ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪

                                    ನೋವು
         ಗಜಾನನನೊಡನೆ ಗೋವಿಂದ ಹಳ್ಳಿಯಲ್ಲಿ ಸುತ್ತಾಡಿ ಮನೆ ತಲಪುವ ವೇಳೆಗೆ ಶ್ರೀನಿವಾಸಯ ಆಗಲೇ ಜಾತಕಗಳ ಪರಾಮರ್ಶೆಯನ್ನು ಮುಗಿಸಿದ್ದರು. ಅವರೂ ದೊಡ್ಡಮ್ಮನೂ ಗೋವಿಂದನ ಬರವನ್ನೆ ಇದಿರು ನೋಡುತ್ತಿದ್ದರು.
                              
                                    ೧೫
         ಶ್ರೀನಿವಾಸಯ್ಯ ಜಾತಕಗಳನ್ನು ತುಲನೆ ಮಾಡಿ ಯೋಚನಾ ಮಗ್ನರಾದಾಗ, ಭಾಗೀರಥಿ ಅಡುಗೆ ಮನೆಯ ಕೆಲಸದಿಂದ ವಿಮುಕ್ತಳಾಗಿ ಶ್ರೀಪಾದನೊಡನೆ ಕೊಠಡಿಗೆ ಬಂದಳು. ಅವಳ ಗಂಡ ಊಟವಾದ ಬಳಿಕ ಕೆಲವೇ ನಿಮಿಷ ಅಲ್ಲಿದ್ದು ಮತ್ತೆ ಹೊಲಗಳತ್ತ ಹೋಗಿದ್ದ. ಮಗುವನ್ನು ಮಲಗಿಸಿ ತಾನೂ ಅಲ್ಪಕಾಲದ ವಿಶ್ರಾಂತಿಗೆಂದು ಚಾಪೆಯ ಮೇಲೆ ಮೈ ಚೆಲ್ಲಿದಳು.

        "ಅಮ್ಮಾ," ಎಂದು ಭಾಗೀರಥಿಯ ಮಾವ ತಮ್ಮ ತಾಯಿಯನ್ನು ಕರೆಯದೇ ಇದ್ದಿದ್ದರೆ, ಈಕೆಗೆ ಜೊಂಪು ಹತ್ತುವುದು ಸಾಧ್ಯವಿತ್ತು.
         ಆದರೆ, ದೊಡ್ಡಮ್ಮನೂ ತನ್ನ ಮಾವನೂ ಗಹನವಾದ ಆಪ್ತಾಲೋಚನೆ ನಡೆಸುವರೆಂಬುದನ್ನು ಊಹಿಸಿದ ಭಾಗೀರಥಿ ಮೈಯೆಲ್ಲ ಕಿವಿಯಾದಳು.
          ಹೊರಗಿನಿ೦ದ ಮಾತುಕತೆ ಕೇಳಿಸಿತು.
          " ಏನು ಶೀನ? ಎಲ್ಲಾ.ನೋಡಿದಿಯಾ?"
          "ಹೂನಮ್ಮ." 
          "ಹ್ಯಾಗಿದೆ ?” 
          "ವಿಷ್ಟುಮನೂರ್ತಿಗಳ ಎರಡ್ನೇ ಮಗಳದು ಪದ್ಮನೆದಕ್ಕೆ ಕೂಡಿಬರುತ್ತೆ. ಲಾಯರಿ ಮಗಳದೂ ಗೋವಿಂದನದೂ ಅಪೂರ್ವ ಜೋಡಿ."
          ಮೌನದ ಅಂತರ.
          [ದೊಡ್ಡಮ್ಮನಿಗೆ ಯೋಚನೆಗಿಟ್ಟುಕೊಂಡಿತು. ಈ ಸಮಸ್ಯೆಯನ್ನು  ಬಗೆಹರಿಸುವುದು ಹೇಗೆ ? ವಿಷುಮೂರ್ತಿ ಅಪೇಕ್ಷೆ ಪಟ್ಟಿರುವುದು ಗೋವಿಂದ ತನ್ನ ಅಳಿಯನಾಗಬೇಕೆಂದು. ಅಲ್ಲದೆ, ಪದ್ಮನಾಭನಷ್ಟು ವಿದ್ಯಾವಂತನಲ್ಲದ ಗೋವಿಂದನಿಗೆ ಲಾಯರು ತನ್ನ ಮಗಳನ್ನು ಕೊಡುವುದುಂಟೆ?] 
          ಭಾಗೀರಥಿಗೆ ದೊಡ್ಡಮ್ಮನ ಧ್ವನಿ ಕೇಳಿಸಿತು :
          "ಗೋವಿಂದನ ಮನಸ್ನಲ್ಲಿ ಏನಿದೆಯೊ?"
          ಶ್ರೀನಿವಾಸಯ್ಯನವರ ಮರುತ್ತರ :
          " ಏನಿರುತ್ತೆ ? ಜಾತಕ ಕೂಡಿಬರೋದಿಲ್ಲಾಂತ ಹೇಳಿದರಾಯ್ತು."
           "ಹೇಳಿಬಿಡೋದು ಸುಲಭ, ಶೀನ. ನಮಗೆ ಗೊತ್ತಿಲ್ದೇನೇ ಗೋವಿಂದ ವಿಷ್ಣುಮೂರ್ತಿಗಳ ಸಂಸಾರಕ್ಕೆ ಪರಿಚಿತನಾಗಿದಾನೆ."
          "ಅದೇನೋ ನಿಜವೇ. ಈಗ ಹ್ಯಾಗ್ಮಾಡೋಣಾಂತೀಯಾ ?"
  
          "ಗೋವಿಂದ ಬರಲಿ. ಕೇಳಿ ನೋಡೋಣ."