ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ನೋವು

ರಂಗಣ್ಣನ ಮುಖ ಮೈ ಬಿಸಿಲಿನ ಝಳಕ್ಕೆ ಚುರುಗಟ್ಟಿದುವು. ಬಾಲ್ಯದಿಂದ ಆವರೆಗೆ ವರ್ಷದ ಹೆಚ್ಚಿನ ಭಾಗವನ್ನು ನಗರದಲ್ಲಿ ಕಳೆದು, ಬಿಸಿಲು ತಡೆಯಲಾರದಷ್ಟು ಸುಖಪುರುಷನಾಗಿ ಹೋದೆ–ಎಂದು ತನ್ನ ಮೇಲೆಯೇ ಸಿಟ್ಟಾದ ರಂಗಣ್ಣ.

 ತೋಟದ ಗುಡಿಸಿಲಿನಲ್ಲಿ ಆಳು ಮಾದನಾಗಲೀ ಅವನಾಕೆ ನೀಲಿಯಾಗಲೀ ಇದ್ದಂತೆ ಕಾಣಲಿಲ್ಲ. ಅವರ ಮಕ್ಕಳಿಬ್ಬರು –ಹುಡುಗರು– ಹಲಸಿನ ಮರದ ಕೆಳಗೆ ಕುಂಟಬಿಲ್ಲೆ ಅಡುತ್ತಿದ್ದರು. ಸಣ್ಣ ಗೌಡರು ಬಂದರೆಂದು ಅವರು ಆಟ ನಿಲ್ಲಿಸಿದರು.
 ದೊಡ್ಡವನನ್ನು ಕುರಿತು ರಂಗಣ್ಣ ಕೇಳಿದ: 
 " ನಮ್ಮ ಮನೆಯಿಂದ ಯಾರಾದರೂ ಈ ಕಡೆ ಬಂದ್ರೇನ್ಲಾ?"
 " ಯಾರನೂ ನೋಡ್ನಿಲ್ಲ," ಎಂದ ಹೈದ.
 " ಚಿಕ್ಕಮ್ಮಾವ್ರು ಬర్నిಲ್ವಾ?"
 " ಬಂದಿದ್ರು ಬುದ್ಧಿ. ಒಸಿ ಒತ್ತಾಯ್ತು."
 " ಮತ್ಯಾಕೋ ಯಾರನೂ ನೋಡ್ನಿಲ್ಲ ಅಂದಿದ್ದು?"
 " ದೊಡ್ಬುದ್ದಿಯೋರು బర్నిల్ల అంದ್ನಿ."
 " ನಿನ್ನ ತಲೆ, ಸೀಬೆಕಾಯಿ ಕಿತ್ಕೊಟ್ಯಾ?" 
 " ಕೊಟ್ನಿ."  
 ಸೀಬೆಕಾಯಿಗೆಂದು ಸುಭದ್ರ ತೋಟಕ್ಕೆ ಬಂದುದು ಸುಳ್ಳಲ್ಲ ಹಾಗಾದರೆ. ತಂಗಾಳಿ ಬೀಸಿದಂತಾಯಿತು ರಂಗಣ್ಣನ ಮನಸ್ಸಿಗೆ. ಆದರೆ ಆ ಅಲೆಯನ್ನು ಬಿಸಿಲ ತೆರೆಯೊಂದು ಅಟ್ಟಿಸಿಕೊಂಡು ಬಂತು. 
 "ಈಗೆಲ್ಲಿ ಚಿಕ್ಕಮ್ಮಾವ್ರು?"
 "ದಿಬ್ಬದ ಕಡೆ ಓದ್ರು" ಎಂದ ಹೈದ. 
 ರಂಗಣ್ಣನ ಗಂಟಲು ಗೊಗ್ಗರವಾಯಿತು. ಸಂಶಯಪಿಶಾಚಿ ಗಹಗಹಿಸಿತು. ಕೆಂಡ ಮೆಟ್ಟಿದವನಂತೆ ಆತ, ನಿಂತ ಸ್ಥಳದಿಂದ ಕದಲಿ, ದಿಬ್ಬದತ್ತ ನಡೆದ.
 ದಿಬ್ಬದ ಆಚೆಗೂ ಈಚೆಗೂ ತಪ್ಪಲು. ಈ ಕಡೆಯ ತಪ್ಪಲಲ್ಲಿ ಕಣಿವೇಹಳ್ಳಿ ಮಲಗಿತ್ತು. ಆ ಕಡೆಯದು ನಿರ್ಜನ ಪ್ರದೇಶ. ಅಲ್ಲಿ ಇಳಿಜಾರು ನೆಲ ಕೊನೆಯಾಗುವ ಕಡೆ ಕಾಡು ಮೊದಲಾಗಿ ದಿಬ್ಬದ ಬಲಮಗ್ಗುಲಿಂದ ಒಂದು ಕಾಲು ದಾರಿ ಇಳಿದು, ಎರಡು ಮೈಲು ದೂರದಲ್ಲಿದ್ದ ಮೋಟಾರು ರಸ್ತೆಯ ಕಡೆಗೆ ಸಾಗಿತ್ತು. ಕಣಿವೇಹಳ್ಳಿಯಿಂದ ಹೊರಟು ಭಾಗ್ಯನಗರಕ್ಕೆ ಹೋಗುವವರು, ಅಲ್ಲಿಂದ ಇಲ್ಲಿಗೆ ಮರಳುವವರು ಹಿಡಿಯಬೇಕಾದ ದಾರಿ ಅದು. ದಿಬ್ಬ ದೊಡ್ಡದು. ಅಲ್ಲಲ್ಲಿ ಹಸಿರು ಹೊರೆ ಹೊತ್ತು ಮರಗಳು ನಿಂತಿದ್ದುವು. ನಡುನಡುವೆ ಕಾಡುಪೊದೆಗಳು, ಭೀಮಬಂಡೆಗಳು. ದಿಬ್ಬದ ತುದಿಯಲ್ಲೊಂದು ಈಶ್ವರನ ಗುಡಿ.
 ರಂಗಣ್ಣ ಮೈಯೆಲ್ಲ ಕಣ್ಣಾಗಿ ದಿಬ್ಬವನ್ನೇರಿದ. ಬಾಲ್ಯದಲ್ಲಿ ಆಗಾಗ್ಗೆ, ಮುಂದೆ ಹಳ್ಳಿಗೆ ರಜಾದಿನಗಳಲ್ಲಿ ಬಂದಾಗ ಒಮ್ಮೊಮ್ಮೆ, ಪದ್ಮನಾಭನನ್ನೂ ಕರೆದುಕೊಂಡು ಆತ ಗುಡಿಯ ತನಕ ಏರಿಹೋಗಿ ಮುಚ್ಚಂಜೆಯ ವೇಳೆಗೆ ಇಳಿದು ಬರುವುದಿತ್ತು. ಆ ಪರಿಪಾಠಕ್ಕೆ ವ್ಯತ್ಯಯ ಒದಗಿ ಒಂದು ವರ್ಷವಾಯಿತಲ್ಲ? ಪ್ರಿ-ಯೂನಿವರ್ಸಿಟಿ ತರಗತಿ ಮುಗಿಸಿದ ಮೇಲೆ