ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು " ಹೀಗೂ ಮಾಡ್ತಾರೇನೊ ? ಜಾತಕ ಬದಲಾಯಿಸೋದ್ಕಾಗುತ್ತಾ?" " ಬದಲಾಯಿಸೋದಲ್ವಮ್ಮ; ಸರಿಪಡಿಸೋದು. ಅದಕ್ಕೆ ರೆಕ್ಟಿಫಿಕೇಷನ್ ಡೀಡ್ ಅಂತಾರೆ. ಬ್ರಹ್ಮ ಅವಸರದಲ್ಲಿ ಏನೋ ಬರೆದ ಅನ್ನು. ಬುದ್ಧಿಪೂರ್ವಕ ಅಲ್ಲ, ಅವಸರದಲ್ಲಿ ಏನೋ ಬರೆದ. ಅಡನ್ನ ಅಲ್ಲಿ ಇಲ್ಲಿ ಸುಳಿ ಉಕೊಂಬು ಕೊಟ್ಟು ತಿದ್ದಿದರಾಯ್ತು" ದೊಡ್ಡಮ್ಮ ಧ್ವನಿ ಏರಿಸಿದರು: " ಗೋವಿಂದ, ಹೀಗೆಲ್ಲಾ ಮಾತಾಡಬಾರ್ದು." " ಸರಿ, ನಾನೊಬ್ಬ ಮಾತಿನಮಲ್ಲ. ಹೇಳು ದೊಡ್ಡಮ್ಮ, ನನ್ನಿಂದ ಏನಾಗ್ಬೇಕು ?" " ಈ ಮದುವೆ ವಿಷಯದಲ್ಲಿ—”

" ನಾನು ತೀರ್ಮಾನ ಮಾಡ್ಬಿಟ್ಟಿದ್ದೀನಿ. ದೊಡ್ಡಮಗಳನ್ನ ನನಗೆ ಕೊಡಬೇಕು ಅನ್ನೋದು ವಿಷ್ಣುಮೂರ್ತಿಗಳ ಇಚ್ಛೆ. ಅವರನ್ನ ನಿರಾಶೆಗೊಳಿಸೋದು ನನಗೆ ಸಮ್ಮತವಿಲ್ಲ. ಪದ್ಮನದೇನಿದ್ದರೂ ಅವನಿಗೆ ಸಂಬಂಧಿಸಿದ್ದು. ನಾನೇನು ಹೇಳ್ಲಿ ?"

" ಜಾತಕಗಳನ್ನ ಗಂಗಾಧರ ಶಾಸ್ತ್ರಿಗೆ ತೋರಿಸೂಂತ ನಿನ್ನ ಅಣ್ಣಯ್ಯನಿಗೆ ಹೇಳಿದೀನಿ".

" ಓಹೋ ತೋರಿಸಿ. ಧಾರಾಳವಾಗಿ ತೋರಿಸಿ. ಆದರೆ ಒಂದು ಮಾತ್ರ ಮರೀಬೇಡಿ, ದೊಡ್ಡಮ್ಮ. ಜ್ಯೋತಿಷ್ಯದಲ್ಲಿ ಇದೇ ಕೊನೆ ಅನ್ನೋದಿಲ್ಲ. ಈ ಸಂಬಂಧ ಕುದುರಬೇಕೂಂತಿದ್ದರೆ, ಅಣ್ಣಯ್ಯ ನಗರಕ್ಕೂ ಹೋಗಿ ಬೇರೆ ವಿದ್ವಾಂಸರನ್ನ ನೋಡೋದು ಅಗತ್ಯವಾದೀತು." 

