ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                       ನೋವು                                   ೧೪೩
  "ಅದೇ–ವಿಷ್ಣುಮೂರ್ತಿಗಳು ಒಂದು ಬುಟ್ಟಿ ಹಣ್ಣುಹಂಪಲು ಕೊಳ್ಳೋಕೆ ಹೊರಟಿದ್ರು. ನಿಮ್ಮ ತಂದೆ ಕೈಲಿ ಏನೂ ಕಳಿಸ್ಲಿಲ್ಲ; ನೀನಾದರೂ ತಗೊಂಡು ಹೋಗು.ಅಂದ್ರು. ಬಸ್ಸಿನಿಂದಿಳಿದು ಎರಡು ಮೈಲಿ ಹೊರೋದು ಯಾರು ? ಇವತ್ತು ಬೇಡಿ, ಆಳುಗಳು ಬಸ್ ಹತ್ತಿರಕ್ಕೆ ಬರೋದಿಲ್ಲ,ಅಂದೆ. ಕಡೆಗೂ ಹಟ ಮಾಡಿ ಒಂದೆರಡು ಡಜನ್ ಒಳ್ಳೇ ಚಿಕ್ಕು ಹಣ್ಣು ಕಟ್ಟಿಸಿದ್ರು. ಅಂದಹಾಗೆ ಶ್ರೀಪಾದನಿಗೇಂತ ಒಂದು ಗೊಂಬೆ ಕಳಿಸಿದಾರೆ-ಪ್ಲಾಸ್ಟಿಕಿಂದು. ಅವತ್ತು ಏನೂ ಕೊಡದೇ ಬಂದ್ಬಿಟ್ಟೆ-ಅಂದ್ರು. ಅತ್ತಿಗೇ, ಶ್ರೀಪಾದನನ್ನು ಕಳಿಸ್ಕೊಡಿ, ಅತ್ತಿಗೇ.”
    ಭಾಗೀರಥಿ ಮಗನನ್ನು ಕಳುಹಿಸಿಕೊಡಲಿಲ್ಲ.
    ದೊಡ್ಡಮ್ಮ ಕಟ್ಟನ್ನು ಬಿಚ್ಚಿ, ಗೊಂಬೆಯನ್ನು ನೋಡಿ,  "ಚೆನ್ನಾಗಿದೆ. ಭಾಗೀ, ಶ್ರೀಪಾದೂನ ಕರಕೊಂಡ್ಬಾ." ಎಂದರು.
    ಈಗ ಭಾಗೀರಥಿ ಬರಲೇಬೇಕಾಯಿತು.
    ಪ್ಲಾಸ್ಟಿಕ್ ಮಗುವನ್ನು ಮುಟ್ಟಲು ಶ್ರೀಪಾದ ಒಂದು ಕ್ಷಣ ಹಿಂಜರಿದ. ಅದರ ಬಣ್ಣದ ಕಣ್ಣುಗಳನ್ನು, ಮೂಗನ್ನು, ಬಾಯಿಯನ್ನು ಮುಟ್ಟಿ ನೋಡಿದ, ಬಳಿಕ ನಕ್ಕ.
    "ತಕೋ," ಎಂದು ದೊಡ್ಡಮ್ಮ, ಗೊಂಬೆಯನ್ನು ಮಗುವಿನ ಕೈಗಳಲ್ಲಿಟ್ಟರು. 
    ಮಗು ಬಾಯಿ ತೆರೆದು "ಹೊಹೊಹೋ !" ಎಂದು ನಗುವ ಸದ್ದು ಮಾಡಿತು.  
    "ನಾನೇ ತರಬೇಕಾಗಿತ್ತು. ಅವಸರದಲ್ಲಿ ಹಾಗೇ ಬಂದ್ಬಿಟ್ಟೆ. ವಿಷ್ಣುಮೂರ್ತಿಗಳು ಮರೀಲಿಲ್ಲ. ಲೋಕಾನುಭವಿ ಅನ್ನೋದು ಅದಕ್ಕೆ." ಎಂದರು ಶ್ರೀನಿವಾಸಯ್ಯ.
    ಭಾಗೀರಥಿ ಶ್ರೀಪಾದನನ್ನೆತ್ತಿಕೊಂಡು ಒಳಕ್ಕೆ ಹೋದಳು. ಗೊಂಬೆಯನ್ನು ಮಗುವಿನ ಕೈಯಿಂದ ಕಿತ್ತು ಎಲ್ಲಾದರೂ ಎಸೆಯಬೇಕು ಎನಿಸಿತು ಅವಳಿಗೆ. ಗೊಂಬೆಯನ್ನೊಮ್ಮೆ ಹಿಡಿದಳು ಕೂಡಾ. ಆದರೆ ಶ್ರೀಪಾದನ ಹಿಡಿತ ಕಪಿಮುಷ್ಟಿಯಾಗಿತ್ತು.
    ಗೋವಿಂದ ಚಿಕ್ಕು ಹಣ್ಣುಗಳನ್ನು ರಟ್ಟಿನ ಪೆಟ್ಟಿಗೆಯಿಂದ ಹೊರ ತೆಗೆದು ಸಾಲಾಗಿ ನೆಲದ ಮೇಲಿಟ್ಟ.
    "ದೊಡ್ಡ ಸೈಜು," ಎಂದರು ಶ್ರೀನಿವಾಸಯ್ಯ.
    "ಒಂದಕ್ಕೆ ಮೂರಾಣೆ," ಎಂದ ಗೋವಿಂದ.
    "ಹೌದೆ ? ಮೂರಾಣೆಯೆ ?  ಅಷ್ಟೊಂದು ಬೆಲೆಯೆ ?” ಎಂದು ದೊಡ್ಡಮ್ಮ ಆಶ್ಚರ್ಯ ವ್ಯಕ್ತಪಡಿಸಿದರು.
    ನಗುತ್ತ, ಗೋವಿ೦ದನೆ೦ದ :
    "ನಾವೂ ತೋಟದಲ್ಲಿ ಚಿಕ್ಕು ದ್ರಾಕ್ಷೆ ಎಲ್ಲಾ ಬೆಳೆಸಬೇಕಂತೆ. ನಗರದಲ್ಲಿ ಒಳ್ಳೆ ಬೆಲೆ ಸಿಗುತ್ತೇಂತ ವಿಷ್ಣುಮೂರ್ತಿಗಳು ಅಂದ್ರು."
    ಶ್ರೀನಿವಾಸಯ್ಯ ಏನೊ ಹೇಳಲಿಲ್ಲ.
    ದೊಡ್ಡಮ್ಮ ಎದ್ದು ಒಳಹೋದರು.
    ಗೋವಿಂದ ಕೊಠಡಿಗೆ ಹೋದಾಗ ಶ್ರೀನಿವಾಸಯ್ಯ ಅಂದರು :
    "ಪದ್ಮ ನಾಳೆ ನಗರಕ್ಕೆ ಹೋಗ್ತಾನೆ. ಕಾಲೇಜು ಶುರುವಾಗೋ ಸಮಯ ಹತ್ತಿರ ಬಂತಂತಲ್ಲ."
    “ಕಾಲೇಜು ಬಾಗಿಲು ತೆರೆಯೋಕೆ ಇನ್ನೂ ಹದಿನೈದು ದಿವಸ ಇದೆ.  ಹೋಗಲಿ.