ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೧೩

"ಬೇಡಿ. ಇವತ್ತು ಬೇಡಿ."
 ಈ ದಿನ ಇವನು ಮಾರುತ, ಧೂಮವಾಗಲಾರ.
 ಆ ಮಾತೇ ಹಗ್ಗವಾಗಿ ಗೋವಿಂದ ಮತ್ತೂ ಅದನ್ನು ಜಗ್ಗುತ್ತಿದ್ದಾಗ, ಗಜಾನನ ಬಂದ. ಹೊರಗಿನಿಂದ ಗಾಳಿ ಬೀಸಿ, ತುಂಬಿದ ಹೊಗೆಯನ್ನು ಚೆದರಿಸಿದಂತಾಯಿತು.

ಹೋಟೆಲಿಡುವ ಮನುಷ್ಯ ಹಳ್ಳಿಗೆ ಬಂದುದನ್ನು ಗೋವಿಂದನಿಂದ ಆಗಲೆ ತಿಳಿದಿದ್ದ

ಕೃಷ್ಣೇಗೌಡ, "ಬರಬೇಕು ಹೋಟೆಲ್ ಮಾಲಿಕರು, ಬರಬೇಕು" ಎಂದ, ನಗುತ್ತ.
   ಗಜಾನನನ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಮಾಡಿ, ಆತ ಮುಂದಕ್ಕೆ ನೀಡಿದ ಪೊಟ್ಟಣ

ವನ್ನು ಬಿಚ್ಚುತ್ತ ಕೃಷ್ಣೇಗೌಡನೆಂದ :

   "ಇದೇನೋ ತಂದಿದ್ದೀರಲ್ಲಪ್ಪ, ಹಲ್ವ ಇದ್ದಂಗೈತೆ. ಎಲ್ಲಿ ಸೋಮಿಯೋರೆ ಇದನ್ನ 

ಈ ಎಲೆಗಳಲ್ಲಿ ಇಷ್ಟಿಷ್ಟು ಹಾಕ್ಕೊಡಿ."

   ಗಜಾನನ ನಗುತ್ತ ಆ ಕೆಲಸ ಮಾಡಿ ಜೇಬಿನಲ್ಲಿದ್ದ ಕರವಸ್ತ್ರಕ್ಕೆ ಕೈ ಒರೆಸಿದ.
   " ನೀವೂ ತಗಳಿ," ಎಂದ ಕೃಷ್ಣೇಗೌಡ, ಉದಾರಿಯಾಗಿ.
   "ನಾನು ನೋಡಿದೀನಿ ಕೃಷ್ಣೇಗೌಡರೆ, ಹೋಟ್ಲುಗಳಲ್ಲಿ ಸ್ವತಃ ತಿಂಡಿ ಮಾಡೋವರಿಗೆ 

ಅದನ್ನು ತಿನ್ನೋ ಆಸೇನೇ ಇರೋದಿಲ್ಲ," ಎನ್ನುತ್ತ ಗೋವಿಂದ, ಕೃಷ್ಣೇಗೌಡನ ಜತೆ ತಾನೂ ಹಲ್ವವನ್ನು ಮೆಲ್ಲತೊಡಗಿದ.

   ಚಿಕ್ಕ ಹುಡುಗನೊಬ್ಬ ಒಳಗಿನಿಂದ ಬಂದು ಮುಖ ತೋರಿಸಿದಾಗ, " ಬಾ ಪುಟ್ಟ,

ಇದ್ನ ತಕಂಡ್ಹೋಗು ; " ಒಸಿ ನೀರು ತಾ ಕೈತೊಳೆಯಾಕೆ," ಎಂದ ಕೃಷ್ಣೇಗೌಡ.

   ಗೋವಿಂದ ಪೊಟ್ಟಣದ ಕಾಗದದಿಂದ ಒಂದು ಚೂರನ್ನು ಹರಿದು ಬೆರಳೊರೆಸಿ,
"ನಗರದಲ್ಲಿ ಮಾಡೋದೇ ಹೀಗೆ," ಎಂದ.
  " ಸರಿ! ನಾವೂ ನಗರದವರೇ ಆದೆವಲ್ಲ !" ಎನ್ನುತ್ತ ಕೃಷ್ಣೇಗೌಡನೂ ಗೋವಿಂದನೆನ್ನು ಅನುಕರಿಸಿದ. 
  "ರುಚಿಯಾಗಿದೆಯಪ್ಪ, ಇಲ್ಲೂ ಇಂಥದೇ ನೀವು ಮಾಡಿದ್ರೆ ಹಳ್ಳೀ ಜನ ನೊಣಗಳಂಗೆ ಮುತ್ಕೊಂತಾರೆ,” ಎಂದು ಗಜಾನನನ ಕಡೆ ನೋಡಿ ಆತನೆಂದ.
    ಗಜಾನನ ಪಾಲಿಗೆ ಇದು ಮಧುರ ವಾತಾವರಣ, ಶಾಮೇಗೌಡರಲ್ಲಿಗೆ ಬರಲು ಗೋವಿಂದ ಇಷ್ಟಪಟ್ಟಿರಲಿಲ್ಲ, ಆದರೆ ಕೃಷ್ಣೇಗೌಡನಲ್ಲೋ ಈತನದು ಪರಮ ಸ್ನೇಹ. ತನಗೆ ಮಾತ್ರ ಪಟೇಲರು-ಕೃಷ್ಣೇಗೌಡರು ಇಬ್ಬರ ವರದ ಹಸ್ತವೂ ಇದ್ದಂತೆ.
 ಕೃಷ್ಣೇಗೌಡ ಕೇಳಿದ
" ಏನು ಸೋಮಿ ನಿಮ್ಮ ಎಸರು ?"
" ಗಜಾನನರಾಯು ಅ೦ತ."
"ಸರಿ ರಾಯರೇ, ಎಲ್ಲಾ ನೋಡ್ಕೊಂಡ್ಹೋಗಿ, ನಿಮಗೆ ಏನು ಆಗಬೇಕಾಗಿದ್ದರೂ 
ಗೋವಿಂದಪ್ನತ್ರ ಯೇಳ್ಬುಡಿ; ನಾನು ಮಾಡಿಸ್ಕೊಡ್ತೀನಿ."
"ಆಗಲಿ."
ಗೋವಿಂದನೆಂದ : 
" ಏಳು ಗಜಾನನ,ಕಟ್ಟಡ ನೋಡ್ಕೊಂಡು ಮನೆಗೆ ಹೋಗೋಣ."

8