ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ನೊವು ಕೊಡುವುದು. ದಿನಗೂಲಿಗೆ ನೇಮಿಸಿಕೊಳ್ಳುವುದು— ಇದೆಲ್ಲ ಸುಲಲಿತವಾಗಿ ಪ್ರತಿ ವರ್ಷ ನಡೆಯುತಿತ್ತು. ಈ ಸಲ, ಒಂದು ದಿನದ ಕೆಲಸ ಮೂರು ದಿನಗಳಿಗೆ ಬೆಳೆಯಿತು.

    " ಯಾಕೊ ಬರಲಿಲ್ಲ?" ಎಂದು ಕೇಳಿದರೆ, " ಗೌಡರಲ್ಲಿಗೆ ಹೋಗಿದ್ವಿ" ಎಂಬ ಉತ್ತರ ದೊರೆಯುತ್ತಿತ್ತು.
     ಗೋಪಾಲ ಎದೆಗುಂದಲಿಲ್ಲ. ಇದ್ದವರೇ ತುಸು ಹೆಚ್ಚು ದುಡಿಯುವಂತೆ ಮಾಡಿದ. ಅವರ ಜತೆ ತಾನು ಮೈ ಮುರಿದು ದುಡಿದ. ಬೆಳಗ್ಗೆ ಹೊಲಕ್ಕೆ ಹೋದವನು ಮರಳುತ್ತಿದ್ದುದು ರಾತ್ರೆಯೇ, ಮಧಾಹ್ನದ ಉಪಾಹಾರವನ್ನು ಅವನಿದ್ದೆಡೆಗೇ ದೊಡ್ಡಮ್ಮ ಒಯ್ದು ಕೊಡುತ್ತಿದ್ದರು. ಮನೆಗೆ ಹಿಂದಿರುಗಿದ ಗೋಪಾಲ ಬಿಸಿನೀರನ್ನು ಹೇರಳವಾಗಿ ಹುಯ್ದುಕೊಂಡು ಸ್ನಾನ ಮಾಡಿ, ಉಂಡು, ಮಲಗಿ ಬಿಡುತ್ತಿದ್ದ. ಸೋತ ದೇಹಕ್ಕೆ ನಿದ್ದೆಯ ಮದ್ದು ಸಿಹಿಯಾಗಿರುತ್ತಿತ್ತು.
     ಕೆಲ ದಿನ ಹೆಂಡತಿಯ ಮೇಲೆ ಅವನಿಗೆ ಬಹಳ ಸಿಟ್ಟಿತ್ತು. ಮುಂದೆ ಮಾತು ಎಷು    ಬೇಕೋ ಅಷ್ಟು.
     ಒಂದು ದಿನೆ ಮಾತ್ರ ಒಳಗಿನ ಸಂಕಟ ತಡೆಯಲಾಗದೆ ಅವನೆಂದ :                       
     " ಆವತು ಮಾನ ತೆಗೆದೆ. ಅಲ್ಲಾ, ನಿನಗೆ ಏನಾಗಿತ್ತೇ ರೋಗ ?"                                    
     ಭಾಗೀರಥಿ ಏನನ್ನೂ ಹೇಳಲಿಲ್ಲ ಕಣ್ಣೀರು ಮೌನವಾಗಿ ಅವಳ ಕಪೋಲಗಳ ಮೇಲಿಂದ ಹರಿಯಿತು.
     ಅಷ್ಟಕ್ಕೆ ಸುಮ್ಮನಾದ ಗೋಪಾಲ.                             
     ಶ್ರೀನಿವಾಸಯ್ಯನವರಿಗೆ ಬಿಡುವಿಲ್ಲ. ಈ ಸಲ ಬೇಸಾಯದ ಭಾರವನ್ನು ಹಿರಿಯ ಮಗನಿಗೆ ಅವರು ಸಂಪೂರ್ಣವಾಗಿ ವರ್ಗಾಯಿಸಿದ್ದರು.
     ತಿಂಗಳು ದಾಟಿತು. ಗೋವಿಂದನೊಡನೆ ಎರಡು ಸಾರೆ ಶ್ರೀನಿವಾಸಯ್ಯ ನಗರಕ್ಕೆ ಹೋಗಿ ಬ೦ದರು. 
      ಗೋವಿಂದನಿಂದ ವಿಷಯ ಮೊದಲೇ ತಿಳಿದಿದ್ದರೂ,"ನಿಮ್ಮ ಹಿರಿಯ ಸೊಸೆಗೆ ಹ್ಯಾಗಿದೆ?” ಎಂದು ವಿಷ್ಟುಮನೂರ್ತಿಯವರೂ  " ಈಗ ಚೆನಾಗಿದ್ದಾರೆ, ಅಲ್ವೆ?" ಎಂದು ಮೋಹನ ರಾಯರೂ ಶ್ರೀನಿವಾಸಯ್ಯನವರನ್ನು ಕೇಳಿದರು.
      "ಓಹೋ ! ಪೂರ್ತಿ ಗುಣ, ಪೂರ್ತಿ ಗುಣ." ಎಂದರು ಶ್ರೀನಿವಾಸಯ್ಯ, ಎದೆಯ    ಒಳ ಬಡಿತವನ್ನು ಅಂಗಿಯ ಕೆಳಗೆ ಬಚ್ಚಿಟುಕೊಂಡು.
      ಕಾಮಾಕ್ಷಿ ಭಾಗೀರಥಿಯ ಆ ಕಾಹಿಲೆಗೆ ಮಹತ್ವ ಕೊಟ್ಟಿರಲಿಲ್ಲ. ಆದರೆ ಆರತಿಗೆ ಒಡಹುಟ್ಟಿದವನು ಬಣ್ಣಿಸಿದುದನ್ನು ಕೇಳಿ ಮೊದಲು ಭಯವಾಗಿತು.
      ಆಕೆಯ ತಾಯಿ ಭಯನಿವಾರಣೆ ಮಾಡಿದ್ದರು.                                 
      " ನಿನಗ್ಯಾತಕ್ಕೆ ಆ ಯೋಚ್ನೆ ? ನೀನೇನು ಆ ಹಳ್ಳಿಗೆ ಹೋಗ್ಬೇಕೆ? ಆ ಮನೇಲಿರ್ಬೇಕೆ? ಅವಳ ಜತೆ ಸಂಸಾರ ಮಾಡ್ಬೇಕೆ ?"
      ಈ ಮದುವೆಯೇ ಬೇಡ-ಎಂದುಬಿಡುತ್ತಿದ್ದಳೇನೋ ಆರತಿ, ಆದರೆ ಆಗಲೇ ಒಮ್ಮೆ, ಮನೆಯವರಿಗೆ ತಿಳಿಯದ ಹಾಗೆ ತಮ್ಮನನ್ನೂ ಕರೆದುಕೊಂಡು ಆಕೆ ಮ್ಯಾಟಿನಿಗೆ ಹೋಗಿದ್ದಳು,

ಪದ್ಮನಾಭನೆ ಜತೆ. ಅನಂತರ ಹೋಟೆಲಿಗೆ ಉದ್ಯಾನಕ್ಕೆ.