ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ನೋವು

ಅದಕ್ಕೂ ಉತ್ತರವಿಲ್ಲ. "ಗೊತ್ತಿಲ್ಲಾಂತಾದ್ರೆ ನಾನ್ಹೇಳ್ತೀನಿ ಕೇಳು. ಮುನಿಯ ಕುಲದ ಮರ್‍ಯಾದೆ ಮಿಾರಿ ನಡೆಯೋಕೋದ . ಅದಕ್ಕೆ ಸತ್ತ.” ಮಲಗಿದ್ದಲ್ಲಿಂದ ಸುಭದ್ರಾ ಚಿಟ್ಟನೆ ಚೀರಿದಳು.

ಶಾಮೇಗೌಡರು ಹೊಸಳ್ಳಿಯಿಂದ ಮರಳಿ ಸ್ವಗ್ರಾಮವನ್ನು ಸೇರಿದಾಗ ಸೂರ್ಯ ಮುಳುಗಿ ಒಂದು ಘಳಿಗೆಯಾಗಿತ್ತು, ಮುನಿಯನ ಶವವನ್ನು ದಿಬ್ಬದ ಹೊಂಡದಿಂದ ಎತ್ತಿ, ಕೆಳಕ್ಕೆ ತಂದಿದ್ದರು. ದಾರಿಯಲ್ಲಿ ಶಾಮೇಗೌಡನನ್ನು ಸಂಧಿಸಿ ಮೊದಲು ಸುದ್ದಿ ತಿಳಿಸಿದವನು ಶ್ರೀನಿವಾಸಯ್ಯ ನವರ ಎರಡನೆಯ ಮಗ ಗೋವಿಂದ. " ಶಿವ, ಶಿವ!"ಎಂದರು ಗೌಡರು. ಅವರು ಕಟುಮಸ್ತಾದ ಆಳು. ಆಯುಸ್ಸಿನ ಮಡ ದಾಟಿದ್ದರೂ ಯೌವನದ ಕಳೆಯಿದ್ದ ಎಣ್ಣೆಗಪ್ಪು ಮುಖ, ಎದ್ದು ಕಾಣಿಸುತ್ತಿದ್ದ ಮೂಗಿನ ಕೆಳಗೆ ಗಿರಿಜಾ ಮಿಾಸೆ. ಕಪ್ಪು ತಲೆಗೂದಲನ್ನು–ಬಿಗಿದು ಕಟ್ಟಿದ್ದ ಪುಟ್ಟ ಚಂಡಿಕೆಯನ್ನು–ಮರೆಮಾಡಿದ್ದ ಬಿಳಿಯ ರುಮಾಲು. ಎತ್ತಿ ಕಟ್ಟಿದ್ದ ಪಂಚೆ ಜುಬ್ಬಗಳ ಮೇಲೆ ಕಪ್ಪು ಕೋಟು. ಇಸ್ತ್ರಿ ಮಾಡಿ ಮಡಚಿ ಕತ್ತನ್ನು ಬಳಸಿ ಎದೆಯ ಮೇಲೂ ಬೆನ್ನ ಮೇಲೂ ಇಳಿಬಿದ್ದಿದ್ದ ಜರಿ ಶಾಲು. ಕಂಕುಳಲ್ಲಿ ಹಗಲಿನ ಬಿಸಿಲಿನಿಂದ ಆಶ್ರಶ್ಯಯ ಪಡೆಯಲೆಂದು ಕೈಯಲ್ಲಿ ಒಯ್ದಿದ್ದ ಕೊಡೆ. ದಿನವಿಡೀ ಸುತ್ತಿದ್ದರೂ ಆಯಾಸವಾಗದೇ ಇದ್ದ ಗೌಡರು ಈಗ ಮುನಿಯ ಕೊಲೆ ಯಾದನೆಂದು ಕೇಳಿದಾಗ ಅಂಗೈಯಿಂದ ಮುಖ ಒರೆಸಿಕೊಂಡರು. ನೆಟ್ಟ ದೃಷ್ಟಿಯಿಂದ ಗೋವಿಂದನನ್ನು ನೋಡಿ ಅವರು ಕೇಳಿದರು: " అಯ್ನೋರೆಲ್ಲಿ ? " " ಅಣ್ಣಯ್ಯ ಮಾರಿಚಾವಡೀಲಿದಾರೆ." " ಹೆಣ ? ” " ಮಾದ ತಮ್ಮ ಕೇರಿಗೆ ಹೊರಿಸ್ಕೊಂಡು ಹೋದ." " ನಡಿ, ಗೋವಿಂದ ಶವ ಇಷ್ಟು ನೋಡ್ಕಂಡು ಬರಾನ." ಗೋವಿಂದನ ಟಾರ್ಚು ಆಗೊಮ್ಮೆ ಈಗೊಮ್ಮೆ ಬೆಳಕು ಹಾಯಿಸಿತು. ಆ ಇರುಳಲ್ಲಿ ಗೌಡರ ಜೀಕು ಎಕ್ಕಡಗಳೂ ಗೋವಿಂದನ ಚಪ್ಪಲಿಗಳೂ ಲಯಬದ್ಧವಾಗಿ ಸದ್ದುಮಾಡಿದವು. ತನ್ನ ಯೋಚನೆಗಳಿಗೆ ಮಾತಿನ ರೂಪ ಕೊಡಲೆತ್ನಿಸುತ್ತ ಗೋವಿಂದ ಕತ್ತಲಲ್ಲಿ ತನ್ನ ಟೋಪಿಯನ್ನೊಮ್ಮೆ ಮುಟ್ಟಿ ನೋಡಿದ. ಗಂಟಲು ಸರಿಪಡಿಸಿ ಅವನೆಂದ: " ನಗರಕ್ಕೆ ಹೋಗಿ ಪೋಲೀಸ್ನೋರಿಗೆ ಕಂಪ್ಲೇಂಟು ಕೊಡಬೇಕಾಗುತ್ತೋ ಏನೋ."