ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೨೩


   ಪದ್ಮ, ಮಲಗಲು ಅಣಿಯಾಗುತ್ತಿದ್ದವನು ಆಕಳಿಸಿ, " ಯಾವ ಮೋಹನರಾಯರು?" 

ಎ೦ದು ಕೇಳಿದ.

   "ಓಹೋಹೋ ಏನೂ ತಿಳೀದವರ ಹಾಗೆ ಮಾತಾಡ್ತೀರಲ್ಲ! ಮೋಹನರಾಯರು

ಗೊತ್ತಿಲ್ವೆ ?"

   "ಇల్ల."
   "ಲಾಯರು."
   "ಲಾಯರೆ?"
   "ಹ್ಞ."
   "ಮಗಳ ಜಾತಕವನ್ನ ನಿಮ್ಮ ತಂದೆಯವರಿಗೆ ಕಳಿಸಿಕೊಟ್ಟಿದಾರೆ."
   "ಯಾಕೆ ?" 
   "ಯಾಕೆ? ಮೋಹನರಾಯರು ನಿಮ್ಮ ವಿಷಯ ಬಹಳ ಕೇಳ್ತಾ ಇದ್ರು ಅಂದೆನಲ್ಲ ?" 
   ಪದ್ಮನಾಭನ ಮುಖ ಸ್ವಲ್ಪ ಕೆಂಪೇರಿತು, ಸಿಟ್ಟಿನಿಂದ.  ಇಷ್ಟೊಂದು ಸಲಿಗೆ ವಹಿಸಿ

ಮಾತನಾಡುವನಲ್ಲ ಈತ ?

   ಪದ್ಮನಾಭ ಸುಮ್ಮನಿದ್ದುದನ್ನು ಕಂಡು ಗಜಾನನನೇ ಮುಂದುವರಿದ :
   "ನಿಮ್ಮ ಅಣ್ಣ ಗೋವಿಂದರಾಯರಿಗಂತೂ ವಿಷ್ಣುಮೂರ್ತಿಗಳ ದೊಡ್ಡ ಮಗಳನ್ನ

ತರೋದು ಹೆಚ್ಚು ಕಮ್ಮಿ ನಿಷ್ಕರ್ಷೆ ಆದ ಹಾಗೆಯೇ."

   ತುಟಿ ಕಚ್ಚಿ ಬೇಕು ಬೇಕೆಂದೇ ಪದ್ಮನಾಭ ಕೇಳಿದ: 
   "ಯಾವ ವಿಷ್ಣುಮೂರ್ತಿಗಳು ? ನಮ್ಮ ಹಾಸ್ಟೆಲ್ನಲ್ಲಿ ಒಬ್ಬ ಅಡುಗೆ ಭಟ್ಟ ಇದಾನೆ,

ವಿಷ್ಣು ಅಂತ."

   ಮಾತಿನ ಮೊನೆ ನಾಟಿತಾದರೂ, ಪದ್ಮನಾಭ ಆಡಿದುದು ವ್ಯಂಗ್ಯೋಕ್ತಿ ಎಂಬುದನ್ನು 

ಒಪ್ಪಿಕೊಳ್ಳಲು ಇಷ್ಟಪಡದೆ ಗಜಾನನ ನುಡಿದ :

   " ಛೆ! ಛೆ! ಗಣೇಶಭವನದ ಮಾಲಿಕ ವಿಷ್ಣುಮೂರ್ತಿಗಳು. ಸ್ವಲ್ಪ ದಿವಸದ ಕೆಳಗೆ 

ನಿಮ್ಮಲ್ಲಿಗೆ ಬಂದಿದ್ದರಲ್ಲ !"

   "ಅವರೊ?" 
   "ಅವರೇ. ಗೋವಿಂದರಾಯರನ್ನ ಅಳಿಯ ಮಾಡ್ಕೊಳ್ತಾರೆ."
   "ಹಾಗೋ?"
   "ಅಂತೂ ನಿಮ್ಮಿಬ್ಬರ ಮಾವನ ಮನೆಗಳೂ ಒಂದೇ ಊರಲ್ಲಿ".
   "ಒಬ್ಬರದು ಮೊದಲಾಗಲಿ. ನೀವು ಮಲಕೊಳ್ಳಿ."
   "ನಿದ್ದೆ ಬಂತೆ ?" 
   "ಹೌದು," ಎಂದು ಪದ್ಮನಾಭ ಮತ್ತೊಮ್ಮೆ ಆಕಳಿಸಿದ. ಈಗಿನದು ನಟನೆ.
   ಹೊರಗಿದ್ದ ಗೋವಿಂದ ಒಳಕ್ಕೆ ಬರುತ್ತ, " ದೀಪ ಆರಿಸಿಬಿಡ್ಲಾ ಗಜಾನನ ? ಹೊದ್ದು 

ಕೊಳ್ಳೋಕೆ ಕೊಟ್ಟಿದಾರಾ ?" ಎಂದು ಕೇಳಿದ.

   "ಓಹೋ ಆರಿಸಿ." 
   ಗೋವಿಂದ ಲಾಂದ್ರದ ಬತ್ತಿ ಆರುವವರೆಗೂ ಕಿರಿದುಗೊಳಿಸಿ, ಮಲಗಿಕೊಂಡು