ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮ ನೊವು

     ಒಳ್ಳೆಯ ಹಳೆಯ ಕಾರು ಎಷ್ಟಕ್ಕೆ ಸಿಗುವುದೋ ? ಊಹೂ.   ಹಳೆಯದನ್ನು ಕೊಡುವುದು ಗೌರವವಲ್ಲ. ಹೊಸದನ್ನೇ ಕೊಂಡು ಕೊಟ್ಟರಾಯಿತು. ಹೇಗೂ ಆತ ವಕೀಲಿ ಪರೀಕ್ಷೆ ಪ್ಯಾಸ್ ಆಗುವತನಕ ಕಾಲಾವಕಾಶವಿದೆಯಲ್ಲ. ನಗರಕ್ಕೆ ಹೋದಾಗ, ಕಾರಿಗೆ ఎಷ್ಟಾಗುತ್ತದೆ ಎಂದು ವಿಚಾರಿಸಬೇಕು.
     ತಮ್ಮ ಅಳಿಯನೊ ಸೊಸೆಯೂ ಕಾರಿನಲ್ಲಿ ಹೋಗುವ ದೃಶ್ಯದ ಕಲ್ಪನೆ ಗೌಡರಿಗೆ ಪ್ರಿಯವಾಗಿತು, ತಮ್ಮ ಕಾಲದಲ್ಲಾದರೆ ಎತ್ತಿನ ಬಂಡಿ ಏರುವುದೇ ಒ೦ದು ದೊಡ್ಡ ವಿಷಯ. ಈಗ ಕಾರಿಗಿಂತ ಕಡವೆು ಏನಿದೆ ? ಅಳಿಯನಿಗೆ ತಾವು ಕೊಡುವ ಕಾರು ಹೊಸಳ್ಳಿಯಿಂದ ಕಣಿವೇಹಳ್ಳಿಗೆ ನೇರವಾಗಿ ಬರದು. ದಾರಿಯಿಲ್ಲ, ಆದರೆ ತಮನ್ನೂರಿನಿಂದ ಟಾರ್ ರಸ್ತೆಯವರೆಗೆ ದಾರಿ ಕಡಿದರೆ, ಆಗೊಮ್ಮೆ ಈಗೊಮ್ಮೆ ನಗರದಿಂದ ಅಳಿಯ ತಮ್ಮ ಮಗಳೊಡನೆ ಇಲ್ಲಿಗೆ ಬರಬಹುದು. ಅಳಿಯ ಡ್ರೈವರನ್ನು ಇಟುಕೊಳ್ಳುತಾನೋ ಅಥವಾ ತಾನೇ ಓಡಿಸುತಾನೋ. ಕಾರು ಎಷ್ಟೆಂದರೂ ಕಾರೇ, ಸುಲಭವಾಗಿ ಅಂಕೆಯಲ್ಲಿಟ್ಟುಕೊಳ್ಳಲು ಅದೇನು ಎತ್ತಿನ ಬಂಡಿಯೇ? ಡ್ರೈವರನನ್ನು ನೇಮಿಸಿಕೋ ಎಂದು ತಿಳಿಸಬೇಕು.
