ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೬ ನಡೆಯುತ್ತ ಮುಂದೇನು ಮಾಡಬೇಕೆಂದು ಆಲೋಚಿಸುತ್ತಲಿದ್ದ ಗೌಡರು ಈ ಹುಡುಗ *ಪೋಲೀಸರು' ಎಂದಂತಾಯಿತಲ್ಲ-ಎಂದು " ಏನಂದೆ ಗೋವಿಂದ ? " ಎಂದು ಕೇಳಿ ದರು . - ಆತ ಪುನಃ ಅಂದ : "ಪೋಲೀಸರಿಗೆ ಕಂಪ್ಲೇಂಟು ಕೊಡಬೇಕಾಗುತ್ತೇನೋ ಅಂತ." ಗೌಡರು ಧ್ವನಿ ಏರಿಸಿದರು : " ಪೋಲೀಸರಿಗೆ? ಯಾತಕ್ಕೆ?” I "ಹಾಗಲ್ಲ, ಮುಂದೆ ಯಾರಾದರೂ ಏನಾದರೂ..." "ಯಾರು? ಏನು? ಕಣಿವೇಹಳ್ಳಿಲಿ ಪೋಲೀಸರಿಗೆ ಏನು ಕೆಲಸ ಗೋವಿಂದ?” " ಹಾಗಲ್ಲ.” ಗೌಡರಿಗೆ ಸಿಟು ಬಂತು. "ಮತ್ತೆ ಹ್ಯಾಗೆ?" నిధాನವಾగి ಗೋವಿಂದನೆಂದ : "ಮುನಿಯ ಸಾಯೋದಕ್ಕೆ ಏನು ಕಾರಣ ಅಂತ....." " ಸಾಯೋದಕ್ಕೆ ಸಾವಿರ ಕಾರಣ. ಗೋವಿಂದಪ್ಪ, ನೀನು ಚಿಕ್ಕೋನು. ಇಲ್ಲದ್ದೆಲ್ಲ ಯೋಚಿಸ್ಕೊಂಡು ತಲೆ ಕೆಡಿಸ್ಕೋಬ್ಯಡ." ಗೋವಿಂದ ಎದುರಾಡಲಿಲ್ಲ ಉಗುಳು ನುಂಗಿದ. ಮತ್ತೊಮ್ಮೆ ಟೋಪಿಯನ್ನು ಮುಟ್ಟಿ, ಅತ್ತಿತ್ತ ಸರಿಸಿ, ಸರಿಯಾಗಿಟುಕೊಂಡ. ನಡೆಯುತ್ತಿದ್ದವರಿಗೆ ನಿಂಗಿಯ ರೋದನ ಕೇಳಿಸತೊಡಗಿತು. ಆ ಶೋಕಧ್ವನಿ ಅಲೆ ಯಲೆಯಾಗಿ ಸುತ್ತಲೂ ಹಬ್ಬತ್ತಿತ್ತು . ಕೇರಿಯ ಹೊರಗೆ ಆಕಾಶ ನೋಡುತ್ತ ಮಲಗಿತ್ತು. ಮುನಿಯನ ನಿರ್ಜಿವ ದೇಹ. ನೆಲದ ಮೇಲೆ ಕೃಷ್ಟೇಗೌಡನ ಲಾಟೀನು. ಗಂಡನ ಶವದ ಮೇಲೆ ಬಿದ್ದು ಬಿದ್ದು ನಿಂಗಿ ಗೋಳಾಡು ತ್ರಿದ್ದಳು. ಈರ-ಮಾದರ ಹೆಂಡತಿಯರೂ ಅಳುತ್ತಿದ್ದರು. ಮೂವತ್ತು ನಾಲ್ವತು ಜನರ ಗುಂಪು ಬೆಳಕಿಗಿಂತ ತುಸು ದೂರದಲ್ಲಿ ಅರ್ಧವೃತ್ತ ರಚಿಸಿತ್ತು. ಯಾವನೋ ಅಂದ: " ಗೌಡರು ಬಂದ್ರು." ಬೇರೆಯೂ ಇಬ್ಬರು ಮೂವರು ಒಟ್ಟಾಗಿ ಅಂದರು; " ಗೌಡರು ಬಂದ್ರು." ಇನ್ನು ಪರವಾಗಿಲ್ಲ – ಎಂಬ ಧ್ವನಿಯಿತ್ತು ಆ ಮಾತಿನಲ್ಲಿ. ಒಬ್ಬ ಕಂದೀಲನ್ನು ಶವದ ಸಮಿಾಪಕ್ಕೆ ತಂದು ಎತ್ತಿ ಹಿಡಿದ, ಗೌಡರಿಗೆ ಕಾಣಿಸಲಿ ಎಂದು. ಶಾಮೇಗೌಡರು ತುಸು ಬಾಗಿ ನೋಡಿದರು. ಊದಿಕೊಂಡಿದ್ದ ಮುಖ ಒಂದು బదిగి ಜೋತಿತ್ತು, ಮೈಯಲ್ಲಿ ಯಾವ ಗಾಯವೂ ಇರಲಿಲ್ಲ, ಕತ್ತು, ಹಿಸುಕಿ ಉಸಿರು ಕಟ್ಟಿಸಿ ಪ್ರಾಣ ತೆಗೆದಿರಬೇಕೆಂಬುದು ಸ್ಪಷ್ಟವಾಗಿತ್ತು. ಉಟ್ಟಿದ್ದ ಮಾಸಲು ಅಡ್ಡಪಂಚೆಗೂ ಹಳೆಯ ఆంగిಗೂ ఆల్లల్లి ಹಸಿಮಣ್ಣು ಮೆತ್ತಿತ್ತು.