ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ώ೨೬ ನೋವು


       "ನಿನ್ನ ತಂದೆ ನಿನಗೋಸ್ಕರ ಹೆಣ್ಣು ಹುಡುಕ್ತಿದಾನೆ."
       " ಇದೇನು ಇದ್ದಕ್ಕಿದ್ದ ಹಾಗೆ—" 
       " ದಿವಸ ಇದ್ದ ಹಾಗೆ ದಿವಸ ಇರುತ್ತಾ ಪದ್ಮ? ನನಗೆ ವಯಸ್ಸಾಯ್ತು. ಇನ್ನೆಷ್ಟು 

ವರ್ಷ ನಾನು ಬದುಕಿರೋಕೆ ಸಾಧ್ಯ ಹೇಳು. ಗೋವಿಂದನ್ದೂ ನಿನ್ದೂ ಮದುವೆ ನೋಡಿ ಕಣ್ಣು ಮುಚ್ಬೇಕೂಂತ ನನ್ನ ಆಸೆ."

       "........."
       " ಹುಡುಗಿ ವಿದ್ಯಾವತಿಯಾಗಿರ್ಬೇಕು–ಅಂತ ಶೀನನಿಗೆ ಹೇಳಿದೀನಿ."
       " ನನಗಿನ್ನೂ ಓದೋದು ಇದೆಯಲ್ಲ, ದೊಡ್ಡಮ್ಮ ?"
       "ನಂಗೊತ್ತಿಲ್ವೆ ? ಅಗತ್ಯ ಓದು. ಓದಿ ಪ್ಯಾಸಾಗು. ಶೀನ ಹೇಳ್ತಿದ್ನಲ್ಲ-ಈಗಿರೋ 

ಸ್ಕೂಲ್ನ ಹೈಸ್ಕೂಲು ಮಾಡಿ, ಅದಕ್ಕೆ ನೀನು ಹೆಡ್ಮೇಸ್ಟ್ರಾಗಿ......"

       " ಸರಿ, ಸರಿ ! ಅಂತೂ ಹುಟ್ಟಿದ ಮಕ್ಕಳು ಸಾಯೋವರೆಗೂ ಅವರಿಗಾಗಿ ಎಲ್ಲ 

ಏರ್ಪಾಟನ್ನೂ ಹೆತ್ತವರೇ ಮಾಡ್ತಾರೆ ಅನ್ನು !"

       " ಹಾಗಂದರೇನೊ ಪದ್ಮ !"
       " ಹೋಗ್ಲಿ ಬಿಡು, ದೊಡ್ಡಮ್ಮ."
       ಹುಡುಗ ಬೇಸರಗೊಂಡನಲ್ಲ ಎಂದು ದೊಡ್ಡಮ್ಮನಿಗೆ ಕಸಿವಿಸಿ.
       " ಪದ್ಮ, ನಾನು ಸಾಕಿದ ಮಗು ಅಲ್ವೇನೊ ನೀನು ? ಹೀಗೆ ಕೇಳಿದೆ ಅಂತ ಬೇಜಾರು 

ಬೀಳೋದೆ ?"

       "ಇಲ್ಲ, ಇಲ್ಲ."
       "ಎಲ್ಲಿ—ನನ್ನ ಮಗು ಸ್ವಲ್ಪ ನಕ್ಕರೆ ಚೆನ್ನಾಗಿರುತ್ತಪ್ಪ."
       " ನಾನು ಏಳ್ಲಾ ದೊಡ್ಡಮ್ಮ?"
       "ನಿನ್ನ ತಂದೆ ಇವತ್ತು ನಗರಕ್ಕೆ ಹೋಗ್ತಾನೆ. ನಿಶ್ಚಿತಾರ್ಥದ ಮಾತೆಲ್ಲ ಆಗೋಕ್ಮುಂಚೆ 

ನೀನೊಮ್ಮೆ ಕನ್ಯೇನ ನೋಡಪ್ಪ."

       " ఇದೊಳ್ಳೆ ಪೀಕಲಾಟವಾಯ್ತಲ್ಲಾ !"
       "ನಿನ್ನನ್ನ ಈ ಭೂಮಿಗೆ ಇಳಿಸಿ ಬೆಳೆಸಿದ ಈ ಮುದಿಜೀವಕ್ಕೋಸ್ಕರ 

ಇದೊಂದನ್ನ ಮಾಡೋಕೆ ಆಗೊಲ್ವೇನೋ ಪದ್ಮ ?"

       ದೊಡ್ಡಮ್ಮನ ಕಂಠ ಗದ್ಗದಿತವಾಗಿತ್ತು. ಪದ್ಮನಾಭ ಬೆಚ್ಚಿಬಿದ್ದ. ತನ್ನ ಮುತ್ತಜ್ಜಿ 

ಅತ್ತುದನ್ನು ಎಂದೂ ಆತ ಕಂಡವನಲ್ಲ. ಆ ಕಣ್ಣುಗಳಿಂದ ಕಂಬನಿ ಒಸರಬಹುದೆನ್ನುವುದೂ ಅವನ ಪಾಲಿಗೆ ಕಲ್ಪನಾತೀತವಾಗಿತ್ತು.

       ದೊಡ್ಡಮ್ಮ ಅತ್ತಿರಲಿಲ್ಲ. ಆದರೆ ಧ್ವನಿ ಕಂಪಿಸಿತ್ತು.
       ಪದ್ಮನಾಭ ಎದ್ದು ಅಂದ :
       "ನಿಮಗೆ ಹ್ಯಾಗೆ ಸರಿ ತೋಚುತ್ತೋ ಹಾಗೆ ಮಾಡಿ ದೊಡ್ಡಮ್ಮ."
       ದೊಡ್ಡಮ್ಮ ತಲೆ ಎತ್ತಿ, ಎದ್ದು ನಿಂತ ಮೊಮ್ಮಗನನ್ನು ನೋಡಿದರು. ಅವರ 

ಕಣ್ಣುಗಳು ಮಿನುಗುತ್ತಿದ್ದುವು.

      ಮೃದುವಾದ ಧ್ವನಿಯಲ್ಲಿ ಅವರೆಂದರು :