ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                                                  ನೋವು                                                         ೧೬೯

ಗೋಪಾಲನ ಕಡೆ ತಿರುಗಿ ನೋಡಲಿಲ್ಲ. ಮಾತನಾಡಲೂ ಇಲ್ಲ.

       ನಿಟ್ಟುಸಿರು ಬಿಟ್ಟು ದೊಡ್ಡಮ್ಮ ಮೊಮ್ಮಗನ ಕಡೆ ಹೊರಳಿ ಅಂದರು :
       "ನಿನ್ನ ಹೆಂಡತೀನ ಮಾತಾಡ್ಸು ಗೋಪೂ." 
       ಗೊಗ್ಗರ ಧ್ವನಿಯಲ್ಲಿ ಗೋಪಾಲನೆಂದ: 
      " వినాంగిದೆಯೆ ? ಎನಾಗಿದೆಯೆ నిನಗೆ ?"
       ಈಗ ಭಾಗೀರಥಿಯ ಅರಳಿದ ಕಣ್ಣುಗಳು ತಿವಿಯುವ ನೋಟ ಬೀರುತ್ತ ಗಂಡನನ್ನು
ನೋಡಿದವು.
       ಅವಳು ಅವುಡುಗಚ್ಚಿ ಬಾಯಿ ತೆರೆದಳು.
       ಆಕ್ರೋಶದಂತಿತ್ತು ಅದರಿಂದ ಹೊರಟ ಸ್ವರ.
       "ಗಂಡ ಅಂತೆ ಗಂಡ ! ಗಂಡಸoತೆ ಗಂಡಸು !  ಹೋಗೋ ಆಚೆಗೆ ! ಹೋಗೋ !

ನನ್ನೆ ಗಂಡನಾದೋನು ಅವರ ಪಕ್ಷ ಸೇರ್ಕೋತಾನೆಯೆ ? ಬಾಯಿಗೆ ಬೆಟ್ಟಿಟ್ರೆ ಚೀಪೋಕ್ಭರುತ್ತಾ. ನಿಂಗೆ ! ಮೈಮುಟ್ಬೇಡ ಅಂದೆ ! ಈ ಮೈ ನಿನ್ದಲ್ಲ !"

        ಗೋಪಾಲನ ಕಂಠ ಉಮ್ಮಳಿಸಿತು. ಕಣ್ಣುಗಳಲ್ಲಿ ಕಂಬನಿ ಉಕ್ಕಿ ಬಂತು.
        ಧ್ವನಿ ಏರಿಸಿ ದೊಡ್ಡಮ್ಮ ಅಂದರು : 
        "ಭಾಗೀ ! ಭಾಗೀ ! ಗೋಪಾಲ ಎಷ್ಟು ದೂರ ನಿಂತಿದಾನೆ ಕಾಣ್ಸೊಲ್ವೇನೆ ? ಯಾರೂ 

ನಿನ್ನ ಮೈ ಮುಟ್ತಾ ಇಲ್ವಲ್ಲೇ."

         ಭಾಗೀರಥಿಯ ಧ್ವನಿ ಮತ್ತಷ್ಟು ಕಠೋರವಾಯಿತು.
        "ಮತ್ಯಾರು ನನ್ನ ಸೀರೆ ಎಳೀತಿರೋರು ? ಯಾರೂ – ಅಂದೆ!" ಎಂದು ನುಡಿದು, 

ಒಮ್ಮೆಲೆ ಪ್ರಲಾಪಿಸತೊಡಗಿ, " ಮಾವಯ್ಯ ! ಸೀರೆ ಎಳೀಬೇಡಿ ಮಾವಯ್ಯ ! ಅಯ್ಯೋ !" ಎ೦ದು ಆಕೆ ರೋದಿಸಿದಳು.

         ಶ್ರೀನಿವಾಸಯ್ಯ ಉಗುಳು ನುಂಗಿದರು.
         ನಾಲ್ಕು ನಿಮಿಷ ಭಾಗೀರಥಿಯ ಅಳಲೊಂದೇ ತೆರೆತೆರೆಯಾಗಿ ಎದುರು ಬಂದುದಕ್ಕೆಲ್ಲ

ಅಪ್ಪಳಿಸುತ್ತಾ, ಹರಿಯಿತು.

         ಅಳು ನಿಂತು ಮತ್ತೆ ಭಾಗೀರಥಿಯ ಧ್ವನಿ ಕೇಳಿಸಿತು :
         " ಸೋಮಪುರದ ತೇರಿಗೆ ಬರ್ತಾರಾ ಇವರು ? ತೇರಿನ ಮೇಲೆ ಇವರು ಕೂತ್ಕೋಬೇಕು,

ನಾನು ಎಳೀಬೇಕು–ಅಲ್ವಾ ? ಅಕಾ ತೇರು ! ತೇರು ! ನನ್ನ ಮೇಲೆ ಚಕ್ರ ಹರೀತಿದೆ ! ಅಯ್ಯಯ್ಯೋ ! ಅಪ್ಪಾ-ಅಮ್ಮಾ ! ಇಂಥಾ ಗತಿ ತಂದಿರಲ್ಲ ನನಗೆ... [ಕ೦ಬబని-ಮತ್ತೆ ಒಮ್ಮೆಲೆ ಸಿಡಿದು] ಕಡಿದ್ಹಾಕೇನು ! ಸಿಗದ್ಹಾಕೇನು ! [ಎದೆ ಬಡೆದುಕೊಳ್ಳುತ್ತ] ನಾನು ಚಂಡಿ ! ನಾನು ದುರ್ಗಿ ! ನಾನು ಮಾರಮ್ಮ! ನಾನು ಮುನಿಯಮ್ಮ !"

            ಗೋಪಾಲ ಕುಸಿ ಕುಳಿತು ತಲೆ ಚಚ್ಚಿಕೊಂಡ. 
            ದೊಡ್ಡಮ್ಮನತ್ತ ಹೊರಳಿ ಆತ ಕೇಳಿದ : 
           “ಈಗೇನ್ಮಾಡೋಣ ದೊಡ್ಡಮ್ಮ ? ಇದೇನಿದು ದೊಡ್ಡಮ್ಮ ?
           ಎಳೆಯ ಮಗುವನ್ನು ಸಂತೈಸುವಂತೆ ಅವರೆಂದರು :
         " అಳಬೇಡ, ಗೋಪೂ.  ಸರಿಹೋಗ್ತಾಳೆ- ಅಳಬೇಡ."