ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೨೭

           "ನೂರು ವರ್ಷ ಬಾಳು, ಪದ್ಮ. ನನ್ನ ಆಯುಸ್ಸೂ ನಿನಗಿರಲಪ್ಪ." 
          ...ಅಡ್ಡಮಳೆ, ಹಳ್ಳಿಯವರ ಓಡಾಟ-ಸಡಗರ ರಂಗಣ್ಣನಲ್ಲಿ ಸ್ವಲ್ಪಮಟ್ಟಿಗೆ ಹೊಸ ಚೇತನ 

ವನ್ನು ತುಂಬಿದುವಾದರೂ, ಅವನೊಳಗೆ ದಟ್ಟೈಸುತ್ತಿದ್ದ ಬೇಸರದ ಕಾರ್ಮೋಡವನ್ನು ಚೆದರಿ ಸಲು ಅವು ಶಕ್ತವಾಗಲಿಲ್ಲ.

           ತರಗತಿಗಳು ಆರಂಭವಾಗುವ ತನಕ ಇಲ್ಲಿಯೇ ಯಾಕಿರಬೇಕು ? ವಸತಿ-ಗೃಹವಂತೂ 

ತೆರೆದೇ ಇರುತ್ತದೆ. ಸ್ವಲ್ಪ ದಿನ ಮುಂಚಿತವಾಗಿಯೇ ಅಲ್ಲಿ ಬೀಡು ಬಿಡುವುದಲ್ಲವೆ ಮೇಲು? ಎಂದು ರಂಗಣ್ಣ ಯೋಚಿಸಿದ. ಮನಸ್ಸಿಗೆ ಒಪ್ಪಿಗೆಯಾಗುವ-ನಾಲಿಗೆಗೆ ರುಚಿಸುವ- ಒಂದಿಷ್ಟು ಕಾಫಿ ತಿಂಡಿ. ಹೊಗೆ ಕಾಣುವರೆಂಬ. ವಾಸನೆ ಹಿಡಿಯುವರೆಂಬ ಯಾವ ಭಯವೂ ಇಲ್ಲದೆ ಧೂಮಪಾನ; ಗೆಳೆಯರ ಒಡನಾಟ. ಚಲಚ್ಚಿತ್ರ ಮಂದಿರಗಳಿಗೆ ಭೇಟಿ. ನಿರಾತಂಕವಾಗಿ ಅಧ್ಯಯನ...

           ಅಂತಹ ವಿಚಾರ ಸರಣಿ ಬಲಗೊಳ್ಳಲು ಹೆಚ್ಚಿನ ಕಾರಣಗಳು ಬೇಕೆ? 
           ಆದರೆ ತಂದೆಯ ಅನುಮತಿ ಪಡೆದು ರಂಗಣ್ಣ ಹೊರಡಬೇಕು. ಅವರಿಗೆ ತಿಳಿಸುವುದು 

ಹೇಗೆ? ರಜಾ ಮುಗಿಯಿತು ಎಂದು ಸುಳ್ಳಾಡಲೆ? ತನ್ನಿಂದಾಗುವ ಕೆಲಸವೆ ಅದು ?

           ವಿಚಿತ್ರ. ತಂದೆಗೆ ತಾನೆ ಅಚ್ಚುಮೆಚ್ಚಿನವನು, ಆದರೆ ತನ್ನೊಡನೆ ಅವರು ಮಾತನಾಡು 

ವುದು ಕಡಮೆ. ಅವರ ವಾತ್ಸಲ್ಯ ತುಂಬಿದ ಧ್ವನಿ. ಮಗಳಿಗೇ ಮಿಾಸಲು. ಮೊನ್ನೆಯಷ್ಟೇ ಅನ್ನಲಿಲ್ಲವೆ ?

          " ಸುಬ್ಬೀ..." 
          " ಏನಪ್ಪ ?" 
          " ಅರಿದಿರೋ ಸೀರೆ ಯಾಕ್ಮೊಗ ಉಟ್ಕೊಂತೀಯಾ ?" 
          " ಅತ್ತೆಮ್ಮ ಒಲ್ಕೊಡ್ತೀನಿ ಅಂದವರೆ." 
          "ಅದೇನು ಒಲೀತೀಯಮ್ಮ? ಆ ನಿಂಗಿ ಬಂದರೆ ಅವಳಿಗೆ ಕೊಟ್ಬುಡು. ರಂಗಣ್ಣ 

ನಗರಕ್ಕೆ ಒಂಟಾಗ ಅವನ ಜತೆ ನಾನೂ ಓಗಿ, ನಿಂಗೆ ಎರಡು ಒಳ್ಳೇ ಸೀರೆ ತಕಂಬರ್ತೀನಿ."

          "ಊನಪ್ಪ."
         ಮೊದಲಾಗಿದ್ದರೆ ಸುಭದ್ರೆ ಅಣ್ಣನ ಕೊಠಡಿಗೆ ಬಂದು ಚಪ್ಪಾಳೆ ತಟ್ಟಿ ಕುಣಿಯುತ್ತಿದ್ದಳು : 
          " ನನಗೆ ಸೀರೆ ಬತ್ತದೆ ! ಒಸ ಸೀರೆ ಬತ್ತದೆ !" 
          [ಅದಕ್ಕೂ ಹಿಂದೆ : 
          "ನಂಗೆ ಲಂಗ ಬತ್ತದೆ! ಒಸ ಲಂಗ ಬತ್ರದೆ !"]
          ತನ್ನಿಂದೇನಾದರೂ ಅಂತಹ ಪ್ರಮಾದ ಆಗಿದ್ದರೆ ಸುಮ್ಮನಿರುತ್ತಿದ್ದರೆ ತಂದೆ ? 

ಆ ಜ್ವಾಲಾಮುಖಿ ಆರಲು ಬಹಳ ಕಾಲ ಬೇಕಾಗುತ್ತಿತ್ತು, ಬಹಳ ಕಾಲ.

          ಆದರೆ ಸುಬ್ಬಿಯ ವಿಷಯದಲ್ಲಿ ಅವರು ದೂರ್ವಾಸನಾಗಲಿಲ್ಲ. 
          ಹೆಣ್ಣುಮಕ್ಕಳು ಎಂದರೆ ಎಲ್ಲ ತಂದೆಯರೂ ಹೀಗೆಯೋ ಏನೋ. 
          ಆ ದಿನದ ಬಳಿಕ ರಂಗಣ್ಣ—ಸುಭದ್ರೆಯರ ಸಂಬಂಧವೂ ಹೊಸ ರೂಪ ತಳೆದಿತ್ತು 

ಮಾತು ಎಷ್ಟು ಬೇಕೋ ಅಷ್ಟು. ನೋಟದಲ್ಲಿ ನುಡಿಯಲ್ಲಿ ತ್ವೇಷ ದ್ವೇಷಗಳಿರಲಿಲ್ಲವಾದರೂ ಬಾಲ್ಯದಲ್ಲಿದ್ದ ಆತ್ಮೀಯತೆಯ ಹತ್ತು ತಂತುಗಳಲ್ಲಿ ಕೆಲವು ಕಡಿದು ಹೋದಂತಿತ್ತು.