ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3.C. ನೋವು - ಮುನಿಯ ಸತ್ತ ಎಂದು ನಾಗಮ್ಮನವರಿಗೆ ವ್ಯಥೆ ಇಲ್ಲವೆಂದಲ್ಲ. ಆದರೆ, ಆಕಾಶವೇ ಕಳಚಿಬಿದ್ದಂತೆ ಧೈಠ್ಯಗೆಡಬೇಕೆ ಗಂಡಸರು? ಅವರಿಗೆ ಆಶ್ಚ ರ್ಯ, ಅಣ್ಣ ಎಂದೂ ಹೀಗೆ ವರ್ತಿಸಿದವನಲ್ಲ. ಇವತ್ತು ಯಾಕೆ? * - - - - - ಗಂಡನ ಮನೆಯಲ್ಲಿರಲಿ, ತವರು ಮನೆಯಲ್ಲಿರಲಿ, ಎಂದೂ ಇದಿರು ಮಾತು ಆಡಿದವರಲ್ಲ ನಾಗಮ್ಮ. ಅವರು ಮನೆಯ ಒಳಹೊಕ್ಕು ಕಂದೀಲನ್ನು ಅದರ ಸ್ಥಾನದಲ್ಲಿರಿಸಿದರು. ಅಣ್ಣನ ಹಾಸಿಗೆ ಬಿಡಿಸಿದರು. ಸುಭದ್ರೆ ಮಲಗಿದ್ದ ಕೊಠಡಿಗೆ ಹೋದರು. ಅಲ್ಲಿ ಸೀಮೆ ಎಣ್ಣೆಯ ಬುಡ್ಡಿ ಉರಿಯುತ್ತಿತು, ಸುಭದ್ರೆಯ ಮಗುಲಲ್ಲಿ ಕುಳಿತು, ತಮ್ಮ ಅಂಗೈಯಿಂದ ಆಕೆಯ ಹಣೆ ಮುಟ್ಟಿ ನೋಡಿದರು. ಕಾದ ಕೆಂಡ, ಹಸ್ತ ಸ್ಪರ್ಶಕ್ಕೆ ಹುಡುಗಿಗೆ ಎಚ್ಚರವಾಗಲಿಲ್ಲ. ಅವಳು ನಿದ್ರಿಸುತ್ತಿದ್ದಳು. ಆದರೆ ತುಟಿಗಳು ಸದ್ದಿಲ್ಲದೆ ಚಲಿಸುತ್ತಿದ್ದುವು. ಕನವರಿಸುತ್ತಿರಬೇಕು. ಅಲ್ಲಾ–ಬೆಳಗ್ಗೆ ಎಲ್ಲಾ ಓಡಾಡಿಕೊಂಡಿದ್ದವಳು ಇದ್ದಕ್ಕಿದ್ದ ಹಾಗೆ ಮಲಗಿಬಿಟ್ಟಳಲ್ಲ! –ಅದು ವಿಚಿತ್ರವಾಗಿ ಕಂಡಿತು ನಾಗಮ್ಮನಿಗೆ. ಒಳಗಿನ ಒಂದು ಸಂಕಟ ಅವರ ಯೋಚನೆಯನ್ನು ಕೆದಕಿತು; ದೃಷ್ಟಿ ತಾಕಿರಬಹುದು. ದೊಡ್ಡವಳಾದ ಮೇಲೂ ಮಗಳನ್ನು ಶಾಮಣ್ಣ ಮನೆಯಲ್ಲಿ ಇರಿಸಿಕೊಳ್ಳಬಾರದಾಗಿತ್ತು. ಆ ಪ್ರಸ್ತಾಪ ತಾನು ಮಾಡಿದಾಗಲೆಲ್ಲ ಅಣ್ಣ ಎನ್ನುತ್ತಿದ್ದನಲ್ಲ? "ಈಗಿನ ಕಾಲದಲ್ಲಿ ಪರವಾಗಿಲ್ಲ ನಾಗೂ.