ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ನೋವು " ಎಲಾ ! ನೂರು ರೂಪಾಯಿ ಕೊಟ್ಟವ್ನಲ್ಲಾ ! ವೆ‌ಂಕ್ಟಪ್ಪನಿಂದ್ಲೇ ಸಾಲ ಇಸ್ಕಂಡಿದ್ದ." " ಅದು ಅಡ್ವಾನ್ಸು." " ಸರಿ. ಸರಿ. ಈಗೇನ್ಮಾಡೋಕಾಯ್ತದೆ ?" " ಬಡವ, ಸತ್ಹೋದ; ಗೌಡರ್ನ ಕೇಳಿ ಒಂದೈವತ್ತು ರೂಪಾಯಿ ತಂದ್ಕೊಡ್ತೀನಿ– ಅಂತ ಲಾಯರಿಗೆ ಹೇಳ್ದೆ," -

       " ಐವತ್ತು ರೂಪಾಯಿ ! ನಾನು ಕೊಡ್ಲೆ ?"                                           
        "ಕಣಿವೇಹಳ್ಳಿ ಮಾನದ ಪ್ರಶ್ನೆ. ನನ್ಹತ್ರ ಇದ್ದಿದ್ರೆ ಕೊಟ್ಬಿಡ್ತಿದ್ದೆ."                       ಗೌಡರು ಅಂತರ್ಮುಖಿಯಾದರು. ಸರದ ಬೆಲೆಯಾಗಿ ದೊರೆತದ್ದು ಐವತ್ತೇ ರೂಪಾಯಿ.     ಬಡ್ಡಿ ಇಲ್ಲವೆಂದರೂ ಅಸಲಾದರೂ ಮುಟ್ಟಿಸಬೇಕಲ್ಲ ವೆಂಕಟಪ್ಪನಿಗೆ ? ಕೈಯಿಂದ ಒಂದೈವತು ರೂಪಾಯಿ ತಾವು ಹಾಕಬೇಕು. ಮೇಲೆ ಮತ್ತೆ ಐವತ್ತು ರೂಪಾಯಿ ಲಾಯರಿಗೆ ಎಂದರೆ ? ಜಿಪುಣತನದ ಮಾತಲ್ಲ. ಆದರೆ ಅನಗತ್ಯವಾಗಿ ಕೈಯಿಂದ ದುಡ್ಡು ಸುರಿಯಬೇಕಲ್ಲ? ಅಷ್ಟಕ್ಕೂ ಈ ಹುಡುಗ ಲಾಯರಿಗೆ ದುಡು ಮುಟ್ಟಿಸುತಾನೋ ಇಲ್ಲವೋ...
    'ನೆಟ್ಟನೋಟದಿಂದ ಗೌಡರು ಗೋವಿಂದನನ್ನು ನೋಡಿದರು.
     "ಅವರು ಫೀಸು ಕೇಳೋದು ಸಾಜ, ಗೋವಿಂದಪ್ಪ, ಆದರೆ ನಿಂಗಿ ತಾವ ಏನೈತೆ ?            ಒಂದು ಮಾಡಾನ. ಇಪ್ಪತ್ತೈದು ರೂಪಾಯಿ ನಾನು ಕೊಡ್ತೀನಿ. ಅದನ್ನ ಲಾಯರಿಗೆ ಒಪ್ಪಿಸಿ ನೀನು ಕೈಮುಗಿದ್ಬಿಡು." -
    ವಿಜಯಿಯ ಮುಗುಳುನಗೆಯನ್ನು ಹತ್ತಿಕ್ಕಿ, ಮುಖವನ್ನು ನೀಳಗೊಳಿಸಿ ಗೋವಿಂದ ನೆಂದ :

"ನಾನು ಐವತ್ತು ಅಂದಿದ್ದೆ. ಲಾಯರು ಬೇಜಾರು ಮಾಡ‍್ಕೋತಾರೆ. ಒಳ್ಳೇವರು,ಪಾಪ." " ಒಳ್ಳೆವರೇನೆ. ಒಪ್ಕೋಂತೀನಿ. ಆದರೆ ಈ ಸಲ ದೊಡ್ಡ ಮನಸ್ಸು ಮಾಡಿ ಇಪ್ಪತ್ತೈದು ತಗೊಳ್ಳಿ." –ಗೌಡರ ಸ್ವರದಲ್ಲಿ ಅಸಹನೆ ಬೆರೆತಿತ್ತು. ಅವರು ಮನೆಯ ಕಡೆ ನೋಡಿ, " ರಂಗಾ ! ರಂಗಾ !" ಎ೦ದು ಕರೆದರು. ನಿಮಿಷ ಬಿಟ್ಟು ಸುಭದ್ರೆ ಕಾಣಿಸಿಕೊಂಡಳು. "ರಂಗಣ್ಣ ಗುಡಿಗೆ ಓಗವ್ನೆ ಅಪ್ಪ," ಎಂದಳು. ಮೈ ಕೈ ತುಂಬಿಕೊಂಡು ನೋಡುವಹಾಗಿದ್ದ ಹುಡುಗಿಯನ್ನು ಗೋವಿಂದನ ಕಣ್ಣುಗಳು ಶಕ್ತಿ ಮಿಾರಿ ಹೀರಿದುವು. ನೆನಪಿನ ಸುಳಿಯಲ್ಲಿ ಪದ್ಮನಾಭನೂ ಕಾಣಿಸಿಕೊಂಡ.

        "ಸರಿ !"ಎಂದರು ಗೌಡರು. ಸುಭದ್ರೆ ಒಳ ಹೋದಳು. ಗೌಡರು ಗಂಟಲಿನಿಂದ ಗೊಣಗಾಟದ ಅಸ್ಪಷ್ಟ ಸ್ವರ ಹೊರಡಿಸಿ, ತುಸು ಕಷ್ಟದಿಂದ ಎದ್ದು [ಗೋವಿಂದ: 'ವಯಸ್ವಾಯ್ತು ಇವರಿಗೆ ಅಣ್ಣಯ್ಯನೂ ಕೂತೋರು ಏಳುವಾಗ ಹೀಗೇ ಮಾಡ್ತಾರೆ.'] ಅಂಗಳದ ಅಂಚಿಗೆ ಹೋಗಿ, ಜಗಿದುದರ ಅವಶೇಷವನ್ನು ಉಗುಳಿದರು. -

ದುಡ್ಡು ತರಲು ಹೋದರು ಎಂದು ಗೋವಿಂದ ಊಹಿಸಿದ.