ಕವಿಚರಿತ್ರೆ' ಹ ಆ ಈ ಗ್ರಂಥಕರ್ತನು ನೇಮಿಚಂದ್ರನು. ಈತನು ತಾನು ಬರೆದ ಲೀಲಾವತೀ ಗ್ರಂಥದ ಕೊನೆಯಲ್ಲಿ ಲಕ್ಷ್ಮಣದೇವನು ರಾಜನೆಂದೂ, ನೇಮಿಚಂದನೆ ಕವೀ ಶ್ವರನೆಂದೂ ಹೇಳಿಕೊಂಡಿದ್ದಾನೆ. ಇದರಿಂದ ಕೆ ಎಯು ಲಕ್ಷ್ಮಣದೇವನ ಆಶ್ರಿತನಾಗಿ ದ್ವಿರಬಹುದು. ಈ ಗ್ರಂಥದ ಆಶಾ ಸ೦ಸ್ಕೃ ಗಜ್ಯಗಳಲ್ಲಿ... ವೀರಬಲ್ಲಾಳದೇವಪ್ರಸಾದಾಸಾಧಿತ ಮಹಾಪ್ರಧಾನಪದವೀರಾಜಿತ ಸೆಜ್ಜೆವಳ್ಳ ಪದ್ಮನಾಭ ದೇವಕಾರಿತಂ ” ಎಂದು ಹೇಳಿಕೊಂಡಿದ್ದಾನೆ. ವೀರ ಬಲ್ಲಾಳನು ಕ್ರಿ ಶ. 1173-1919 ರವರೆಗೆ ಆಳಿದಂತೆ ತಿಳಿಯದಿರು ತದೆ. ಆದುದರಿಂದ ಈ ಕವಿಯು ಸುಮಾರು ಈ ಕಾಲದಲ್ಲಿಯೇ ಎಂದರೆ 12 ನೆಯ ಶತಮಾನದ ಅಂತ್ಯಭಾಗದಲ್ಲಿ ಇದ್ದಿರಬೇಕು. ಸೆಜ್ಜೆವಸದ ನಾಭನ ಸಹಾಯದಿಂದ ಈತನು ಆಸ್ಥಾನಪಂಡಿತನಾಗಿರಬಹು ದೆಂದು ತೋರುತ್ತದೆ. ಈತನು ತಾನು ಚತುರ್ಭಾಷಾಚಕವರ್ತಿ ಯೆಂದೂ ಹೇಳಿಕೊಂಡಿ ದನೆ. ಇದೂ ಅಲ್ಲದೆ ತನ್ನ ಕತಾಸಾಮರ್ಥದ ವಿಷಯವಾಗಿ-ಕವಿರಾಜ ಮಲ್ಲ ನೆನಿಸಿದ ತನ್ನ : ನವ್ಯಕಾವ್ಯಕಮಲಾಕರದೆ ಸರಸ್ವತಿ ಮನೆ ಮುದದಿಂ ಜಲಕೇಳಿಯಾ.ತುವಳಿ: ಎಂದೂ, ಯುವತಿ ಸರಸ್ವತಿ ಪುರಾತನ | ಕವಿವಿರಹನ ದಳಿಲ್ಲ ನಿರ್ಮಳದಶನ | ಜೈ ವಿಕುಸುಮಿತರಸನಾಪ | ಅವತ್ತಲ್ಪದೊಳಿರ್ದು ಸುಕರಕವಿಶೇಖರನಾ || ?” ಎಂದೂ, ಮತ್ತು, ಸುಕರಕ ವಿಶೇಖರಂ ತಾ || ರ್ಕಿಕ ತಿಲಕಂ ಮಾನಮೇರು ಜಿನಶಾಸನಗೀ || ಪಕನಕಳಂಕಚರಿತ್ರಂ ಭಾವಕ | ಮುಕುರಂ ಕವಿರಾಜಮಲ್ಲನಪ್ರತಿಮಲ್ಲಿ೦ | ಎಂದೂ ಹೇಳಿಕೊಂಡಿದ್ದಾನೆ. ಇದಕ್ಕೆ ಸರಿಯಾಗಿ ಪ್ರಸಿದ್ಧರಾದ ಪಾರ್ಶ ಪಂಡಿತ, ಜನ್ನ, ಮಂಗರಸರೇ ಮೊದಲಾದ ಮಹಾಕವಿಗಳು ಇವನನ್ನು ಕೊಂಡಾಡಿದ್ದಾರೆ. ಆದ್ದರಿಂದ ಈ ಕವಿಯು ಮಧುರಕವಿಯು ಹೇಳುವಂತೆ ಕರ್ಣಾಟಕಕೃತಿಗೆ ಸೀಮಪುರುಷನಾಗಿದ್ದಾನೆ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.