ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮

                                                ನೋವು
       "ನೀನು ಹೋಗೊಲ್ವೇನೊ?" ಎಂದು ದೊಡ್ಡಮ್ಮ ಕೇಳಿದ್ದರು.
       "ಮಳೆ," ಎಂದು ಹೇಳಿ ಗೋಪಾಲ ನುಣುಚಿಕೊಂಡಿದ್ದ. 
     ಆದರೆ ಶ್ರೀನಿವಾಸಯ್ಯ, ಅತಿಥಿಗಳೊಡನೆ ಉದ್ಘಾಟನೆಯ ಕಾರ್ಯಕ್ರಮ ಮುಗಿಸಿ 

ಹಿಂತಿರುಗಿದಾಗ, ಗೋಪಾಲನ ಕೋಣೆಯಿಂದ ಮಾತು ಕೇಳಿಸಿತೆಂದು ಅಲ್ಲಿತನಕ ಬಂದು, ಮಗನನ್ನು ಕಂಡು, "ಇದೇನೊ ಗೋಪೂ ? ಹೋಗ್ಬರೋದಿಲ್ವೇನೊ ? ಏಳು ನೀನೇನು ಹೆಣ್ಣೆ ಹೀಗೆ ನಾಚೋದಕ್ಕೆ ? ಹೋಗ್ಬಿಟ್ಟು ಬಾ," ಎಂದಿದ್ದರು.

        ಅದಕ್ಕೂ ಮೊದಲೇ, "ನನ್ನಾಣೆ. ಆ ಹೋಟ್ಲಿನ ಹತ್ರಕ್ಕೆ ಹೋಗ್ಕೂಡದು ನೀವು."

ಎಂದು ಭಾಗೀರಥಿ ಗಂಡನಿಗೆ ಆಣೆ ಹಾಕಿದ್ದಳು.

        ಈಗ ತಂದೆ ಹೀಗೆ ಅಂದರೆಂದು ಅನಿವಾರ್ಯವಾಗಿ ಗೋಪಾಲ ಎದ್ದ.  ಬೇಗನೆ ಬಂದು 

ಬಿಟ್ಟರಾಯಿತು ಎಂದುಕೊಂಡ. ಹೆಂಡತಿಯ ಕಡೆ ತಿರುಗಿ ನೋಡದೆ ಹೊರಟು ಬಿಟ್ಟ.

         ಅಲ್ಲಿಗೇ ಕೆಲವೇ ನಿಮಿಷಗಳಲ್ಲಿ ಬೀರ ತಂದ ಸಂದೇಶ:
        " ಎ೦ಗೆ೦ಗೋ ಆಡ್ತಾ ಅವರೆ."
        ಏನಾಗಿರಬಹುದು ಭಾಗೀರಥಿಗೆ ? ಏನಾಗಿರಬಹುದು ? 
        ಅಂಥದೇನಿದ್ದರೂ ದೊಡ್ಡಮ್ಮ ಇಲ್ಲವೆ ? ಔಷಧಿ ಕೊಡುವುದಿಲ್ಲವೆ ?
        ಗೋಪಾಲನೆಂದುಕೊಂಡ: ಅವಳು ಆಣೆ ಇಟ್ಟ ಮೇಲೂ ಹೊರಟುಬಂದದ್ದು

ತಪ್ಪಾಯಿತು. ಈ ಗಜಾನನನಿಗೂ ತನಗೂ ಇರುವ ಸ್ನೇಹ ಅಷ್ಟರಲ್ಲೇ ಇದೆ. ಈತ ದೂರದ ಸಂಬಂಧವಾದರೆ ಗೋವಿಂದನಿಗೆ. ತನಗಲ್ಲ......

        ಬೀರನೂ ಗೋಪಾಲನೂ ಬೇಗ ಬೇಗನೆ ನಡೆದು, ದಾರಿ ನೇರವಾಗಿದ್ದು ಸರಿಯಾಗಿದ್ದ 

ಕಡೆ ಒಮ್ಮೊಮ್ಮೆ ಓಡಿ, ಮನೆಯನ್ನು ಸಮಿಾಸಿದರು.

       ಪಡಸಾಲೆಯಲ್ಲಿ ಢಾಳಾಗಿ ಉರಿಯುತ್ತಿದ್ದ ದೀಪ ದೂರದಿಂದಲೇ ಗೋಪಾಲನಿಗೆ 

ಕಾಣಿಸಿತು.

       ಅಂಗಳಕ್ಕೆ ಕಾಲಿರಿಸಿದಾಗ, ಪಡಸಾಲೆಯ ಒಂದು ಮೂಲೆಯಲ್ಲಿ ತಲೆಗೂದಲು ಕೆದರಿ

ಕುಳಿತಿದ್ದ ಹೆಂಡತಿಯನ್ನೂ ಆಕೆಗೆ ತುಸು ದೂರದಲ್ಲಿದ್ದ ದೊಡ್ಡಮ್ಮ ಹಾಗೂ ತಂದೆಯನ್ನೂ ಗೋಪಾಲ ಕoಡ.

       ಜಗಲಿಯ ಒಂದು ಕೊನೆಯಲ್ಲಿ ಗುಸುಗುಸು ಮಾತನಾಡುತ್ತ ನಿ೦ತಿದ್ದ ವಿಷ್ಣುಮೂರ್ತಿ
– ಮೋಹನರಾಯರಾಗಲೀ,  ಹೊರಗಿನ ಕೊಠಡಿಯಲ್ಲಿ ಅಳುತ್ತಿದ್ದ ಶ್ರೀಪಾದನನ್ನು 

ರಮಿಸುತ್ತಲಿದ್ದ ಗೋವಿಂದ ಮತು ಕುರ್ಚಿಯಮೇಲೆ ಮುದುಡಿ ಕುಳಿತಿದ್ದ ಮೋಹನ ರಾಯರ ಮಗನಾಗಲೀ, ಗೋಪಾಲನಿಗೆ ಕಾಣಿಸಲಿಲ್ಲ.

       ಮೊಮ್ಮಗ ಬಂದೊಡನೆ ದೊಡ್ಡಮ್ಮ ಅಂದರು :
       " ನೋಡು ಭಾಗೀ, ನಿನ್ನ ಗಂಡ ಬಂದಿದಾನೆ." 
         ಏನೊ೦ದೂ ಅರ್ಥವಾಗದೆ, ತೆರೆದ ಕಣ್ಣಗಳನ್ನು ಮುಚ್ಚదేయుల ಗೋಪಾల నింತ.
         ಸಾಸಿವೆ ಕಾಳು ಬಿದ್ದರೂ ಸಪ್ಪಳವಾಗುವ ಮೌನವಿತ್ತು ಮನೆಯಲ್ಲಿ ಆ ಒಂದು ಕ್ಷಣ. 
        ಎದುರು ಗೋಡೆಯ ಕಡೆ ನೆಟ್ಟಿದ್ದ ಭಾಗೀರಥಿಯ ಬಿರುನೋಟ ಬದಲಾಗಲಿಲ್ಲ.
ಮುಖ ಭಯಾನಕವಾಗಿತ್ತು. ಸ್ನಾಯುಗಳು ಗಂಟಿಕ್ಕಿಕೊಂಡು ಅದು ವಿಕಾರವಾಗಿತ್ತು. ಆಕೆ