ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು , ೧೩ ಕ್ಷೇಮ ಕ್ಷೇಮ. ಭಾಗ್ಯನಗರ ತಾ....... ಕಣಿವೇಹಳ್ಳಿ ಜಮಾನ್ದಾರ್ ಶ್ರೀಮಾನ್ ಶ್ರೀನಿವಾಸಯ್ಯನವರಲ್ಲಿ ವಿಷ್ಣುಮೂರ್ತಿ ಮಾಡುವ ವಿಜ್ಞಾಪನೆಗಳು. ಅದೇನೆಂದರೆ : ತಮ್ಮಲ್ಲಿಂದ ವಾಪಸಾದವನು ತಕ್ಷಣವೇ ಜಾತಕಗಳನ್ನು ಕಳಿಸಬೇಕು ಅಂತ ಇರಾಧೆ ಇತ್ತು. ಆದರೆ ಜಾತಕಗಳನ್ನು ತೆಗೆದುಕೊಂಡು ಗಜಾನನನೇ ಹೋಗಿ ಬರುವುದು, ಒಳ್ಳೆಯದು ಅಂತ ಕಂಡದ್ದರಿಂದ ಸ್ವಲ್ಪ ದಿವಸ ತಡವಾಯಿತು. ಅವನು ಊರಿಗೆ ಹೋದವನು ಹೆರಿಗೆಗೆ ಹೋಗಿದ್ದ ಹೆಂಡತಿ ಮತ್ತು ಮಗುವನ್ನು ಕರೆದುಕೊಂಡು ನಿನ್ನೆಯಷ್ಟೇ ಬಂದ. ಕ್ಷಮಿಸಬೇಕು. ನನ್ನ ಹಿರೇಮಗಳು ಚಿ| ಸೌ| ಕಾಮಾಕ್ಷಿ ಮತ್ತು ಎರಡನೆಯವಳಾದ ಚಿ| ಸೌ ಕನಕಲತಾ ಇವರ ಜಾತಕಗಳನ್ನೂ ನನ್ನ ಸ್ನೇಹಿತರಾದ ಲಾಯರ್ ಮೋಹನರಾಯರ ಮಗಳ ಜಾತಕವನ್ನೂ ಕಳಿಸಲಾಗಿದೆ. ಪರಾಂಬರಿಸಬೇಕು, ಚಿಕಾಮಾಕ್ಷಿಯದು ಸರಿ ಹೋಗದಿದ್ದರೆ ಅವಳಿಗೆ ಗಂಡು ಗೊತ್ತಾಗುವತನಕ ಎರಡನೆಯವಳ ವಿವಾಹವನ್ನು ತಡೆಯಬೇಕಾಗುತ್ತದೆ. ಮೋಹನರಾಯರ ಸಂಬಂಧ ಸರಿಹೋದರೆ ಒಳ್ಳೆಯದು. ಈಗಿನ ಕಾಲದಲ್ಲಿ ಲಾಯರು ಬೀಗರಾಗುವುದರಿಂದ ಎಷ್ಟು ಅನುಕೂಲ ಆಂತ ತಮಗೆ ಬಿಡಿಸಿ ಹೇಳಬೇಕಾದ್ದಿಲ್ಲವಲ್ಲ ! ಆ ಜಾತಕ ತಮ್ಮ ಕಿರಿಯ ಚಿರಂಜೀವಿಯದಕ್ಕೆ ಕೂಡಿ ಬರದಿದ್ದರೆ, ನನ್ನ ಬೇರೆ ಇಬ್ಬರು ಮಿತ್ರರಿದ್ದಾರೆ. ಅವರ ಪುತ್ರಿಯರ ಜಾತಕಗಳನ್ನು ಕಳಿಸಲಾಗುವುದು. ಇದಾದ ತರುವಾಯ ವಧು ಪರೀಕ್ಷೆಗೆ ಅಂತ ತಾವು ಮಕ್ಕಳೊಡನೆ ನಗರಕ್ಕೆ ಬಂದು ಬಡವನ ಆತಿಥ್ಯ ಸ್ವೀಕರಿಸಬೇಕಾಗಿ ವಿನಮ್ಮ ಪ್ರಾರ್ಥನೆ. ತಮ್ಮ ಊರಲ್ಲಿ ಹೊಟೆಲಿಡುವವನು ನನಗೆ ಬೇಕಾದ ಹುಡುಗ ಎಂದಿದ್ದೆನಲ್ಲ ? ಅವನೇ ಗಜಾನನ, ಈಗ ತಮ್ಮಲ್ಲಿಗೆ ಬಂದವನು ಕಟ್ಟಡವನ್ನು ವಶಕ್ಕೆ ತೆಗೆದುಕೊಂಡು ಪೂರ್ವ ತಯಾರಿ ಮಾಡಿ ವಾಪಸಾಗುತ್ತಾನೆ. ಮುಂದೆ ಸಾಮಾನು ಇತ್ಯಾದಿಗಳನ್ನು ತರುತ್ತಾನೆ. ಟಾರ್ ರಸ್ತೆಯಿಂದ ಹಳ್ಳಿಯವರೆಗೆ ಅವನಿಗೆ ಆಳುಗಳ ಸಹಾಯ ಬೇಕಾದೀತು. ಅದನ್ನು ತಾವು ಒದಗಿಸಬೇಕಾಗಿ ಕೋರಲಾಗಿದೆ. ನಿಶ್ಚಿತಾರ್ಥಕ್ಕೆ ನಾವೆಲ್ಲ ಬರುತ್ತೇವಲ್ಲ; ಆಗ ಹೋಟೆಲಿನ ಉದ್ಘಾಟನೆಯನ್ನು ಮಾಡಬಹುದಾಗಿದೆ. ಹೆಚ್ಚಿಗೆ ಬರೆಯಲು ಶಕ್ತನಲ್ಲ. ನನಗೆ ತಮ್ಮ ಪರಿಚಯವಾದದ್ದು ಪರಮ ಭಾಗ್ಯ ಎಂದು ಭಾವಿಸಿದ್ದೇನೆ. ಮುಂದೆ ಆಗಲಿರುವ ಸಂಬಂಧದಿಂದ ಎರಡೂ ಕುಟುಂಬಗಳ ಸಂಪದಭಿವೃದ್ದಿಯಾಗಲೆಂದು