ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು "ನಿಮ್ಮ ಶರ್ಟು ಎರಡೂ ಹರಿದಿವೆ. ಹೊಲಿಸೋದು ಬೇಡ್ವ ? " "ಸೀರೇನೂ ಒಂದು ಕೊಳ್ಳೇಕು, ಅಲ್ಲ ?” * ಶಿಪಾದೂಗೆ ಅಂಗಿ ಚಡ್ಡಿ -” "ನೋಡೋಣ, ನಾವು ಹೋದಾಗಲೇ ಅಲ್ಲಿ ಅಡ್ಡ ಮಳೆ ಬಿದ್ರೆ ಕೆಲಸಕ್ಕೆ ತೊಂದರೆ ಯಾಗುತ್ತೆ. ದೊಡ್ಡಮ್ಮ ಏನಂತಾರೋ ? ಸ್ವಲ್ಪ ದಿವಸ ಹೋಗ್ಲಿ..." "ಸ್ವಲ್ಪ ದಿವಸ ಹೋದ್ರ, ಸುಗ್ಗಿ ತನಕ ಮನೆ ಬಿಡೋಕೆ ಆಗೋಲ್ಲ. ಮದುವೆ ಗಲಾಟೆ ಬೇರೆ. ಹೊಸ ಸೊಸೆಯರು ಬರುವಾಗ ನಾನು ಬರೀ ಮೈಲಿದ್ದರೆ ಚೆನ್ನಾಗಿರುತ್ತೆ ! " "ಬರೀ ಮೈಯಾ ? ಯಾಕೆ ? ಏನೂ ಯೋಚಿಸ್ಟೇಡ. ಮದವೇnುಂಚೆ ಜವಳಿ ಖರೀದಿ ಇದ್ದೇ ಇರುತ್ತೆ.” "ಎಲ್ಲರ ಜತೇಲೇ ನಮಗೂ ತರಬೇಕೇನೋ ? ನಿಮ್ಮ ಸ್ವಂತಕ್ಕಿಂತ ಸ್ವಲ್ಪ ದುಡ್ಡಿ ಡ್ಕೊಳ್ಳಿ ಅಂದ್ರೆ......" "ಯಾಕೀಗ ದುಡು ? " “ಬಂಗಾರವಂತೂ ಇಲ್ವಲ್ಲ. ಉಡೋ ಬಟ್ಟೆಗೂ ಬರಗಾಲಾಂತಾದ್ರೆ, ಜನ ನಗ್ಯಾರೆ. ಅಷ್ಟೆ.” "ನಗಲಿ ಬಿಡು.” "ಅಲ್ವೆ ! ತಾಳತಂಬೂರಿ ಹಿಡಕೊಂಡರಾಯು "ಭಾಗೀ ! ಎಂಥ ಮಾತೇ ಅದು !” ಗೋಪಾಲ ಅಂಗಿ ತೊಟ್ಟುಕೊಂಡ. ಭುಜದ ಬಳಿ ಹರಿದಿತ್ತು. ಭಾಗೀರಥಿ ಅದನ್ನು ಹೊಲಿಯಬಹುದಾಗಿತ್ತು. ಆದರೆ ಆ ಕೆಲಸ ಅವಳು ಮಾಡಲೊಲ್ಲಳು. (ಹರಿದುದನ್ನೆಲ್ಲ ಹೊಲಿಯುತ್ತಾ ಇದ್ದರೆ ಹೊಸ ಬಟ್ಟೆ ಕೊಳ್ಳಲು ಸೋಮಪುರಕ್ಕೆ ಹೋಗುವುದು ಸುಳ್ಳು!) “ ನನ್ನ ಇಲ್ಲಿ ಮಾತಾಡೋರಿಲ್ಲ. ನನಗೆ ಯಾರೂ ದಿಕ್ಕಿಲ್ಲ. ನಾನು ಯಾರಿಗೂ ಬೇಡಾ ದೋಳು ...... ಇಓ ... ಇಓ ...” ಭಾಗೀರಥಿಯು ಮುಖ ಕೆಂಪಡರಿ, ಮೂಗಿನ ಹೊಳ್ಳೆಗಳು ಅದುರಿ, ಕಣ್ಣುಗಳಿಂದ ನೀರು ಒಸರಲು ಆರಂಭವಾಯಿತು. ದಂಪತಿಗೆ ತಿಳಿಯದಂತೆಯೇ ಮಾತಿನ ಧ್ವನಿ ಏರಿಬಿಟ್ಟಿತ್ತು. ಒಳಗಿನಿಂದ ದೊಡ್ಡಮ್ಮ ಕರೆದರು ; "ಭಾಗೀ, ಇಲ್ಲಿ ಬಾಮ್ಮಾ.” ಹಾಗೆ ಕರೆದುದು ದಂಪತಿಯ ಕಿವಿಗೆ ಬೀಳಲಿಲ್ಲ. ಮತ್ತೊಮ್ಮೆ ದೊಡ್ಡಮ್ಮ ಅಂದರು : "ಭಾಗೀ, ಇಲ್ಲಿ ಬಾಮ್ಮಾ, ತ್ರಿಪಾದೂನ ಎತ್ತೋ.” ಇದು ಗೋಪಾಲನ ಕಿವಿಗೆ ಬಿದ್ದಿತು. ಹೆಂಡತಿಯ ಕಂತ ಅಡುಗೆ ಮನೆಗೆ ಕೇಳಿಸಿದೆ ಎಂಬುದು ಆತನಿಗೆ ಹೊಳೆಯಿತು. ತಾಯಿ ಅಳುತ್ತಿದ್ದುದು ಮಗುವಿಗೆ ಹೇಗೆ ತಿಳಿಯಿತೋ ? ಶಿಪಾದ ಒಳಗೆ ಓ ಓ ಎಂದು ರೋದಿಸತೊಡಗಿದ.