ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ನೋವು

    "ಏನು ?"
    "ಮದುವೆಯಾದ್ಮೇಲೆ ಪದ್ಮ ಹಾಸ್ಟೆಲ್ನಲ್ಲಿ ಇರೋ ಬದಲು ಮನೇಲೇ

ಇದ್ಕೊ೦ಡು ಓದಬಹುದಂತೆ."

    " ಅವನು ಓದಿದ ಹಾಗೇ ಇದೆ.' 
    " ಆ ವಿಷಯ ಪದ್ಮನನ್ನೇ ಕೇಳ್ಬೇಕು, ಅಂದ್ಬಿಟ್ಟೆ." 
    ದೊಡ್ಡಮ್ಮ ನಕ್ಕು ಅಂದರು: 
    " ಮದುವೆ ಮಾಡ್ಕೊಟ್ಮೇಲೆ ಹುಡುಗೀನ ಇಲ್ಲಿಗೆ ಕಳಿಸ್ತಾರೆ ತಾನೆ?" 
    " ಮೋಹನರಾಯರು ದೀಪಾವಳಿ ಆದ್ಮೇಲೆ ಕಳಿಸ್ಬೌದೇನೋ, ವಿಷ್ಣುಮೂರ್ತಿಗಳು 

ಮಾತ್ರ ಮದುವೆ ಆದ ಮಾರನೇ ದಿವಸವೇ ಗೋವಿಂದರಾಯರು ತಮ್ಮ ಹೆಂಡತಿಯ ಮೂಗಿಗೆ ದಾರ ಹಾಕಿ ಕರಕೊಂಡು ಹೋಗ್ಬಹುದು, ಅಂದು ಹಹ್ಹ!"

   ವಿಷ್ಣುಮೂರ್ತಿಯ ಹಾಸ್ಯೋಕ್ತಿ ಕೇಳಿ ಆಗ ನಕ್ಕಿದ್ದರು ಶ್ರಿನಿವಾಸಯ್ಯ. ಆ ಉಕ್ತಿ 

ಯನ್ನು ಪುನರುಚ್ಚರಿಸಿ ಈಗಲೂ ಅವರು ನಕ್ಕರು.

   ಮತ್ತೆ ಎರಡು ತುತ್ತು ಮೌನವಾಗಿ ಉಣ್ಣಲು ಮಗನಿಗೆ ಅವಕಾಶವಿತು, [ರಾಗವೆಳೆಯ 

ತೊಡಗಿದ ಶ್ರಿಪಾದುವನ್ನು ರಮಿಸಿ] ದೊಡ್ಡಮ್ಮ ಅಂದರು :

   " ಹೋಗಲಿ, ಲಗ್ನಪತ್ರಿಕೆ ಬರೆಸೋದಕ್ಕಾದರೂ ಇಲ್ಲಿಗೆ ಬರ್ತಾರೆ ತಾನೆ?" 
   " ಓಹೋ. ನೀವು ಹೇಳಿದ ದಿಲವಸ ಹಾಜರಾಗ್ತೀವಿ ಅಂತ ವಿಷ್ಣುಮೂರ್ತಿ ಅಂದ್ರು. 

ಅಲ್ದೆ ಅವರ ಹುಡುಗನ ಹೋಟ್ಲಂತೂ ಮುಂದಿನ ತಿಂಗಳಿಂದ್ಲೇ ಇಲ್ಲಿ ಶುರುವಾಗುತ್ತೆ.”

   ಮತ್ತೆ ಸುಮ್ಮನಿದ್ದು ನಿಶ್ಯಬ್ದವಾಗಿ ನಿಟ್ಟುಸಿರುಬಿಟ್ಟು, ದೊಡ್ಡಮ್ಮ ಅಂದರು : 
   " ಏನೇ ಇರಲಿ, ಶೀನ: ಮನೆ ತುಂಬಿಸೋದು ವಿಜ್ಜಂಭಣೆಯಿಂದ ಆಗ್ಬೇಕು. ಹಳ್ಳಿ 

ಯವರು ಏನಂದ್ಕೋತಾರೆ ? ಮನೆತನದ ಘನಸ್ತಿಕೇನ ನಾಲ್ಕು ಜನ ಕೊಂಡಾಡೋ ಹಾಗೆ ಇರ್ಬೇಕು."

   " ಹೌದೌದು. [ಭಾಗೀರಥಿಗೆ- "ಸಾಕಮ್ಮ"] ಅಷ್ಟು ಮಾಡದೆ ಇರೋದುಂಟೆ? 

ಸುಗ್ಗಿ ಆದ್ಮೇಲೆ ಲಗ್ನ ಇಟ್ಕೊ೦ಡಿದ್ರೆ ಚೆನ್ನಾಗಿರ್ತಿತು, ಈಗ ಅದು ಸಾಧ್ಯವಿಲ್ಲ ಅನ್ನೋದೊಂದೇ ಬೇಸರ. ದೊಡ್ಡದಲ್ಲ. ಮಳೆಗಾಲವಾದರೇನಂತೆ ? ನಡಿಯುತ್ತೆ."

   "ದೇವರಿದಾನೆ. ಅಡ್ಡಿ ಆತಂಕ ಏನೂ ಬರೋದಿಲ್ಲ. ಶೀನ." ಎಂದು ನುಡಿದು 

ಶ್ರಿಪಾದನನ್ನೆತ್ತಿಕೊಂಡು ದೊಡ್ಡಮ್ಮ ಎದ್ದರು. ಪಡಸಾಲೆಯನ್ನು ದಾಟಿ ತಲೆಬಾಗಿಲಲ್ಲಿ ನಿಂತು, "ಹುಡುಗರು ಇಷ್ಟು ಹೊತ್ತಿಗೆ ಬರಬೇಕಾಗಿತ್ತು" ಎಂದುಕೊಳ್ಳುತ್ತ ಅoಗಳದಾಚೆಗೆ ಹೊಲಗಳುದ್ದಕ್ಕೆ ದೃಷ್ಟಿ ಬೀರಿದರು. ಬಿಸಿಲು ಕಣ್ಣಗಳನ್ನು ಕುಕ್ಕಿ, ನೀರು ಒಸರುವಂತೆ ಮಾಡಿತು.

   ...ಭಾಗೀರಥಿ ಮಾವನ ಊಟದೆಲೆಯನ್ನು ಎತ್ತಿ ಎಸೆದು ಗೋಮೆ ಮಾಡಿದಳು.

ಮಾವನಿಗಾಗಿ ವೀಳೆಯದೆಲೆ ಅಡಿಕೆಯ ಪೆಟ್ಟಿಗೆಯನ್ನು ಪಡಸಾಲೆಯಲ್ಲಿ ಹಾಸುಗಂಬಳಿಯ ಮೇಲಿರಿಸಿದಳು.

   ಒ೦ದೇ ಹೊತ್ತಿನ ಅವಧಿಯಲ್ಲಿ ಎಷ್ಟೊ೦ದನ್ನು ತಿಳಿದುಕೊ೦ಡ೦ತಾಯಿತು ಅವಳು! 
   ಶ್ರಿಮಂತ ಬೀಗರು ದೊರೆತರೆ ಆಗುವುದೇ ಹೀಗೆ. ಆ ಹೋಟೆಲ್ ಮಾಲಿಕನೂ