ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೧೨೨ ನೋವು

ಮನೆಯಲ್ಲಿ ದೀಪ ನಮಸ್ಕಾರಕ್ಕೆಂದು ಕುಳಿತಿದ್ದ ತಾಯಿಯಲ್ಲಿಗೆ ಬಂದರು.

        ಆಕೆ ತಲೆ ಎತ್ತಿ ನೋಡಿದಾಗ ಶ್ರೀನಿವಾಸಯ್ಯ ಅಂದರು :
       " ನಾನು ಹೇಳಿದ್ದನ್ನೇ ಶಾಸ್ತ್ರಿಗಳೂ ಹೇಳಿದ್ರು."
        ದೇವರ ಮುಂದೆ ಕುಳಿತು ಮನಸ್ಸು ಶಾಂತವಾಗಿದ್ದ ದೊಡ್ಡಮ್ಮ ನುಡಿದರು : 
       " ಇಬ್ಬರೂ ನೋಡಿಯಾಯ್ತು,         ಮೂರನೆಯವರೂ ಒಬ್ಬರು ನೋಡ್ಲಿ.       ನಾಳೆ
ಹುಡುಗರ ಜತೆ ನಗರಕ್ಕೆ ಹೋಗಿ ಬಾ, ಶೀನ."
       " ನಾನೇ ?         ನಗರಕ್ಕೆ ಹೋಗಿಬರಲೆ ?" 
      ಭಾಗ್ಯನಗರವೆಂದೂ ಶ್ರೀನಿವಾಸಯ್ಯನವರ ಆಕರ್ಷಿಸಿರಲಿಲ್ಲ.      ಮಕ್ಕಳ ದೃಷ್ಟಿಯಿಂದ ಪಟ್ಟಣವಾಸಿಗಳೊಡನೆ ಸಂಬಂಧ ಬೆಳೆಸಲು ಅವರು ಒಪ್ಪಿದ್ದರೇ ಹೊರತು–
      ಸುತ್ತಮುತ್ತಲ ಹಳ್ಳಿಗಳಿಂದಲೋ ತಮ್ಮ ಪೂರ್ವಜರು ವಾಸವಾಗಿದ್ದ ಮಲೆನಾಡಿ 

ನಿಂದಲೋ ಸೋಸೆಯರನ್ನು ಹುಡುಕಿ ತರುವುದು ಸಾಧ್ಯವಿದ್ದಿದ್ದರೆ–

      ದೊಡ್ಡಮ್ಮ ಅಂದರು :
      "ಗೋವಿಂದ ಈ ರೀತಿ ಹಟ ಮಾಡ್ತಿರುವಾಗ,  ನಿಮ್ಮ ಸಂಬಂಧ ಬೇಡ ಅಂತ 

ವಿಷ್ಣುಮೂರ್ತಿಗೆ ಹೇಳಿ ಕಳಿಸೋದು ಚೆನ್ನಾಗಿರೋಲ್ಲ, ಶೀನ. ಇವನು ಅಲ್ಲಿ ಏನೇನು ಮಾಡ್ಕೊಂಡಿದಾನೋ ಯಾರಿಗೆ ಗೊತ್ತು ? ಇವನ ಜತೆಗೆ ನೀನೂ ಹೋಗು. ಆಗ ನಿನೆಗೇ ವಿಷಯ ಗೊತ್ತಾಗುತ್ತల్ల ?"

        ಮುಖವನ್ನು ಅಂಗೈಯಿಂದ ಒರೆಸಿ,          ಶ್ರೀನಿವಾಸಯ್ಯ, " ಆಗಲಿ ಹೋಗ್ತೀನಿ" 

ಎ೦ದರು.

        ...ಅಡುಗೆ ಮನೆಯಲ್ಲಿದ್ದ ಭಾಗೀರಥಿ, ದೇವರ ಮನೆಯಿಂದ ಕೇಳಿಸಿದ ಮಾತುಗಳನ್ನು 

ಮೆಲುಕು ಹಾಕಿ, ' ಬೀಸುತ್ತಿರುವ ಈ ದೊಣ್ಣೆಯಿಂದ ನಾನು ತಪ್ಪಿಸಿಕೊಳ್ಳೋದುಂಟೆ ? ' ಎಂದು ಮನಸ್ಸಿನೊಳಗೇ ಗೋಳಾಡಿದಳು.

        ...ರಾತ್ರೆ ಸೀಮೆ ಎಣ್ಣೆಯ ದೀಪವನ್ನು ಆರಿಸಿದ ಮೇಲೆ, ಗಂಡನ ಹತ್ತಿರಕ್ಕೆ ಸರಿದು,

ಭಾಗೀರಥಿ, “ ರೀ. ಮಾವ ನಾಳೆ ನಗರಕ್ಕೆ ಹೋಗ್ತಾರಂತೆ," ಎಂದಳು.

     " ಹೋಗಲಿ.    ಏನೀಗ ? ಎಂದ, ಗೋಪಾಲ.
     " ಅಯ್ಯೋ..." ಎಂದು ಭಾಗೀರಥಿ ನಿಟ್ಟುಸಿರುಬಿಟ್ಟಳು.


                                                         ೧೬


      ರಾತ್ರೆ ಆ ಹೋಟೆಲಿನ ಮನುಷ್ಯ ಗಜಾನನ ಪದ್ಮನಾಭನ ಕೊಠಡಿಯಲ್ಲಿ ಮಲಗಿದ್ದ.

ಮೊಮ್ಮಗನೊಡನೆ ಮದುವೆಯ ಪ್ರಸ್ತಾಪ ಮಾಡಲು ದೊಡ್ಡಮ್ಮ ಅಳುಕಿರಬಹುದು. ಆದರೆ, ಸಂಚೋಚಪಡುವ ಅಗತ್ಯ ಗಜಾನನನಿಗೆ ಇಲ್ಲವಲ್ಲ.

      ಅವನೆ೦ದ  :
     " ಮೋಹನರಾಯರು ನಿಮ್ಮ ವಿಷಯ ಬಹಳ ಕೇಳ್ತಾ ಇದ್ರು ಪದ್ಮನಾಭರಾವ್."