ಮಕ್ಕಳಿಗೆ ತಡವಾಗಿ ಮದುವೆ ಮಾಡ್ಬೊದು.” - ಎಷು ತಪ್ಪ! ನಾಗಮ್ಮನಿಗೆ ತಿಳಿಯದು ಎಂದಲ್ಲ, ಹೊಸಳ್ಳಿಯ ಗೌಡರ ಎರಡನೆಯ ಮಗ ವಕೀಲಿ ಓದುತ್ತಿದ್ದಾನೆ. ಆ ಪರೀಕ್ಷೆ ಮುಗಿದು ನಾಲ್ಕು ಕೈ ಕೋಟು ಹಾಕಿಕೊಳ್ಳುವ ವರೆಗೂ ಮದುವೆ ಬೇಡವಂತೆ ಅವನಿಗೆ. ಆತನೇ ಅಳಿಯನಾಗಬೇಕೆಂದು ಅಣ್ಣನ ಹಂಬಲ. ಈಗಿನ ಕಾಲದ ವಿಚಾರವೊಂದೂ ಅರ್ಥವಾಗದು ನಾಗಮ್ಮನಿಗೆ. ಹನ್ನೆರಡನೆಯ ವಯಸ್ಸಿನಲ್ಲಿ ಅಲ್ಲವೆ ತನಗೆ ಮದುವೆಯಾದದ್ದು? ಹನ್ನೆರಡೊ ಅಥವಾ ಹನ್ನೊಂದೊ? ಸುಬ್ಬಿಗೋ ಹದಿನೇಳು ದಾಟಿದೆ. ಮೈ ಕೈ ತುಂಬಿವೆ. ದೃಷ್ಟಿ ತಾಕದೆ ಇನ್ನೇನಾದೀತು?... 'ಆ ಜಾಡು ಹಿಡಿದು ನಾಗಮ್ಮನವರ ಯೋಚನೆ ಸಾಗಿತು. ಕಣ್ಣುಗಳು ತೇವಗೊಂಡು ಎರಡು ಅಶ್ರುಬಿಂದು ಒಸರಿದವು. ಹೊರಗೆ ರಂಗಣ್ಣ ತಂದೆಗೆ ಹೇಳಿದ: " ಅಪ್ಪ, ಒಳಕ್ಕೋಗೋಣ." "ಹು..?” ಎಂದರು, ಅಂತರ್ಮುಖಿಯಾಗಿದ್ದ ಗೌಡರು, ಪ್ರಶ್ನೆ ಸರಿಯಾಗಿ ಕೇಳಿಸದೆ. "ಒಳಕ್ಕೋಗೋಣ, ಅಪ್ಪ." " ನೀನು ಓಗು, ಮನಿಕೊಳ್ಳೋ. " ರಂಗಣ್ಣ ಒಬ್ಬನೇ ಮನೆಯೊಳಕ್ಕೆ ನಡೆದ. ಪಡಸಾಲೆಯಲ್ಲಿದ್ದ ಪಲ್ಲಂಗದ ಮೇಲೆ ಗೌಡರ ಶಯನ. ರಂಗಣ್ಣನ ಕೊಠಡಿ ಅಂಗಳಕ್ಕೆ ತಾಗಿಕೊಂಡು ಇತು, ಸುಬ್ಬಿ-ನಾಗಮ್ಮರಿದ್ದ ಕೋಣೆಯ ಮಗ್ಗುಲಲ್ಲಿ, ಅವನ ಕೊಠಡಿಯಲ್ಲಿ, ಅದೇ ವರ್ಷ ಗೌಡರು ಮಗನಿಗಾಗಿ ಮಾಡಿಸಿದ್ದ ಮೇಜಿನ ಮೇಲೆ, ಭಾಗ್ಯನಗರದಿಂದ ರಂಗಣ್ಣ ಕೊಂಡು ತಂದಿದ್ದ ಲಾಂಪ್ ಉರಿಯುತ್ತಿತು, ಅದರ ಬತ್ತಿಯನ್ನು ರಂಗಣ್ಣ ಕಿರಿದುಗೊಳಿಸಿದ.