     ಹೌದು, ಆ ಗೋವಿಂದಪ್ಪ ಹೇಳುವುದರಲ್ಲಿ ಅರ್ಥವಿದೆ. ಅರ್ಥವೂ ಇದೆ, ಸ್ವಾರ್ಥವೂ ಇದೆ. ರಾಜಮಾರ್ಗಕ್ಕೆ ಹೋಗಿ ಸೇರಲು ಬಂಡಿಗಳೂ ಮೋಟಾರುಗಳೂ ಓಡಾಡುವ ದಾರಿ ಇರುವುದು ಒಳ್ಳೆಯದೇ, ತಮಗೇ ಇದು ಮೊದಲು ಹೊಳೆಯಲಿಲ್ಲವಲ್ಲ! ಸಂದರ್ಭ ಒದಗಬೇಕಲ್ಲ ಅದಕ್ಕೆ, ತನ್ನ ಓಡಾಟಕ್ಕೆ ಸುಲಭವಾಗಲಿ ಅಂತ ಗೋವಿಂದನೆ ಯೋಚನೆ. ತಾನು ಮಾಡಿಸಿದೆ ಅ೦ತ ಹೆಸರು ಬೇರೆ. ಪುಢಾರಿ ತಾನೆ ? ಊಹೂಂ. ಸರಕಾರದಿಂದ ಹಣ ತೆಗೆದುಕೊಂಡು ಎರಡು ಮೈಲು ಕಚ್ಚಾ ರಸ್ತೆ ಕಡಿಯಬೇಕೆ? ಖಂಡಿತ ಕೂಡದು. ಹೊಲಗಳ ಕೆಲಸ ಮುಗಿದ ಮೇಲೆ ರೈತರನ್ನೆಲ್ಲ ಒಟ್ಟಿಗೆ ಸೇರಿಸಿ ತಾವೇ ಇದನ್ನು ಸಾಧಿಸಬೇಕು. ಖರ್ಚು ಎಷ್ಟಾದರೂ ಸರಿಯೆ. ಅಬುಲ್ಲನಿಗೆ 'ಮೇಸ್ತ್ರಿಯಾಗು' ಎಂದರಾಯಿತು. ಆದರೆ ಈ ರಸ್ತೆಯಲ್ಲಿ ಶ್ರೀನಿವಾಸಯ್ಯನವರ ಮಕ್ಕಳ ಸೊಸೆಯರ ಮೆರವಣಿಗೆ ಬರದು. ಇದು ಸಿದ್ದವಾಗುವುದು ಆಮೇಲೆ, ಸುಭದ್ರೆಯ ಮದುವೆಗೆ ಮೊದಲು. ಹೊಸಳ್ಳಿಯಿಂದ ನಡೆದುಕೊಂಡು ಯಾತಕ್ಕೆ? ಸ್ವಲ್ಪ ಬಳಸಿ ಬಂದರೂ ಸರಿಯೆ ಟ್ಯಾಕ್ಸಿಗೀಕ್ಷಿ ಮಾಡಿಕೊಂಡೇ ವರನ ದಿಬ್ಬಣ ಕಣಿವೇಹಳ್ಳಿಗೆ ಬರುವಂತಾಗಬೇಕು.
     ಯೋಚನೆಯನ್ನು ಕಾರ್ಯಗತಗೊಳಿಸುವ ಆತ್ಮವಿಶ್ವಾಸದಿಂದ ಮೀಸೆಯ ಕುಡಿಗಳನ್ನು ಮೇಲಕ್ಕೆ ಹಾರಿಸಿದರು ಗೌಡರು......
     ...ವಿಘ್ನೇಶ್ವರ ಭವನಕ್ಕೆ ಜನ ಬರತೊಡಗಿದರು. ಆದರೆ ಕಾಸು ಬಿಚ್ಚುತ್ತಿದ್ದವರು ಕಡಮೆ, ಸಾಲ ಕೇಳುವವರೇ ಎಲ್ಲರೂ.
     ನಗರಕ್ಕೆ ಗೋವಿಂದ ಪದೆ ಪದೇ ಹೋಗಿ ಬರುತ್ತಿದ್ದುದರಿಂದ ಸಣ್ಣ ಪುಟ್ಟ ಸಾಮಾನುಗಳನ್ನು ತರಿಸುವುದು ಗಜಾನನನಿಗೆ ಸುಲಭವಾಗಿತು, ಅವನದೊಂದೇ ವ್ಯಥೆ. ವಾರದ ಭವಿಷ್ಯ ಸಕಾಲದಲ್ಲಿ ಓದಲು ದೊರೆಯುತ್ತಿರಲಿಲ್ಲ. 
     ಸಿನಿಮಾ ನೋಡುವ ಚಟವಿದ್ದವಳು ಜಲಜಾ, ಈ ಕೊಂಪೆಗೆ ಬಂದು ಇಂಥ ಸ್ಥಿತಿಯೊದಗಿತಲ್ಲಾ ಎಂದು ಗೋಳಾಡಿದಳು ಆಕೆ. ಆದರೆ ಗಂಡನ ಹೊರತಾಗಿ ಯಾರಲ್ಲಿ ತೋಡಿಕೊಳ್ಳಬೇಕು ತನ್ನೆ ಅಳಲನ್ನು? ಅವನೋ, "ಬೇರೆ ಹಾಡು ಇಲ್ವೇನೇ?” ಎಂದ