ದರಿಂದಲೂ ಬಾಲಾದಿಗಳೂ ಕೂಡ ದೇಹವನ್ನು ಹಾಳುಮಾಡಿಕೊಳ್ಳುತ್ತಾರೆ. ಈ ಮದ್ಯದಂಗಡಿಗಳು ಜನನಿಬಿಡವಾದ ಸ್ಥಳಗಳಲ್ಲಿರುವುದರಿಂದ ಅನೇಕರು ಅವುಗಳ ಆಶೆಯೆಂಬ ಬಲೆಗೆ ತುತ್ತಾಗುತ್ತಾರೆ. ಸಂಘಸಂಸ್ಕರಣ ಕರ್ತರು ಯಾವ ಕೆಡು ಕನ್ನೂ ಮಾಡದ ಬಾಲ್ಯ ವಿವಾಹಾದಿಗಳ ವಿಷಯವನ್ನು ಬಿಟ್ಟು ಕಣ್ಣೆದುರಿಗೇ ಕಾಣು ತ್ತಿರುವ ಈ ಕೆಟ್ಟ ಕುಡಿತವನ್ನೂ, ಮದ್ಯದಂಗಡಿಗಳನ್ನೂ ನಾಶಪಡಿಸುವುದಕ್ಕೆ ಪ್ರಯತ್ನ ಪಡಲಿ! ಆದರೆ ಇದು ಸರ್ಕಾರದವರಿಗೆ ಸೇರಿದ ವಿಷಯ. ಅವರೊಡನೆ ಹೆಣ ಗಾಡಲು-ಇವರಿಗೆ ಧೈರ್ಯಸಾಲದು. ಭಾಸ್ಕರನು ಒಳಕ್ಕೆ ಹೋಗಿ ಸುತ್ತಲೂ ನೋಡಿದನು. ಒಂದು ಮೂಲೆಯಲ್ಲಿ ಗೌರವಸ್ಥನಂತೆ ಕಂಡು ಬರುತ್ತಿದ್ದವನೊಬ್ಬನು ಕುಳಿತಿರುವುದನ್ನು ನೋಡಿ ತೂರಾಡಿ ಕೊಂಡು ಅವನಬಳಿ ಹೋಗಿ ಕುಳಿತುಕೊಂಡು ಏನೇನೋ ಮಾತನಾಡ ತೊಡಗಿದನು. ಅಲ್ಲಿ ಕುಳಿತಿದ್ದ ಮನುಷ್ಯನು ಇವನನ್ನು ನೋಡಿ ಇಂಗ್ಲೀಷಿನಲ್ಲಿ ನೀನು ಯಾರು who are you) ಎಂದು ಕೇಳಿದನು. ಅದಕ್ಕೆ ಭಾಸ್ಕರನು ಅರ್ಧ ಇಂಗ್ಲೀಷಿನಿಂದಲೂ ಅರ್ದ ಹಿಂದೂಸ್ಥಾನದಿಂದಲೂ ಅರ್ಧರ್ಧ ಮಾತುಗಳಾಗಿ " ನಾನೇ... ನಾನು ನಾನೇ ಗೊತ್ತಿಲ್ಲವೇ ನನ್ನ ಹೆಸರು... ನಾನು...ನಾನೇ ನೀಲಕಂಠಬಾಬು...ನೀನ್ಯಾರು ನಿನ್ನಲ್ಲಿ ದುಡ್ಡಿದೆಯೋ ಎಲ್ಲಿ. ದಾಹವಾಗುತ್ತೆ. ಮದ್ಯವನ್ನು ಕೊಡಿಸು ನೋಡೋಣ" ಎಂದನು. ಮನುಷ್ಯ:-ಅಯ್ಯಾ ನೀಲಕಂಠ ಬಾಬು ಆಗಲೇ ಅತಿಯಾಗಿ ಕುಡಿದಿರುವೆ. ಇನ್ನೂ ಬೇಕೇ? ನಾನು ಯಾರಾದರೆ ನಿನಗೇನು ? ಬೇಕಾಗಿದ್ದರೆ ನಿನಗೆ ಕುಡಿಯುವು