ಈ ಪುಟವನ್ನು ಪರಿಶೀಲಿಸಲಾಗಿಲ್ಲ.



೧೨ ನೋವು


ಎಂದು ಭಾಗೀರಥಿ——ಅವರ ಮೊಮ್ಮಗನ ಮಡದಿ——ಅವರಿಗೆ ತಿಳಿಸಿದ್ದಳು. ಯಾಕೆ ಬ೦ದಿದ್ಧಾನೊ? ಶಾಮಣ್ಣನ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವೊ ಏನೊ——ಎಂದು ಕೊಳ್ಳುತ್ತ ಅವರು ಅಡುಗೆಮನೆಯಿಂದ ಹೊರಬಂದರು.

   ಎತ್ತರದ ನಿಲುವು,  ಗೋದಿಗೆಂಪು ಮೈ......
   " ಏನ್ಮಗೂ, ಚೆನ್ನಾಗಿದೀಯಾ ? "
   ಲಯಬದ್ದವಾದ ಮಾತು.   ಇಂಪಾದ ಸ್ವರ.
   ರಂಗಣ್ಣ ಉತ್ತರವೀಯುವುದಕ್ಕೆ ಮುಂಚೆಯೇ ಅವರು ಮತ್ತೂ ಅಂದರು: 
   " ಒಂದು  ವಾರವಾಯ್ತಲ್ಲೋ  ಭಾಗ್ಯನಗರದಿ೦ದ ಬಂದು ?   ದೊಡ್ಡಮ್ಮನ್ನ

ನೋಡೋಕೆ ಈ ಮೊದಲೇ ಬರಬಾರದಾಗಿತ್ತೇನೋ ? "

   ಆ ಧ್ವನಿ ತನ್ನ ಮೈದಡವಿ ಮುತ್ತಿಟ್ಟಂತಾಯಿತು ರಂಗಣ್ಣನಿಗೆ.  ಅದು, ತಾನು 

ಈ ಜಗತ್ತಿಗೆ ಬರಲು ನೆರವಾದ ವ್ಯಕ್ತಿ. ಸುಭದ್ರೆಯ ಮುಖವನ್ನು ಮೊದಲು ಕಂಡವರೂ ಆಕೆಯೇ. ತನ್ನ ತಾಯಿಯನ್ನು ಉಳಿಸುವುದು ಅವರಿಂದ ಆಗಿರಲಿಲ್ಲ ನಿಜ. ಆದರೂ ಅವರು ತನಗೆ ಆತ್ಮೀಯರು.

    " ಬರಬೇಕಾಗಿತ್ತು ದೊಡ್ಡಮ್ಮ.  ಆದರೆ ಏನೋ ಕೆಲಸ......" 
    "ಹೂನಪ್ಫಾ,  ನಾಳೆ ಡಾಕ್ಟರಾಗುವವನು." 
    (ಹಳ್ಳಿಯವರಿಗೆಲ್ಲ " ದೊಡ್ಡಮ್ಮ" ಆ ವೃದ್ದೆ).
    ಈ ಪರಿಸ್ಥಿತಿಯಲ್ಲಿ ಇಂಥ ಮಾತುಕತೆ ಆಭಾಸಕರ ಎನ್ನುವಂತೆ ಶ್ರಿನಿವಾಸಯ್ಯ ಗಾಳಿ ಯಲ್ಲಿ ಕೈಯಾಡಿಸಿದರು. 
    ಅವರೆಂದರು : 
    "ಅಮ್ಮ!  ಮುನಿಯನನ್ನು ದಿಬ್ಬದ ಹೊಂಡದಲ್ಲಿ ಯಾರೋ ಕೊಂದಾಕಿದಾರ೦ತೆ. 

ರಂಗಣ್ಣ ಹೇಳಿದ್ದಾನೆ. ಹೆಣಾನ ನೋಡಿ ಬಂದ್ನಂತೆ. ಶಾಮಣ್ಣ ಊರಲ್ಲಿಲ್ಲ. ಈಗ ಏನಾಡೋಣ? ”

    ದೊಡ್ಡಮ್ಮ ಎವೆ ಮುಚ್ಚದೆ ನಿಂತು ಮಗನ ಮಾತುಗಳನ್ನು ಆಲಿಸಿದರು. ಒಂದು 

ಕ್ಷಣ ಸುಮ್ಮನಿದ್ದರು. ಏನನ್ನೋ ಹೇಳುತ್ತಲಿದ್ದವರಂತೆ ತುಟಿಗಳು ಮೌನವಾಗಿ ಚಲಿಸಿದುವು.

   ಕಕೊಂಡಿದ್ದ ಗಂಟಲನ್ನು ಸರಿಪಡಿಸಿ ಅವರೆಂದರು:     
   " ಪಾಪಿ ಮುಂಡೇಗಂಡ.  ಏನೋ ಮಾಡೋಕೆ ಹೋಗಿ ಪ್ರಾಣಾನೇ ಕಳಕೊಂಡ್ರಲ್ಲಾ..." 
   ಧ್ವನಿ ಅಲೆಅಲೆಯಾಗಿ ಗಾಳಿಯೊಡನೆ ಲೀನವಾಯಿತು.
   ಮತ್ತೊಂದು ಕ್ಷಣ ಮಾತಿಲ್ಲದೆ ನಿಂತ ಬಳಿಕ ದೊಡ್ಡಮ್ಮ ಅಂದರು: 
   " ಏಳು ಶೀನ,ಕೃಷ್ಟೇಗೌಡನನ್ನ ಕರೆಸು. ಮುನಿಯನ ಹೆಂಡತಿಗೂ ಮಗನಿಗೂ ವಿಷಯ ಗೊತ್ತಿದೆಯೋ ಇಲ್ಲವೋ. ಮಾದನಿಗೆ ಹೇಳಿಕಳಿಸು. ತಮ್ಮ ಜನವನ್ನ ಕರ್ಕೊಂಡ್ಬರ್ತಾನೆ. ಕತ್ತಲಾಗೋದರೊಳಗೆ ಶವವನ್ನ ಹಳ್ಳಿಗೆ ತಂದ್ಬಿಡ್ಲಿ. ಶಾಮಣ್ಣ ಇವತು ಬರ್ತಾನೆ, ಅಲ್ವೆ?" - ರಂಗಣ್ಣನೆಂದ: