ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ನೋವು

        ಮುನಿಯನ ಸಾವಿನ ಪ್ರಕರಣವೊಂದನ್ನು ಸರಿಪಡಿಸುವ ಹೊಣೆ ಹೊತ್ತ ಘಳಿಗೆಯಲ್ಲೇ ಈ ಹೊರೆ ಹೇರಲ್ಪಡಬೇಕೆ ತಮ್ಮ ಮೇಲೆ ?
        ಆ ಗೋವಿಂದ. ಅದೇನೋ ಅಂದನಲ್ಲ? ಪೋಲೀಸರಿಗೆ ತಿಳಿಸ್ಬೇಕೇನೋ ಅಂತ.. ಎಂಥ ತಂದೆಯ ಹೊಟ್ಟೆಯಲ್ಲಿ ಎಂಥ ಮಗ...ಸೊಸೈಟಿ ಮಾಡ್ತೇನೆ ಅಂದ. ಸರಿಯಪ್ಪ– ಅಂದೆ. ಈಗ ನೋಡಿದರೆ ಪುಢಾರಿಯ ಹಾಗೆ ಮಾತಾಡ್ತಾನೆ. ಅಷ್ಟೂ ತಿಳಿಯದೆ ತಮಗೆ? ಹಳ್ಳಿಯ ಒಗ್ಗಟು ಮುರಿದು ಪಾರ್ಟಿ ಕಟ್ಟುವ ಇರಾದೆ ಅಲ್ಲವೆ ಅವನದು?
        ಗೋವಿಂದ ಹಾಗಾದರೆ, ಪದ್ಮ ಹೀಗೆ.
        ಇಂಥವರಿರುವ ಹಳ್ಳಿ ಕೆಡದೆ ಉಳಿದೀತೆ? 
        ಪಾದಗಳನ್ನು ಒಂದಕ್ಕೊಂದು ತೀಡಿ ಧೂಳು ಕೊಡವಿ ಗೌಡರು ಮಲಗಿಕೊಂಡರು, ದಿಂಬಿಗೆ ತಲೆ ಇಟು. 
        ನಿದ್ರೆ ಅವರ ಸವಿನೂಪಕ್ಕೆ ಸುಳಿಯಲಿಲ್ಲ.
        ವೇಳೆ ಕ್ರಮಿಸುತ್ತಿತು. ಅದಕ್ಕಿಂತ ನಿಧಾನವಾಗಿ ಗೋಡೆ ಗಡಿಯಾರ ಚಲಿಸುತ್ತಿತು. ಅದು ಮಂದಗತಿಯ ಚಲನೆ ಎಂಬ ಅರಿವಿಲ್ಲದೆಯೇ, ಈ ಗಡಿಯಾರದ ಟಿಕ್ ಟಾಕ್ ಗಳಿಗೆ ಡರಣ್ ಡರ‌‌ಣ್ ಗೌಡರು ಕಿವಿಗೊಟ್ಟರು. ಒಂದೆರಡು ಸಲ ಕೇಳಿಬಂದ ಸುಧದ್ರೆಯ ನರಳಾಟವನ್ನು ಆಲಿಸಿದರು.
        ನಡುವಿರುಳು ದಾಟಿ ಹೊಸ ದಿನದ ಲೆಕ್ಟ ಶುರುವಾಯಿತು.
        ಘಳಿಗೆಗಳು ಕಳೆದುವು.
        ಕೋಳಿ ಕೂಗಿತು.
        ಗೌಡರ ಉರಿಯುತ್ತಿದ್ದ ಕಣ್ಣುಗಳು ಗತಿಸಿದ್ದ ಹೆಂಡತಿಯ ನೆನಪಾಗಿ ಮಂಜಾದುವು.
        ಒಮ್ಮೆಲೆ, "ಹಿಂದಿನ ಹಾಗೆ ಇನ್ನು ಮುಂದೆ ನಡೆಯೋದು ಸಾಧ್ಯವಿಲ್ಲ," ಎಂಬ ಮಾತು ಅವರ ಬಾಯಿಯಿಂದ ಹೊರಬಿತ್ತು.
        'ನಾಳೆ ಶ್ರೀನಿವಾಸಯ್ಯನನ್ನು ನಾನು ಕಾಣಬೇಕು, ಎಂದುಕೊಂಡರು.
        ಮೊದಲ ಕೋಳಿಯ ಕೂಗಿನೊಡನೆ ನಾಗಮ್ಮ ಎದ್ದರು. ರಾತ್ರಿ ಎರಡು ಮೂರು ಸಾರೆ ಎಚ್ಚರಗೊಂಡಿದ್ದ ಆವರಿಗೆ ಗಾಢನಿದ್ರೆಯೇನೂ ಬಂದಿರಲಿಲ್ಲ.
        ಸುಭದ್ರೆಯ ಮೈಯಿನ್ನೂ ಬೆಚ್ಚಗಿತ್ತು,ಬೆವರಿರಲಿಲ್ಲ. 
        ಅಣ್ಣ ರಾತ್ರಿ ಇಡೀ ಜಾಗರವಿದ್ದುದು ನಾಗಮ್ಮನಿಗೆ ತಿಳಿಯದು. ಪಡಸಾಲೆಗೆ ಬಂದ ಅವರ ಮೂಗಿಗೆ ಕಂದೀಲು ಹೊರಸೂಸುತ್ತಿದ್ದ ಕೆಟ್ಟವಾಸನೆ ಬಡಿಯಿತು. ಕಂದೀಲನ್ನು ಆರಿಸಲು ಮರೆತು ಮಲಗಿರಬೇಕು ಅಣ್ಣ; ಎಣ್ಣೆ ತೀರಿ ಬತ್ತಿಯ ತುದಿ ಸುಟ್ಟಿದೆ – ಎಂದುಕೊಂಡರು.
        ಪಡಸಾಲೆಯಲ್ಲಿ ತಂಗಿಯ ಆಕೃತಿ ಕಂಡು ಶಾಮೇಗೌಡರು ಕೇಳಿದರು;