ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು -

  ಅವನ ಕೋಣೆಯಿಂದ ಮಗ್ಗುಲ ಕೊಠಡಿಗೆ ಹೋಗುವ ಬಾಗಿಲು ತೆರೆದಿತು, ರಂಗಣ್ಣ ಅತ್ತ ಸರಿದು ಬಾಗಿಲಲ್ಲಿ ನಿಂತ.
  ಸೋದರಳಿಯನನ್ನು ನೋಡಿ ನಾಗಮ್ಮ ಅಂದರು:
  "ಒತ್ತಾರೆ ಅಯ್ನೋರಲ್ಲಿಗೆ ಓಗಿ, ದೊಡ್ಡಮ್ಮಾವರನ್ನ ಕೇಳಿ, ಅವುಸದಿ ಇಸಕೊಂಡು ಬರಬೇಕಲ್ಲ ಮೊಗ."
  ಅಯ್ಯನವರು–ದೊಡ್ಡಮ್ಮನವರು. ವಸ್ತುಸ್ಥಿತಿಯ ಅರಿವಿಲ್ಲದ ಅತ್ತೆ...

• “ ಬೆಳಗ್ಗೆ ನೋಡಾನ, ಅತ್ತೆಮ್ಮ. ಜ್ವರ ಬಿಟ್ಟಾತು. ಈಗ ನೀವು ಮನಿಕೊಳ್ಳಿ."

 " ಅಣ್ಣ ಒಳಕ್ಟಂದ್ನಾ?" 
 " ಇಲ್ಲ, ಬರುತ್ತಿನಿ, ನೀನು ಹೋಗು ಅಂದ್ರು." 
 ಆ ವಾರವಷ್ಟೇ ರಂಗಣ್ಣ ಅಂದುಕೊಂಡಿದ್ದನಲ್ಲ? ಒಂದು ಬಾಗ್ ಕೊಳ್ಳಬೇಕು. ಭಾಗ್ಯನಗರದಲ್ಲಾದರೆ ಮೆಡಿಕಲ್ ವಿದ್ಯಾರ್ಥಿಯ ವಶ ಡಾಕ್ಟರರ ಬ್ಯಾಗ್ ಕಂಡರೆ ಜನ ನಗಬಹುದು. ಹಳ್ಳಿಯಲ್ಲಿ ಹಾಗಲ್ಲವಲ್ಲ. ಅದು ಭೂಷಣ. ಸಣ್ಣಪುಟ್ಟ ಸಾಮಾನ್ಯ  ರೋಗಗಳಿಗಾಗುವ ಔಷಧಿಗಳನ್ನು ಕೊಂಡು ಆ ಬಾಗಿನಲ್ಲಿಡಬೇಕು. ಪದ್ಮನಾಭನ ಅಜ್ಜಿಯ ಬೇರು ನಾರುಗಳನ್ನು ಬಿಟ್ಟರೆ ಬೇರೆ ಗತಿಯೇ ಇಲ್ಲದಂತಾಯಿತಲ್ಲ ಕಣಿವೇಹಳ್ಳಿಯಲ್ಲಿ? ರಜಾ ದಿನಗಳಲ್ಲಿ ಊರಿಗೆ ಬಂದಾಗ ನಾಲ್ಕು ಜನರಿಗೆ ಒಳ್ಳೆಯ ಔಷಧಿ ಸಿಗುವಂತಾಗಬೇಕು...,
    ಆ ಯೋಚನೆ ಇನ್ನೂ ಸ್ವಲ್ಪ ಮುಂಚಿತವಾಗಿ ಹೊಳೆದಿದ್ದರೆ, ಸುಬ್ಬಿಗೆ ಜ್ವರ ಬಂತೆಂದು ಚಿತಿಸಬೇಕಾದುದಿರಲಿಲ್ಲ.
   ಜ್ವರ ಎಷ್ಟಿದೆ ಎಂದು ನೋಡಲು ಒಂದು ಥರ್ಮಾಮಿಾಟಲ್ ಕೂಡಾ ಇರಲಿಲ್ಲ ಮನೆಯಲ್ಲಿ.
   ತಾನು ಕಂಡಿದ್ದ ಶುಶ್ರೊಷೆಗಳನ್ನು ನೆನಪಿಗೆ ತಂದುಕೊಳ್ಳಲು ರಂಗಣ್ಣ ಯತ್ನಿಸಿದ. ಜ್ವರದ ತಾಪ ಹೆಚ್ಚಿದ್ದ ರೋಗಿಗೆ ಏನು ಮಾಡಬೇಕು? ಹಣೆಗೆ ತಣ್ಣೀರಿನ ಪಟ್ಟಿ–ಕೋಲ್ಡ್ ಪಾಕ್. 
   ಹಾಗೆ ಪಟ್ಟಿ ಇಡುವಂತೆ ಅತ್ತೆಗೆ ಸೂಚಿಸಲು ರಂಗಣ್ಣ ಬಾಯಿ ತೆರೆದ. ಆದರೆ ಆಕೆ ಏನೆನ್ನುವರೋ ಎಂದು ಅಳುಕಿದ. ಬಯ್ದರೋ? ಅವರ ದೃಷ್ಟಿಯಲ್ಲಿ, ಅಯ್ಯನವರ ಮನೆಯ ದೊಡ್ಡಮ್ಮನನ್ನು ಬಿಟು ಬೇರೆ ಯಾರಿಗೂ ಔಷಧೋಪಚಾರ ತಿಳಿಯದಲ್ಲ? 
   ನಾಗಮ್ಮ ಮತ್ತೊಮ್ಮೆ ಸುಭದ್ರೆಯ ಹಣೆ ಮುಟ್ಟಿ ನೋಡಿದರು. ಶಾಮೇಗೌಡರನ್ನು ನೆನಪಿಗೆ ತರುವ ಮುಖ, ಗೌಡರ ಮಿಾಸೆ ಅವರ ವ್ಯಕ್ತಿತ್ವಕ್ಕೆ ಅಲಂಕಾರಪ್ರಾಯವಾಗಿತು. ನಾಗಮ್ಮನಿಗಾದರೋ, ಬದುಕಿನುದ್ದಕ್ಕೂ ಅವರು ಕಹಿಯುಂಡುದಕ್ಕೆ ಸಾಕ್ಷಿಯಾಗಿದ್ದುವು ಮುಖದ ಮೇಲಿನ ನೇಗಿಲ ಗೆರೆಗಳು ಎರಡು :
  ರಂಗಣ್ಣನಿಗೆನಿಸಿತು: ಈ ಮನೆಯಲ್ಲಿ ಎರಡು ಜೋಡಿ. ವಯಸ್ಸಾದ ಅಣ್ಣ ತಂಗಿಯದು ಒಂದು; ಎಳೆಯ ಸೋದರ ಸೋದರಿಯರದು ಒಂದು.
  ಹಣೆಯಿಂದ ಅಂಗೈಯನ್ನು ನಿಧಾನವಾಗಿ ಹಿಂದಕ್ಕೆ ತೆಗೆದು, ರಂಗಣ್ಣನತ್ತ ನೋಡಿ, ನಾಗಮ್ಮ ಅಂದರು: -
  • ಭಾರಿ ಜೊರ, ಮೊಗ."