ಈ ಪುಟವನ್ನು ಪರಿಶೀಲಿಸಲಾಗಿಲ್ಲ.

E".9) నేJణశివు ಗೋವಿಂದ ಎದ್ದು ಹೋದ. ಆತ ಅಂಗಳ ದಾಟಿದೊಡನೆ ವೆಂಕಟಪ್ಪನೆಂದ: " ಅಂಗೂ ಇಂಗೂ ಗೋವಿಂದಪ್ಪ ಪುಢಾರಿ ಅನ್ನಿಸ್ಕೊಂಬಿಟ್ಟ. ಅವನನ್ನ ನೋಡಾಕೆ ನಗರದಿಂದಲೂ ಬರುವರೆ." - ಗೌಡರು ಏನನ್ನೂ ಹೇಳಲಿಲ್ಲ. ವೆಂಕಟಪ್ಪನನ್ನ ಬಿರುನೋಟದಿಂದ ನೋಡಿದರು. -ಎಡಗೈಯ ತೋರು ಬೆರಳಿನಿಂದ ತಮ್ಮ ಮಿಾಸೆಯ ತುದಿಗಳನ್ನು ಒಂದೊಂದಾಗಿ ಚಿಮ್ಮಿಸಿದರು. ©Ꮚ ಗಂಡನ ಮೈಮುಟ್ಟಿ ಎಬ್ಬಿಸಿ ಬಾಗೀರಥಿ ಅಂದಿದ್ದಳು :

  • ರೀರೀ ನನಗೇನನ್ನುತ್ತೆ, ಗೊತಾ ?"

ಗೋಪಾಲ ಗಡಬಡಿಸಿ ಎದ್ದು, “ಏನು? ಏನಾಯೆ?" ಎಂದು ಕೇಳಿದ. ಭಾಗೀರಥಿ ನಕ್ಕು ಅಂದಳು : - " ಕನಸು ಬಿದ್ದವರ ಹಾಗೆ ಆಡ್ರಿಡ್ತೀರಲ್ಲ! ಈ ತನಕ ಏನೂ ಆಗಿಲ್ಲ, ಇನ್ನು ಆಗುತ್ತೆ." "ಹೌದೇ? ಅದೇನು ಒಗಟು ನಿನ್ನು?" " ಮದುವೆ ಆಗುತ್ತೆ ಕಣಿ." “ ඤාට්ෆු 2 ” - "ನಿಮ್ಮ ತಮ್ಮಂದಿರಿಗೆ."

  • ಇಷ್ಟೇನಾ? ಅದಕ್ಕೆ ಎಬ್ಬಿಸ್ಬೇಕೆ?"

"ಇದೇನು ಚಾಳಿ ನಿಮು? ಹಗಲು ನಿದ್ದೆ." చేణūడింు బానిగిలిగే భాగ్విరాధి ఆగణి ತಗಲಿಸಿದ್ದಳು. ಆದರೂ ಮಾತುಕತೆಯೆಲ್ಲ ಪಿಸುದನಿಯಲ್ಲೇ ಆಗಬೇಕು. ಪಡಸಾಲೆಯಲ್ಲಿ ಓಡಾಡುವವರಿಗೆ ಕೇಳಿಸಬಾರದಲ್ಲ? ನೆಲದ ಮೇಲೆ ಕುಳಿತಿದ್ದ ಭಾಗೀರಥಿ ಗಂಡ ಮಲಗಿದ್ದ ಚಾಪೆಯ ಬಳಿಗೆ ಸರಿದಳು. ಗೋಪಾಲ ಹೇಳಿ ಕೇಳಿ ಸಂಕೋಚ ಸ್ವಭಾವದವನು. - - ಆತನೆಂದ : " శ్రీచాదాiు ఎల్లి ? " r " ದೊಡ್ಡಮ್ಮನ ಜತೆಗಿದಾನೆ," ಎನ್ನುತ್ರ ಭಾಗೀರಥಿ, ಒಲವು ತುಂಬಿದ ನೋಟ ದಿಂದ ಗಂಡನ ಕಣ್ಣುಗಳನ್ನು ನೋಡಿದಳು. ತಾವು ಇಬ್ಬರೇ, ಯಾರ ಅಡ್ಡಿಯನೂ ိိစ္ဆ, ಎಂಬುದನ್ನ ಖಚಿತಪಡಿಸಿಕೊಂಡ ಗೋಪಾಲ, ಕುಳಿತಿದ್ದ ಭಾಗೀರಥಿಯ ನಡುವನ್ನು ತನ್ನ ತೋಳಿನಿಂದ ಬಳಸಿದ, ಬಿಗಿಯಾಗಿ. ಭಾಗೀರಥಿ ಗಂಡನ ಎದೆಯ ಮೇಲಿನ ಕೂದಲುಗಳ ಸಿಕು ಬಿಡಿಸಿದಳು, ಬೆರಳುಗಳಿಂದ. ಗೋಪಾಲ ಇನ್ನೊಂದು ತೋಳನ್ನು ಭಾಗೀರಥಿಯ ಮುಂಭಾಗದಿಂದ ಬಳಸಿ ಆಕೆ ಯನ್ನು ತನ್ನೆದೆಗೆ ಎಳೆದುಕೊಂಡ. - ಗಂಡನ ಗಲ್ಲವನ್ನು ತನ್ನ ತುಟಿಗಳಿಂದ ಒದ್ದೆಮಾಡಿ ಭಾಗೀರಥಿ ಅಂದಳು :