ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೊತ್ತಾಗುತ್ತದೆ. 23 ವರ್ಷಗಳ ಹಿಂದೆ ಬರೆದ ಪ್ರತಿಯಾಗಿದ್ದರೂ ಇದರಲ್ಲಿ ಬಹಳ ಅಶುದ್ಧಗಳು ಬಿದ್ದಿರುವುದನ್ನು ನೋಡಿದರೆ, ಆ ಕಾಲದಲ್ಲಿಯೂ ಕೂಡ ಈ ಗ್ರಂಥವು ಸಾಮಾನ್ಯ ಪಂಡಿತರುಗಳಿಗೆ ದುರವಗಾಹವಾಗಿದ್ದಿತೆಂಗೆ ಹೇಳಬೇಕು. ಈ ಪ್ರತಿಯ ಆಧಾರದ ಮೇಲೆಯೇ ಈ ಗ್ರಂಥವು ಮುದ್ರಿತವಾಯಿತೆಂದು ಹೇಳಬೇಕು. - 2, ಮತ್ತೊಂದು ಪ್ರತಿಯು ಮೈಸೂರು ಸರ್ಕಾರದ ಓರಿಯಂಟಲ್ ಲೈಬ್ರೇ ರಿಯ ಕಾಗದದ ಪ್ರತಿಯು, ಇದು ಅಷ್ಟು ಶುದ್ದ ವಾದ ಪ್ರತಿಯಲ್ಲಿ ಯಾವ ಓಲೆಯ ಮಾತೃಕಯ ಮೇಲೆ ಇದು ಒರೆಯಲ್ಪಟ್ಟಿತೋ ಅದು ಎಷ್ಟು ಶ್ರಮಪಟ್ಟರೂ ಸಿಕ್ಕದೆ ಹೋಯಿತು. 3 ಮನೆಯ ಪ್ರತಿಯು ನಮ್ಮ ಭಂಡಾರದ ಅಲ್ಲಲ್ಲೇ ಗ್ರಂಥಪಾತವಾದ ಕಾಗದದ ಪ್ರತಿ. ಈ ಮರು ಪ್ರತಿಗಳಿದ್ದರೂ ಗ್ರಂಥವು ಸಮರ್ಪಕವಾಗುವಂತೆ ಶುದ್ಧವಾಗಿ ಮುದ್ರಿಸಲು ಆಗಲಿಲ್ಲ. ಅನೇಕ ಕಡೆ ಪದ್ಯಗಳಿಗೂ ಗದ್ಯಗಳಿಗೂ ಸರಿಯಾಗಿ ಅರ್ಥ ವಾಗುವುದಿಲ್ಲ; ಬಹಳ ತಪ್ಪುಗಳು ಬಿದ್ದಿವೆ. ಅರ್ಥವಾಗುವ ಕಡೆ ಬಹಳ ರಮಣೀಯ ವಾಗಿದೆ; ಅರ್ಥವಾಗದ ಕಡೆ ಶುದ್ಧ ಪ್ರತಿ ಸಿಕ್ಕಲಿಲ್ಲವೆಂಬ ಶೋಕ ಹುಟ್ಟು ತದೆ. ಶುದ್ದ ಮಾತೃಕೆಯ ಎಲ್ಲಿಯಾದರೂ ಸಿಕ್ಕ ಬಹುದೆಂಒ ಭರವಸೆಯಿಂದ ಬಹುಕಾಲ ಅಚ್ಚ ಮಾಡದೆ ಇದ್ದೆವು. ಇದು ಭಾವಗಾಂಭಿತ್ಯಕ್ಕೆ ಬಹಳ ಪ್ರಸಿದ್ಧಿ ಹೊಂದಿದ ಗ್ರಂಥವಾಗಿದ್ದರೂ ಸಾಮಾನ್ಯವಾಗಿ ಒನಗಳಿಗೆ ತಿಳಿಯಲು ಅಸಾಧ್ಯ ವಾಗಿದ್ದುದರಿಂದ, ಪಠ್ಯಂತರಗಳನ್ನಾದರೂ ಮಾಡಿ 'ಇದನ್ನು ಕಾಪಾಡಬೇಕೆಂಬ ಉತ್ಸಾಹವು ಸಾಮಾನ್ಯವಾಗಿ ಜನಗಳಲ್ಲಿ ಹುಟ್ಟಿರಲಾರದೆಂದು ತೋರಿತು. ಎಲ್ಲೆಲ್ಲಿ ಹುಡುಕಿದರೂ ಶುದ್ಧವಾದ ಪಠ್ಯಂತರವು ಸಿಕ್ಕದೆ ಹೋಯಿತು. 16 ಸ್ಥಿತಸ್ಯ ಗತಿಃ ಕಲ್ಪನೀಯಾ ” ಎಂಬ ನ್ಯಾಯವನ್ನನುಸರಿಸಿ ಈ ಪ್ರಸಿದ್ಧ ಗ್ರಂಥವನ್ನು ಸಾಧ್ಯ ವಾದ ಮಟ್ಟಿಗೆ ಶೋಧಿಸಿ, ಅರ್ಥವಾಗದ ಕಡೆ ಇದ್ದದ್ದನ್ನು ಇದ್ದ ಹಾಗೆಯೇ ಇಟ್ಟು ಮುದ್ರಿಸಿರುತ್ತೇವೆ. ಇದಲ್ಲಿ ಕರೆಯುವ ಪ್ರಮಾದಗಳಿಗಾಗಿ ವಿದ್ವಾಂಸರ ಕ್ಷಮೆಯನ್ನು ಬೇಡುತ್ತೇವೆ. ಮ|| ರಾ|| ಪದ್ಮರಾಜ ಪಂಡಿತರ ಉಪಕಾರವು ಚಿರಸ್ಮರಣೀಯವಾಗಿದೆ, ಗ್ರಂಥಶೋಧನಕಾರ್ಯದಲ್ಲಿ ಬಹಳವಾಗಿ ಸಹಾಯಮಾಡಿದ | ರಾ|| ಎಸ್. ಜೆ ಗೋವಿಂದರಾಜಯ್ಯಂಗಾರ್ಯರಿಗೆ ಕೃತಜ್ಞನಾಗಿರುವೆನು.