ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ನೋವು

   " ನೋಡ್ದೆ. ಪಡಸಾಲೇಲಿ ಮಲಕೊಂಡಿದಾರಲ್ಲ." 
   " ಲಾಯರು ಮೋಹನರಾಯರ ಮಗಳ ಜಾತಕವೂ ನಿನ್ದೂ ಕೂಡುತ್ವಂತೆ, ಹುಡುಗಿ 

ಓದಿದವಳು. ಚೆನಾಗಿದ್ದಾಳಂತೆ."

   "ಸ್ವಲ್ಪ ಸಾರು, ದೊಡ್ಡಮ್ಮ."
   " ನೀನೊಮ್ಮೆ ನಿನ್ನ ಅಣ್ಣಯ್ಯನ ಜತೆ ನಗರಕ್ಕೆ ಹೋಗಿ ಹುಡುಗೀನ ನೋಡ್ಕೋಂಡು 

ಬರ್ತೀಯಾ ?"

   " ಸಾರು ಸಾಕು." 
   " ನಿಧಾನವಾಗಿ ಊಟ ಮಾಡು. ಏನೀಗ ಅವಸರ ?" 
   " ಏನೀಗ ಅವಸರ ಅಂತ ನಾನೂ ಕೇಳಿದ್ರೆ ?" 
   " ಇಲ್ಲ ಶೀನೆ, ಗೋವಿಂದನ್ದೂ ನಿನ್ದೂ ಮದುವೆ ಇಷ್ಟು ಆಯ್ತೂ೦ದ್ರೆ-" 
   " ಆಗಲಿ ದೊಡ್ಡಮ್ಮ. ಪುನಃ ಅದರ ಪ್ರಸ್ತಾಪ ಯಾಕೆ ?" 
   " ಅದಕ್ಕೇ ಅಂದಿದ್ದು. ಹುಡುಗೀನ ಒಮ್ಮೆ ನೋಡಿ—" 
   " ಅಣ್ಣಯ್ಯನಿಗೆ ಒಪ್ಪಿಗೆಯಾಗ್ಲಿಲ್ವೆ ?" 
   " ಛೆ! ನೀನೊಬ್ಬ. ಹುಡುಗೀನ ನೋಡಿ ಬಾ ಅ೦ದ್ರೆ...ಅನ್ನ ಹಾಕ್ತೀನಿ, ಮಜ್ಜಿಗೆಗೆ." 
   " ಅನ್ನ ಬೇಡ, ಹಸಿವಿಲ್ಲ. ಆ ಲೋಟದಲ್ಲಿ ಮಜ್ಜಿಗೆ ಕೊಟ್ಬಿಡು." 
   " ಬೆಳೆಯೋ ಹುಡುಗರು ಹೀಗಂದ್ರೆ ಹ್ಯಾಗೋ? ಒಂದು ತುತ್ತು ಹಾಕ್ತೀನಿ. ಒಂದೇ

ತುತ್ತು."

   " ಆಗಲಿ, ಬಡಿಸು. ಹ್ಞ, ಸಾಕು." 
   " ಇಕೋ, ಮಜ್ಜಿಗೆ, ಅನ್ನಕ್ಕೆ ಹಾಕಿ ಉಳಿದದ್ದನ್ನ ಕುಡಿದ್ಬಿಡು... ಅದೇ ಆ ಹುಡುಗಿ 

ವಿಷಯ... "

   " ಕೇಳಿಸ್ತು ದೊಡ್ಡಮ್ಮ. ಧಾರಾಳವಾಗಿ ನೋಡೋಣ."
   " ಬಂಗಾರ ಕಣಪ್ಪ, ನೀನು."
   " ಊಟ ಮಾಡು , ದೊಡ್ಡಮ್ಮ, ನಿನ್ನೆದಿನ್ನೂ ಆಗಿಲ್ಲ ಅಂತ ಕಾಣುತ್ತೆ."
   " ನೀನು ಕೊಟ್ಟ ಒಪ್ಪಿಗೆಯಿಂದ್ಲೇ ಹೊಟ್ಟೆ ತುಂಬಿದೆ. ಆಗಲಿ, ಒಂದು ತುತ್ತು ನಾನೂ 

ತಿ೦ತೀನಿ."

   ಪದ್ಮನಾಭ ಎದ್ದು ಕೈ ತೊಳೆಯಲು ಹೋದ.
   ಅವನ ಎಲೆಯು ಎದುರು ತಾವೊಂದನ್ನು ಹಾಕಿಕೊಂಡು ದೊಡ್ಡಮ್ಮ ಕುಳಿತರು:
   ಕೊಠಡಿಗೆ ಬಂದ ಪದ್ಮನಾಭ ಕಿಟಿಕಿಯಾಚೆಗೆ ಬಿರುನೋಟ ಬೀರುತ್ತ ಒಬ್ಬನೇ ಸ್ವಲ್ಪ 

ಹೊತ್ತು ಕುಳಿತ.

   ಬಳಿಕ ಎದ್ದು ಒಳಗೆ ನಡೆದು, ಊಟದ ಕೊನೆಯ ಹಂತದಲ್ಲಿದ್ದ ದೊಡ್ಡಮ್ಮನನ್ನುದ್ದೇಶಿಸಿ 

ಅವನೆಂದ :

   " ನಿನ್ನ ಹತ್ತಿರ ಒಂದು ವಿಷಯ ಮಾತಾಡ್ಬೇಕಲ್ಲ, ದೊಡ್ಡಮ್ಮ."