ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೭೯ ನಾಲ್ಕಾರು ಸಾರೆ.

    ತಮ್ಮ ಸಂಸಾರದ ಬಂಧುವಾಗಿದ್ದ ಗೋವಿಂದ, ನಸುನಗುತ್ತ ಮಾತನಾಡುತ್ತಿದ್ದ

ಕೃಷ್ಟೇಗೌಡ-ಇವರೇ ಈಗ ಜಲಜೆಯ ಪಾಲಿನ ಚಿತ್ರ ನಟರು.

    ತನ್ನಂತೆಯೇ ಕಾಮಾಕ್ಷಿಗೂ ಸಿನಿಮಾ ಗೀಳು, ಜಲಜಮ್ಮನಿಗೆ ಅನಿಸುತ್ತಿತು.      
    'ಕಾಮಾಕ್ಷಿ ಇಲ್ಲಿ ಹ್ಯಾಗೆ ದಿನ ಕಳೆದಾಳು? ಗಂಡ ನಗರಕ್ಕೆ ಹೋದಾಗಲೆಲ್ಲ ಅವಳೂ ಹೊರಡುವುದು ಖಂಡಿತ'.  
    ಅವಳು ಅಂದುಕೊಂಡಳು: ಏನೇ ಇರಲಿ, ಕಾಮಾಕ್ಷಿ ನಗರಕ್ಕೆ ಹೊರಟಾಗಲೆಲ್ಲ     ತಾನೂ ಅವಳಿಗೆ ಅಂಟಿಕೊಳ್ಳಬೇಕು. ತಿಂಗಳಲ್ಲಿ ಒಂದು ವಾರವೋ ಹತ್ತು ದಿವಸವೋ ಇವರೊಬ್ಬರೇ ಹೋಟ್ಲು ನಡೆಸ್ಕೊಂಡು ಹೋಗ್ಲಿ' 
    ಆದರೆ ಸದ್ಯಕ್ಕೆ ಶ್ರೀನಿವಾಸಯ್ಯನವರ ಮನೆಯಲ್ಲಾಗುತ್ತಿದ್ದ ವಿವಾಹ ಸಿದ್ಧತೆ ಜಲಜೆಯ ಮನೆಸ್ಸಿನ ಬೇಸರವನ್ನು ಸ್ವಲ್ಪ ಕಡಮೆ ಮಾಡಿತು. 
    " ಗೋವಿಂದಣ್ಣ, ಮನೇಲಿ ಕೆಲಸ ಭಾಳ ಅಲ್ವೆ ? ದೊಡ್ಡಮ್ಮ, ಭಾಗಕ್ಕ ಇಬ್ಬರ ಕೈಲಿ ಮಾಡೋಕಾಗುತಾ ? ನಾನು ಬರ್ಲೆ?" ಎಂದು ಗೋವಿಂದನನ್ನು ಆಕೆ ಕೇಳಿದಳು. ಆತ ದೊಡ್ಡಮ್ಮನನ್ನು ಒಪ್ಪಿಸಿದ. ದಿನವೂ ಎರಡು ಮೂರು ಘಂಟೆಗಳ ಕಾಲ ಜಲಜಮ್ಮ ಶ್ರಿನಿವಾಸಯ್ಯನವರ ಮನೆಗೆ ಬರತೊಡಗಿದಳು.
     ಬಂಡಿಯನ್ನು ಒಂದು ಎತ್ತು ಎಡ ದಿಕ್ಕಿಗೆ ಇನ್ನೊಂದು ಬಲ ದಿಕ್ಕಿಗೆ ಎಳೆಯುವಂತಾಯಿತು ಪರಿಸ್ಥಿತಿ. ಸಹಾಯಕ್ಕೆ ಬಂದವಳನ್ನು ಮಾತಾಡಿಸುವ ಹೊರೆಯೆಲ್ಲ ದೊಡ್ಡಮ್ಮನ ಮೇಲೆ ಬಿತ್ತು.
     ಜವಳಿಯೊಡನೆ ಶ್ರೀನಿವಾಸಯ್ಯ ಮನೆಗೆ ಮರಳಿದ ರಾತ್ರೆಯೇ ಭಾಗೀರಥಿ ಅಸ್ವಸ್ಥ೪ಾದಳು. ಹಳೆಯ ಆ ಕಾಹಿಲೆ ಮತ್ತೆ ಮರುಕಳಿಸುವ ಲಕ್ಷಣ.
     ದೊಡ್ಡಮ್ಮ ಕೇಳಿದರು:                                                    
     " ನಿನಗೇನು ಬೇಕು ಭಾಗೀ ?" ಭಾಗೀರಥಿ ಉತ್ತರವಿತ್ತಳು :                        
     " ಸೋಮಪುರಕ್ಕೆ ಹೋಗ್ಬೇಕು, ದೊಡ್ಡಮ್ಮ."                              
     ತಮ್ಮ ಔಷಧಿಯಿಂದ ಗುಣವಾಗುವ ಕಾಹಿಲೆ ಇದಲ್ಲ ಎಂದು ಮನಗಂಡ ದೊಡ್ಡಮ್ಮ ಥಟ್ಟನೆ, “ ಅಷ್ಟೇ ತಾನೆ? ಹೋಗಿ ಬಾ, ಭಾಗೀ, ನಾಳೆ ದಿವಸ ಚೆನಾಗಿದೆ. ಗೋಪಾಲ ಬಿಟ್ಟು ಬರ್ತಾನೆ. ಮದುವೆಗೆ ಮೂರು ನಾಲ್ಕು ದಿನ ಇರುವಾಗ ಬರುವಿಯಂತೆ," ಎಂದರು 
     ...ಮಾರನೆಯ ದಿನ ಮಧ್ಯಾಹ್ನ ಬಂದ ಜಲಜಮ್ಮ, ಭಾಗೀರಥಿ ತವರು ಮನೆಗೆ ಹೋದಳೆಂಬುದನ್ನು ಕೇಳಿ, ಮೂಗಿನ ಮೇಲೆ ಬೆರಳಿಟ್ಟಳು. 
     ತನ್ನ ತಾಯಿ ಮನೆಯ ನೆನಪು ಸ್ವಲ್ಪ ಹೊತ್ತು ಅವಳನ್ನು ಕಾಡಿತು.       
     ...ಪದ್ಮನಾಭ ದಿಬ್ಬಣ ಹೊರಡುವುದಕ್ಕೆ ಎರಡು ದಿನಗಳಿದ್ದಾಗ ಬಂದು ತಲಪಿದ. 
     ಸೋಮಪುರದಿಂದ ಭಾಗೀರಥಿ ಬರಲೇ ఇల్ల. ದೊಡ್ಡಮ್ಮ ಅಂದರು :                
     " ನೀನು ಹೋಗಿ ಅವಳನ್ನೂ ಮಗುವನ್ನೂ ಹಾಗೇ ಅವಳ ಮನೆಯವರನ್ನೂ