ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ ಕೇಳಿಸೋ ? ದೊಡ್ಡಮ್ಮ ಕರೀತಾರೆ, ಮಗು ಅಳಿದೆ. ಒಳಗೋಗು,” ಎಂದು ನುಡಿದು ಗೋಪಾಲ ಮನೆಯಿಂದ ಹೊರಬಿದ್ದ. ಹೊರಗಿನ ಬಿಸಿಲು ಅವನ ಕಣ್ಣುಗಳನ್ನು ಕುಕ್ಕಿತು. ಆದರೆ ನಾಲ್ಕು ಹೆಜ್ಜೆ ಹೋಗು ವಷ್ಟರಲ್ಲೇ ಬಯಲಿನ ಗಾಳಿ ಸೇವಿಸಿ ಅವನು ಪ್ರಸನ್ನನಾದ. ಹೆಂಡತಿಯೊಡನೆ ಆದ ಸಂಭಾಷಣೆ ಅವನಿಗೆ ಮರತೇಹೋಯಿತು. - ಒಂದು ನಿಮಿಷ ತಡವಾಗಿ (ಕಣ್ಣುಗಳನ್ನು ಒರೆಸಿ ಆದ ಮೇಲೆ) ಭಾಗೀರಥಿ ಒಳಗೆ ಹೋದಳು. ಮಗುವನ್ನು ದೊಡ್ಡಮ್ಮನೇ ರಮಿಸಬಹುದಾಗಿತ್ತು. ಮಗುವಿನ ತಾಯಿ ಬರಲಿ ಎಂದು ಅಳಲು ಬಿಟ್ಟಿದ್ದರು. ಗೊಮೆ ಮಾಡಿ ಸ್ವಚ್ಛವಾಗಿದ್ದ ಅಡುಗೆಮನೆಯನ್ನೊಮ್ಮೆ ದಿಟ್ಟಿಸಿ ದೊಡ್ಡಮ್ಮ, ತಮ್ಮ ಹಿರಿಯ ಮೊಮ್ಮಗನ ಮಡದಿಯನ್ನು ಕೇಳಿದರು: " ಏನಮ್ಮ ? ಏನಂದ ಗೋಪೂ ?" "ಏನಿಲ್ಲ, ದೊಡ್ಡಮ್ಮ” "ಮೋಡ ಕವಿದೆ ಮಳೆ ಬರುತ್ತಾ ? ಏನಾದರೂ ಗೋಪು ಅಂದಿದ್ದೇಕು, ಪರವಾಗಿಲ್ಲ, ಹೇಳು.” ಶ್ರೀಪಾದನ ಕಣ್ಣುಗಳಲ್ಲಿದ್ದ ನೀರನ್ನೂ ಭಾಗೀರಥಿ ತನ್ನ ಸೆರಗಿನ ತುದಿಯಿಂದ ಒರೆಸಿದಳು. “ಏನೂ ಇಲ್ಲ ದೊಡ್ಡಮ್ಮ” " ಮತ್ತೆ ?" " ಅವರ ಷರಟು ಎರಡೂ ಹರಿದಿವೆ. ಹೊಸದು ಹೊಲಿಸ್ಕೋಬಾರದೆ ಅಂತ ಕೇಳೆ. ಅದಕ್ಕೆ ಸಿಟ್ಟು ಬಂತು. ಅವರಿಗೆ ಹರಕಲೇ ಇಷ್ಟವಂತೆ.” “ ಅಷ್ಟೇನೆ ? ಗೋವಿಂದನದೂ ಪದ್ಮನದೂ ಮದುವೆ ಈ ವರ್ಷ ಇರುತ್ತೆ. ಆಗ ಹೊಸ ಜವಳಿ ಖರೀದಿ ಆಗಲೇಬೇಕಲ್ಲ. ಒಂದಿಷ್ಟು ಒಡವೆಗಳನ್ನೂ ಆ ಹೊತ್ತಿಗೆ ಮಾಡಿಸ್ಸೇಕು.” - ಭಾಗೀರಥಿ ಏನನ್ನೂ ಹೇಳಲಿಲ್ಲ. ಸದ್ಯಕ್ಕಂತೂ ಸೋಮಪುರಕ್ಕೆ ಹೋಗುವ ಆಸೆ ಯನ್ನು ಕಟ್ಟಿಕೊಳ್ಳದಿರುವುದು ಮೇಲು-ಎಂದು ಆಕೆಗೆ ಅನಿಸಿತು. "ಯಾವತ್ತು ದೊಡ್ಡಮ್ಮ, ಮದುವೆ?” -ಮಾತಿನ ಚುಕ್ಕಾಣಿಯನ್ನು ಭಾಗೀರಥಿ ತಿರುವಿದಳು. "ಎಲ್ಲಿ ಆ ವಿಷ್ಣುಮೂರ್ತಿ 'ಜಾತಕಗಳನ್ನು ಕಳಿಸ್ಟೇಕು. ಹುಡುಗೀನ ಗೋವಿಂದ ನೋಡೋಕು ; ಪದ್ಮನಿಗೆ ಹೆಣ್ಣು ಗೊತ್ತಾಗೋಕು. ನಿಶ್ಚಿತಾರ್ಥ ಮೊದಲು ಆಸ್ಟ್ರೇಕೋ ಬೇಡೋ ? ಆಮೇಲೆ ಮದುವೆ.” “ ಯಾವೂರಲ್ಲಿ ದೊಡ್ಡಮ್ಮ ? " “ ಈಗ್ಲೆ ಹ್ಯಾಗೆ ಹೇಳೋಣ ?......ಗೋಪು ಹೋದ್ಯೋ ? ” "ಹೈು, ಭೈರಪ್ಪಕೆಲ್ಸ ಇದೆ ಅಂದು" " ..... ಹೆಂಗಸರನಮ್ಮ ಇದೆ ? ಮಕ್ಕಳು ಮನೆ ಅಂತ ಹೊತ್ತು ಕಳೀತೀವಿ. ಗಂಡಸರ ಹೊರಗಿನ ಸಂಕಷ್ಟ ನಮಗೇನು ಗೊತ್ತಾಗುತ್ತೆ ? 'ದುಡಿದು ಸಂಪಾದಿಸಿ ತಂದು