ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ಗೋಪಾಲ ಮನೆಗೆ ಬಂದ. “ ರಿಪೇರಿ ಕೆಲಸವೆಲ್ಲ ಆಯೇನೋ ?” ಎಂದು ಶ್ರೀನಿವಾಸಯ್ಯ ತಮ್ಮ ಮಗನ ನೋಡಿ ಕೇಳಿದರು. ಗೋಪಾಲನೆಂದ: * ಆಯ್ತು, ಭೈರಪ್ಪನಿಗೆ ದುಡ್ಡು ಬೇಕಂತೆ.” * ಎಲಾ ! ದುಡ್ಡೆ ? ಭತ್ತ ಅಲ್ವೆ ಯಾವಾಗೂ ಕೊಡೋದು ?” “ ಇನ್ನು ಮುಂದೆ ದುಷ್ಟೇ ಚೆನ್ನಾಗಿರುತ್ತೆ, ಅಂದ. ನಾವು ಬೇಕಾದರೆ ಅರ್ಧ ದುಡ್ಡು ಅರ್ಧ ಭತ್ತ ಕೊಡಬಹುದಂತೆ.” “ ಆಗಲಪ್ಪ, ಆಗಲಪ್ಪ, ಶಾಮಣ್ಣ ಇದಕ್ಕೆ ಒಪ್ಪಿದಾನಂತೆ ?” “ ಅಲ್ಲಿಯತನಕ ಭೈರಪ್ಪ ಹೋಗಿಲ್ಲ. ಪಟೇಲರ ಮನೆ ಒಂದು ಬಿಟ್ಟು ಬೇರೆಯವ ರಿಂದಲ್ಲ ದುಡ್ಡ ತಗೋತಾನೆ.” “ ಸರಿ, ಇನ್ನು ಆಳುಗಳೂ ದುಡ್ಡ ಕೇಳ್ತಾರೆ.” “ ಹೌದು.” “ ಇರಲಿ, ನೋಡೋಣ.” ಗೋಪಾಲ ಮತ್ತು ತಂದೆ ಆಡಿದುದೆಲ್ಲ ಗೋವಿಂದನಿಗೆ ಕೇಳಿಸಿತು." ಅವನೆಂದುಕೊಂಡ: 'ಬದುಕಿದೆ. ಭೈರಪ್ಪ ಕೊಟ್ಟ ಭಾಷೇನ ಮುರೀಲಿಲ್ಲ. ಧಾನ್ಯರೂಪದ ವೇತನ ಸರಿ ಯಲ್ಲ ಅಂತ ನಾನು ಅವನಿಗೆ ಲೆಕ್ಕರ್ ಕೊಟ್ಟದ್ದು ನಿಷ್ಟ್ರಯೋಜಕವಾಗಲಿಲ್ಲ.' ಹಳ್ಳಿಯ ವ್ಯವಹಾರಗಳಲ್ಲಿ ಹಣವೇ ವಿನಿಮಯ ಸಾಧನವಾದರೆ ದೊಡ್ಡ ಕ್ರಾಂತಿ ಯನ್ನೇ ತಾನು ಮಾಡಿದಂತೆ. ಜನರ ಕೈಯಲ್ಲಿ ದುಡ್ಡಿಲ್ಲದೇ ಹೋದರೆ ಗಜಾನನ ಹೋಟ್ಟು ಹೇಗೆ ನಡೆದೀತು ? ಅಕ್ಕಿ ಭತ್ತ ತಂದು ಕೊಟ್ಟು ಕಾಫಿ ಕುಡಿಯುವುದಕ್ಕಾದೀತೆ ? ಗೋವಿಂದ ಸಂತೋಷಪಟ್ಟುಕೊಂಡು ತನ್ನೊಳಗೇ ಉದ್ಧರಿಸಿದ : * ಭೈರಪ್ಪ ಒಳ್ಳೆ ಕೆಲಸ ಮಾಡ.', ...ರಾತ್ರೆ ಭಾಗೀರಥಿ ದೊಡ್ಡಮ್ಮನೂ ಗೋವಿಂದನೂ ಆಡಿಕೊಂಡುದನ್ನು ಗಂಡನಿಗೆ ತಿಳಿಸಲೆಂದು ಬಾಯಿ ತೆರೆದಳು. ಆದರೆ ಗೋಪಾಲ ಹೆಂಡತಿಗೆ ಮಾತನಾಡಗೊಡಲಿಲ್ಲ. ಮಧ್ಯಾಹ್ನದ ಸಿಟ್ಟು ಹಾಗೆಯೇ ಇತ್ತು. ಅದನ್ನು ಕರಗಿಸುವುದಕ್ಕೋಸ್ಕರ ಆತ ಭಾಗೀರಥಿಯನ್ನು ಬರಸೆಳೆದುಕೊಂಡ... ಗೋಪಾಲನಿಗೆ ನಿದ್ದೆ ಬರತೊಡಗಿದಾಗ ಭಾಗೀರಥಿ ವರದಿ ಒಪ್ಪಿಸಿದಳು : ಪದ್ಮನಿಗಾಗಿ ಸಂಬಂಧಗಳು ; ಕಚ್ಚಾ ರಸ್ತೆ; ಬಾಡಿಗೆ ಟಾಂಗಾ... ಗಂಡ ಸಂಪೂರ್ಣ ನಿದ್ರಾವಶನಾದನೆಂದು ಅರಿತಾಗ ಭಾಗೀರಥಿ ಮಾತು ನಿಲ್ಲಿಸಿದಳು. ಹೋಟೆಲಿಡಲು ಬರುವ ಗಜಾನನ ಎಂಥವನೊ ? ಅಂಥವನಿರಬಹುದೆ ? ಇಂಥವನಿರ ಬಹುದೆ ? ಎಂದು ಯೋಚಿಸುತ್ತ ಹೊತ್ತು ಕಳೆದು, ಭಾಗೀರಥಿ ಮಗ್ಗುಲು ಹೊರಳಿದಳು. ...ಮಳೆ ಬಂದು ನೆಲ ತೊಯ್ದು ಕಣಿವೇಹಳ್ಳಿಯ ಜನ ಹೊಲಗಳಿಗೆ ಇಳಿದ ದಿನ, ಗಜಾನನ ಅಲ್ಲಿಗೆ ಬಂದ.