ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೊವು ೧೭೫

     ಸ್ವಲ್ಪ ಓಡಾಡಿ ಬೇಸತ್ತ ಮೇಲೆ, " ನಾನೊ ಬರೋಲ್ಲಮ್ಮ, ನೀನೊಬ್ಬಳೇ ಹೋಗು," ಎಂದುಬಿಟ್ಟ ಆರತಿಯ ತಮ್ಮ .
     ತೊಲಗಿತಲ್ಲ ಶನಿ, ಒಳ್ಳೆದಾಯ್ತು-ಎಂದುಕೊಂಡ ಪದ್ಮನಾಭ, ಕಾಲೇಜು ಮುಗಿದ ಮೇಲೆ ನೇರವಾಗಿ ಮೋಹನರಾಯರಲ್ಲಿಗೇ ಬರತೊಡಗಿದ್ದ. ಮನೆ ಸಾಕಷ್ಟು ದೊಡ್ಡದು. ಯಾರ ತಂಟೆಯೂ ಇಲ್ಲದೆ ಹರಟೆ ಹೊಡೆಯುತ್ತ, ಸಣ್ಣ ಪುಟ್ಟ ಆಟಗಳನ್ನಾಡುತ್ತ, ಹೊತ್ತು

ಕಳೆಯಲು ಅಲ್ಲಿ ಸ್ಥಳವಿತ್ತು,ಅವಕಾಶವಿತ್ತು.

      ಪದ್ಮನಾಭ ಯಾವಳೋ ಹುಡುಗಿಯೊಟ್ಟಿಗೆ ಓಡಾಡ ತ್ತಿದ್ದಾನೆ ಎಂಬ ಸುದ್ದಿ ಹಬ್ಬಿತು ಹಾಸ್ಟೆಲಿನ ಕಾಲೇಜಿನ ವರ್ತುಲದಲ್ಲಿ ಸ್ನೇಹಿತರು ಪದ್ಮನಾಭನನ್ನು ಗೇಲಿ ಮಾಡಿದರು.
      -" ಏನಮ್ಮ ಸಮಾಚಾರ ?” 
      –" ಇಂಟ್ರಡ್ಯೂಸ್ ಮಾಡು, ದೊರೆ." 
      ಪದ್ಮನಾಭನಿಗೆ ಅದರಿಂದೆಷ್ಟೋ ಸಮಾಧಾನ. ನಾಳೆ ಮದುವೆಯಾದ ಮೇಲೆ 'ಅದು ಲವ್ ಮ್ಯಾರೇಜ್' ಎನ್ನಬೇಕು ಜನ. 
      ಇದಕ್ಕಿಂತ ಹೆಚ್ಚು ಬಲವತ್ತರವಾದ ಆಸೆ ಅವನಿಗಿದ್ದುದು, ಆರತಿಯ ಜತೆ ತನ್ನನ್ನು ಪ್ರಮದೆ ನೋಡಬೇಕು–ಎಂಬುದು. ಆರತಿಗೆ ಅದರ ಸುಳಿವು ಹತ್ತದಂತೆ ಒಂದೆರಡು ಸಲ ಪ್ರಯತ್ನಿಸಿದ ಮೇಲೆ, ಒಮ್ಮೆ ಪದ್ಮನಾಭ ಯಶಸ್ವಿಯಾದ.
       ದಿಕ್ಕಿನಿಂದ ಬಂದ ಹುಡುಗಿಯನ್ನು ನೋಡಿ ಈತ ಏನೋ ಒಂದು ತರಹೆ ಮಾಡಿದನಲ್ಲ-ಎಂದು ಆರತಿಗೆ ಸಿಟ್ಟು.
      "ಯಾರ್ರೀ ಅವಳು ?"
      "ಕ್ಲಾಸ್ಮೆಟ್." 
      " ಓ! ‍ಫ್ರೆಂಡು ಅನ್ನಿ."
      " ಫ್ರೆಂಡು ನೀನು. ಅವಳು ಕ್ಲಾಸ್ಮೆಟ್."
      " ಮಾತು ಗೀತು ಇಲ್ವೊ ?"
      " ಛೆ! ಅವಳಿಗೆ ಆರತಿಯಾಗಿದೆ.”
      " ಏನಂದಿರಿ ? "
      ತಪ್ಪು ತೊದಲಿದೆನಲ್ಲ ಎಂದು ಪದ್ಮನಾಭನಿಗೆ ಆಶ್ಚರ್ಯ.
      "ಮದುವೆಯಾಗಿದೆ ಆರತಿದೇವಿ-ಅಂದೆ."
      " ಹಾಗಾದರೆ ಸರಿ. ಅಲ್ಲಾ, ನಾನು ಸ್ವಡಿಸ್ ಡಿಸ್ಕಂಟಿನ್ಯೂ ಮಾಡಬಾರದಾಗಿತು..."
      " ಇರಲಿ, ಬಿಡು." 
      " ಒಂದು ಕೇಳ್ಲಾ ?"
      " ಏನು ?"
      " ನಾನು ಕಾಲೇಜಿಗೆ ಪುನಃ ಸೇರ್ಕೊಳ್ತೀನಿ."
      " ಸೇರ್ಕೋ." 
      " ಒಟ್ಟಿಗೇ ಸ್ಟಡೀ ಮಾಡ್ಬಹುದು."
      "ಓ ಹೋ !"