ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೩೫

ಲಾಯರೂ ಸೇರಿ ತನ್ನೆ ಮಾವನನ್ನು ಇನ್ನು ಕುಣಿಸ್ತಾರೆ. ಅವರ ಕುಮಾರಿಯರು ತನ್ನುನ್ನು ಮಣಿಸುತ್ತಾರೆ.

   ಬರಲಿ,ಬರಲಿ, ತಾನು ನೋಡಿಯೇ ಬಿಡಬೇಕು ಒಂದು ಕೈನ. ಮನೆಯ ಹಿರಿಯ ಸೊಸೆ 

ತಾನು. ಆತ್ತೆ ಇಲ್ಲದ ಮನೆಯಲ್ಲಿ ತಾನೇ ಯಜಮಾನಿತಿ. ಇನ್ನೆಷ್ಟು ದಿನ ಇರುತ್ತಾರೆ ಈ ದೊಡ್ಡಮ್ಮ? ಯಾರೂ ತನ್ನ ಅಣತಿಯನ್ನು ಮಿಾರಿ ನಡೆಯಬಾರದು. ಹಾಗೇನಾದರೂ ನಡೆದರೆ ತಾನು ಬಿಟ್ಟೇನೇ ?

   ...ಶ್ರಿನಿವಾಸಯ್ಯ ದಿಂಬಿಗೊರಗಿ ವೀಳೆಯದೆಲೆಗೆ ಸುಣ್ಣ ಹಚ್ಚಿ ಬಾಯಲ್ಲಿಟ್ಟರು. 

ಅವರ ಎಡದವಡೆಯ ಒಂದು ಹಲ್ಲು ತೊಂದರೆ ಕೊಡುತ್ತಿತ್ತು, ಮಡಚಿದ ಎಲೆಯನ್ನೂ ಚೂರಡಿಕೆಯನ್ನೂ ಬಲದವಡೆಯೊಳಕ್ಕೆ ತುರುಕಿ ಮೆಲ್ಲನೆ ಜಗಿದರು.

   ದೊಡ್ಡಮ್ಮನಿಗೆ ವರದಿ ಒಪ್ಪಿಸಿ ಆದಮೇಲೆ, ಈಗ, 'ವಿಶ್ರಾ೦ತಿ ವಿಶ್ರಾ೦ತಿ' ಎಂದು ಅವರ 

ಮೈ ಕೂಗಿ ಕರೆಯತೊಡಗಿತು.

   ಜಗಿದು ಉಳಿದುದನ್ನು ಪೀಕದಾನಿಯಲ್ಲಿ ಉಗುಳಿ, ಹಾಗೆಯೇ ಶ್ರಿನಿವಾಸಯ್ಯ ಹಾಸು

ಗಂಬಳಿಯ ಮೇಲೆ ಮೈ ಚಾಚಿದರು.

   ಶ್ರಿಪಾದನಿಗೆ ನಿದ್ದೆ ಬ೦ದಿತ್ತು. 
   " ಭಾಗೀ, ಇಲ್ಲಿ ಬಾ. ನಿನ್ನ ಮಗ ಕಿರಿಕಿರಿ ಮಾಡ್ತಿದಾನೆ.  ಸ್ವಲ್ಪ ಮಲಗ್ಸು," ಎಂದರು

ದೊಡ್ಡಮ್ಮ.

   ಭಾಗೀರಥಿ ಅವನನ್ನೆತ್ತಿಕೊಂಡು, ಮಲಗಿಸಲು ತನ್ನ ಕೊಠಡಿಗೆ ಹೋಗುತ್ತ," ನೀವು 

ಊಟ ಮಾಡಿ, ದೊಡ್ಡಮ್ಮ," ಎಂದಳು.

   " ನನಗೇನೂ ಅವಸರವಿಲ್ಲ," ಎಂದರು ದೊಡ್ಡಮ್ಮ.
   ...ಬಂದವನು ಗೋಪಾಲನೊಬ್ಬನೇ. 
   " ಪದ್ಮ ಎಲ್ಲಿ ?" ಎಂದು ದೊಡ್ಡಮ್ಮ ಕೇಳಿದುದಕ್ಕೆ, “ ಅವನನ್ನು ಯಾರು ಕಂಡ? 

ಬೆಳಗ್ಗೆ ಜತೇಲಿದ್ದ. ಆಮೇಲೆ ಎತ್ತ ಹೋದನೊ ?" ಎಂದು ಗೋಪಾಲ ನುಡಿದು, ಕೈಕಾಲು ತೊಳೆದುಕೊಂಡು ಊಟಕ್ಕೆ ಕುಳಿತ.

   ಮಗುವನ್ನು ಮಲಗಿಸಿ ಬಂದ ಭಾಗೀರಥಿಗೆ," ಗೋಪೂಗೆ ಬಡಿಸಿ ನೀನೂ ಊಟ 

ಮಾಡ್ಬಿಡು ಭಾಗೀ. ಪದ್ಮ ಬಂದರೆ ನಾನು ನೋಡ್ಕೋತೀನಿ," ಎಂದರು ದೊಡ್ಡಮ್ಮ.

   ಪದ್ಮ ಬಂದುದು, ಗೋಪೂ– ಭಾಗೀರಥಿಯರು ಊಟ ಮುಗಿಸಿ ಕೆಲ ನಿಮಿಷಗಳಾದ

ಬಳಿಕ.

   ದೊಡ್ಡಮ್ಮನ ಕರೆಗೆ ಓಗೊಟ್ಟು, ಪಾದಗಳಿಗೆ ನೀರು ಚಿಮುಕಿಸಿ ಬಂದು, ಪದ್ಮನಾಭ 

ಊಟಕ್ಕೆ ಕುಳಿತ.

   ದೊಡ್ಡಮ್ಮ ತಾವೇ ಬಡಿಸಲು ನಿಂತರು. 
   " ಗೋಪೂ ಜತೆ ಇದ್ದೆಯೇನೋ ಅಂದ್ಕೊ೦ಡಿದ್ದೆ." 
   ಪದ್ಮ ಉಣ್ಣುತ್ತ ಅಂದ : 
   " ಹಾಗೆ ನದೀ ದಂಡೆ ಉದ್ದಕ್ಕೂ ನಡಕೊಂಡು ಹೋದೆ. ತಡವಾಯ್ತು" 
   "ನಿನ್ನ ತಂದೆ ನಗರದಿಂದ ವಾಪ್ಸು ಬಂದಿದಾನೆ."