ದೊಡ್ಡಮ್ಮನ ದೃಷ್ಟಿಗೆ ಗೋವಿಂದನ ಹಿಂಬದಿಯಲ್ಲಿ ಬಾಗಿಲ ಬಳಿ ನಿಂತಿದ್ದ ಶ್ರೀನಿವಾಸಯ್ಯ ಕಣ್ಣಿಗೆ ಬಿದ್ದರು. - "ಕೇಳಿದೆಯೇನೋ ಶೀನ?" ಎಂದರು, ದೊಡ್ಡಮ್ಮ. ಶ್ರೀನಿವಾಸಯ್ಯ ಅಂದರು :

" ಇಂಥ ಪುತ್ರರತ್ನಕ್ಕೆ ತಂದೆಯಾಗಿದೀನಲ್ಲಾ-ನಾನು ಧನ್ಯ, ಧನ್ಯ !"
" ಹೋಗಲಿ ಬಿಡು, ಶಾಸ್ತ್ರೀನ ಇಷ್ಟು ನೋಡ್ಕೊಕೊಂಡ್ಬಾ."
ಶ್ರೀನಿವಾಸಯ್ಯ ನಿಂತಲ್ಲಿಂದ ಚಲಿಸುವ ತನಕ ಗೋವಿಂದ ಸುಮ್ಮನಿದ್ದ. ತಂದೆ ಪಡಸಾಲೆಯತ್ತ ಹೋದರೆಂಬುದು ಖಚಿತವಾದೊಡನೆ, ದೊಡ್ಡಮ್ಮನಿಗೆ ಆತನೆಂದ:

"ನಾಳೆ ಬೆಳಗ್ಗೆ ಗಜಾನನ ನಗರಕ್ಕೆ ಹೋಗ್ತಾನೆ. ಅವನ ಜತೆ ನಾನೂ ಹೋಗ್ಬೇಕಾಗುತ್ತೆ. ಪಟೇಲರ ಕೆಲಸ ಒಂದಿದೆಯಲ್ಲ ? ಅಣ್ಣಯ್ಯನೂ ನಮ್ಮ ಜತೆ ಬಂದರೆ ಚೆನಾಗಿರುತ್ತೆ. ವಿಷ್ಣುಮೂರ್ತಿಗಳನ್ನು ಕಂಡು, ಆ ಲಾಯರನ್ನ ಭೇಟಿ ಮಾಡಿ, ಯಾವುದಾದರೂ ಇತ್ಯರ್ಥಕ್ಕೆ ಬಂದೇ ಅಣ್ಣಯ್ಯ ವಾಪ್ಸಾಗಬಹುದು. ಏನಂತೀಯಾ ದೊಡ್ಡಮ್ಮ ?" " ಶಾಸ್ತ್ರಿ ಏನು ಹೇಳ್ತಾನೋ ನೋಡೋಣ," ಎಂದು ನುಡಿದು ದೊಡ್ಡಮ್ಮ ಎದ್ದರು..! ಅಜ್ಜಿ ಮತ್ತು ಮೊಮ್ಮಗನ ಸಂಭಾಷಣೆ ಕಿವಿಗೆ ಬಿದ್ದ ಭಾಗೀರಥಿಗೆ, “ ಅಬ ಎ೦ಥ ಧೈರ್ಯ ಗೋವಿಂದನದು !" ಎನಿಸಿತು. " ಈಗಲೇ ಹೀಗೆ ಹೆಂಡತಿ ಬಂದ ಮೇಲೆ ಇವನನ್ನು ಹಿಡಿಯೋರುಂಟೆ ?" ಎಂದು ಕೊಂಡಳು. ಕನಸಿನಲ್ಲಿ ತನ್ನ ಕೈ ಹಿಡಿದೆಳೆದ ಧಡೂತಿ ಹುಡುಗಿಯ ನೆನಪಾಗಿ ಅವಳಿಗೆ ಭಯವಾಯಿತು. .....ರಾತ್ರೆ ಶ್ರೀನಿವಾಸಯ್ಯ ಗಂಗಾಧರ ಶಾಸ್ತ್ರಿಗಳ ಮನೆಯಿಂದ ಮರಳಿದರು. ದೇವರ