ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ನೋವು " ಮಾಡೊಂಡು ಅಲ್ಲ, ಮಾಡಿಸ್ಕೊಂಡು." " ಇದೆಯಲ್ಲ ವಿಘ್ನೇಶ್ವರ ಭವನ." "ಅದ್ಸರೀಂತಿಕೆಟ್ಕೊಳ್ಳಿ." ಕ್ಷಣ ಕಾಲ ಸುಮ್ಮನಿದ್ದು ಹೆಜ್ಜೆ ಹಾಕಿದ ಮೇಲೆ, ಗೋವಿಂದ ಗೊಣಗಿದ : "ಈ ಜಾತಕಗಳದೊಂದು ಗೋಳು. ಅಣ್ಣಯ್ಯ ಏನು ಹೇಳ್ತಾರೊ ?" " ನೀವೊಂದು ತಪ್ಪು ಮಾಡಿದಿರಿ ಗೋವಿಂದರಾವ್.. ನಿಮ್ಮದನ್ನ ಮೊದಲೇ ವಿಷ್ಣು ಮಾವನಿಗೆ ಕೊಟ್ಟಿದ್ದರೆ ಕಾಮಾಕ್ಷಿ ಜಾತಕಾನ ಅದಕ್ಕೆ ಸರಿಯಾಗಿ ಅವರು ರೆಡಿ ಮಾಡಿಸಿ ಇಡ್ತಿದ್ರು." " ಹೊಳೀಲಿಲ್ಲ ಕಣಯ್ಯ, ಇರಲಿ, ಬಿಡು". ......ಗೋವಿಂದ ಗಜಾನನನೋಡನೆ ಮನೆ ತಲಪಿದಾಗ ಕಾಫಿ ತಿ೦ಡಿ ಸಿದ್ದವಾಗಿತ್ತು. ತಟ್ಟೆ ಲೋಟಗಳ ಮುಂದೆ ಅವರಿಬ್ಬರೂ ಕುಳಿತಾಗ ಶ್ರೀನಿವಾಸಯ್ಯ ಗಜಾನನನೊಡನೆ,"ಬಂದ ಕೆಲಸವಾಯಿತೊ?"ಎಂದು ಕೇಳಿದರು . " ಆಯು, ಪಟೇಲರ ಒತ್ತಾಯಕ್ಕೆ ಅಲ್ಲಿ ಒಂದು ಲೋಟ ಹಾಲು ಕುಡೀಬೇಕಾಯ್ತು," ಎ೦ದ ಗಜಾನನ. " ಅಪ್ಪಟ ಎಮ್ಮೆ ಹಾಲು," ಎಂದು ಗೋವಿಂದ ಮಾತು ಕೂಡಿಸಿದ.

"ಶಾಮಣ್ಣ ಒಳ್ಳೆಯವನು," ಎಂದರು ಶ್ರೀನಿವಾಸಯ್ಯ.

...ಅವರಿಬ್ಬರೂ ಕೈತೊಳೆದುಕೊಂಡು ಆದಮೇಲೆ ದೊಡ್ಡಮ್ಮ, “ ಗೋವಿಂದೂ. ಸ್ವಲ್ಪ ಒಳಗ್ಬಾ," ಎಂದರು. ಈ ಕರೆ ಜಾತಕಗಳಿಗೆ ಸಂಬಂಧಿಸಿದ ಮಾತುಕತೆಗೇ ಎಂದು ಊಹಿಸುತ್ತ ಗೋವಿಂದ ಒಳಕ್ಕೆ ಹೋದ. ಊಟದ ಮನೆಯಲ್ಲಿ ದೊಡ್ಡಮ್ಮ ಗೋಡೆಗೊರಗಿ ಕುಳಿತರು. " ನೀನೂ ಕೂತ್ಕೋ,"ಎಂದರು. ಗೋವಿಂದ ಅವರ ಆದೇಶವನ್ನು ಪಾಲಿಸಿ,"ಅಣ್ಣಯ್ಯ ಜಾತಕಗಳನ್ನು ನೋಡಿ ಆಯ್ತೇ?" ಎ೦ದು ಕೇಳಿದ. " ಹೂಂ ಕಣೋ, ಆ ಲಾಯರಿ ಮಗಳದೂ ನಿಂದೂ ಸರಿಕೂಡುತ್ತೆ-ಅಂದ." " ಛೆ! ಛೆ ! ಲಾಯರ್ ಸಾಹೇಬರಿಗೆ ಅಳಿಯ ಗ್ರಾಜುಯೇಟ್ ಆದರೂ ಆಗಿರ್ಬೇಕು. ಅದಕ್ಕೆಲ್ಲಾ ಪದ್ಮನೇ ಸರಿ." "ಏನೋಪ್ಪ, ನೀನೇ ಹೀಗಂದ್ರೆ ಹ್ಯಾಗೊ ಗೋವಿಂದು ?" " ಹೇಳ್ತೀನಿ ಕೇಳು, ದೊಡ್ಡಮ್ಮ. ನಗರದಲ್ಲಿ ಎಂಥೆಂಥಾ ಜ್ಯೋತಿಷ್ಯರು ಬೇಕಾದರೂ ಇದಾರೆ. ಮಂತ್ರಿಗಳು ಮಹಾರಾಜರೆಲ್ಲ ಬಂದು ಬಾಗಿಲು ಕಾಯುವಂಥ ಜ್ಯೋತಿಷ್ಯರು. ವಿಷ್ಣುಮೂರ್ತಿಗಳು ಬೇಕು ಅಂದರೆ ಜಾತಕಗಳಲ್ಲಿ ಎಂಥ ದೋಷ ಇದ್ದರೂ ನಿವಾರಣೆ ಮಾಡಿಸ್ತಾರೆ." ದೊಡ್ಡಮ್ಮ ಅವಾಕ್ಕಾದರು. ಉಸಿರೆಳೆದುಬಿಟ್ಟು ಅವರೆಂದರು :