ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮

                        ನೋವು

“ಇದೇನು ಮೊಗ ಇಂಗಂತೀಯಾ. ನಮ್ಮ ಅಳ್ಳಿಯಾಗೆ ಅವುಸದಿ ಇನ್ಯಾರು ಕೊಡ್ತಾರೆ ?"

  • ರೋಗ ಪರೀಕ್ಷೆ ಮಾಡೋಕೆ ತಿಳೀದೋರಿಂದ ಔಷಧಿ ತಗೋಬಾರ್ರ್ದು
ಅತ್ತೆಮ್ಮ...” ನಾಗಮ್ಮ ಅವಾಕ್ಕಾದರು. ತೆರೆದ ಬಾಯಿಯನ್ನೂ ತೆರೆದ ಕಣ್ಣುಗಳನ್ನೂ ಒಂದು ಕ್ಷಣ ಅವರು ಮುಚ್ಚದೇಹೋದರು. 
  • "ರಂಗ, ಇಂಥಾ ಇಚಾರ ನನಗೆ ಒಸದು. ಇಸ್ಟು ವರ್ಸ ದೊಡ್ಡಮ್ಮನೋರೆ ಅಲ್ವಾ ಅವುಸದಿ ಕೊಟ್ಟಿದ್ದು? ನಿನಗೆ ಕಾಯಿಲೆ ಕಸಾಲೆ ಆದಾಗ್ಲೂ ಅವರೇ ಅಲ್ಲವಾ ನೋಡ್ಕೊಂಡಿದ್ದು?”

" ಇರಬೌದು, ಅತ್ತೆಮ್ಮ, ಗತಿ ಇಲ್ದೆ ಅಲ್ಲಿಗೆ ಓಗ್ತಿದ್ವಿ, ಈಗ—" "ಈಗ ?" "ನಾನು ಡಾಕ್ಟರ್ ಪರೀಕ್ಷೆಗೆ ಓದ್ತಿರೋದು ನಿಮಗೆ ಗೊತ್ತಿಲ್ವ, ಅತ್ತೆಮ್ಮ?"

" ಗೊತ್ತೈತೆ, ಮೊಗ."

ಏನು ಗೊತ್ತಿತ್ತೊ ಏನು ಗೊತ್ತಿರಲಿಲ್ಲವೋ. ತಮ್ಮಿಂದೇನೋ ತಪ್ಪಾಗಿದೆ ಎಂಬ ಭಾವವಿತ್ತು ನಾಗಮ್ಮನವರ ಧ್ವನಿಯಲ್ಲಿ. ಆ ಕ್ಷಣದಲ್ಲಿ ರಂಗಣ್ಣನ ಆತ್ಮವಿಶ್ವಾಸ ದ್ವಿಗುಣಿತವಾಯಿತು. ಅವನೆಂದ ": " ಇನ್ನು ಈ ಮನೇಲಿ ಏನ್ ಖಾಯಿಲೆ ಬಂದ್ರೂ ನಾನೇ ನೋಡ್ಕೊತೀನಿ, ಅತ್ತೆಮ್ಮ." ತಗ್ಗಿದ ಸ್ವರದಲ್ಲಿ ನಾಗಮ್ಮ ಅಂದರು :

ಅಂಗೇ ಆಗಲಪ್ಪ.” 
ಹಾಗೆ ಹೇಳಿದರೇನೋ ನಿಜ. ಆದರೆ ಸದ್ಯದ ಜ್ವರಕ್ಕೆ ಏನು ಮಾಡ್ತೀಯಾ ?– 

ಎಂದು ಕೇಳಬೇಕೆನಿಸಿತು. ಅಷ್ಟರಲ್ಲಿ ಗೌಡರು ಬಂದರು. ದೋಸೆ ಹುಯ್ಯಲೆಂದು ನಾಗಮ್ಮ ಒಳಕ್ಕೆ ಹೋದರು.

ಅತ್ತೆಯೊಡನೆ ಮಾತನಾಡಿದ ಠೀವಿಯಲ್ಲೇ ರಂಗಣ್ಣ ತಂದೆಯೊಡನೆ ಔಷಧಿಯ ಪ್ರಸ್ತಾಪ ಮಾಡಿದ. 

" ನಾನು ನಗರಕ್ಕೆ ಓಗ್ಬರ್ರ್ತೀನಿ, ಅಪ್ಪ."

ಅಂಗವಸ್ತ್ರವನ್ನು ಗೂಟಕ್ಕೆ ತೂಗಹಾಕಿ, ಗೌಡರು ಕೇಳಿದರು : 
"ಯಾಕೆ ? ಸುಬ್ಬಿಗೆ ಜ್ವರ ಅಂತಾಳೆ ನಾಗೂ, ಮನೇಲೆ ಇರೋದು ಮೇಲಲ್ವ ?" 
ಜ್ವರಕ್ಕೆ ಔಷಧಿ ತಕಂಬರ್ತೀನಿ."
ನಗರದಿಂದ್ಲೆ ?” 

" ಹೂಂ ಅಪ್ಪ, ಅಲ್ಲಿ ನನ್ನ ಪ್ರೊಫೆಸರಿದ್ದಾರೆ–ಡಾಕ್ಟ್ರು. ಯಾವ ಔಷಧಿ ಅಂತ ಅವರ್ರ್ನ ಕೇಳಿ, ಕೊಂಡ್ಕೊಂಡು ಬತೀನಿ."

  • ಈಗ ಓದ್ರೆ ನೀನು ಬರೋದು ರಾತ್ರೆಗೇ ಅನ್ನು."
" ಇಲ್ಲಪ್ಪ, ಸಾಯಂಕಾಲ ನಾಲ್ಕು ಗಂಟೆಯೊಳಗೆ ಬಂದ್ಬಿಡ್ಬೌದು.” 

" ಅಷ್ಟರ ತನಕ ಸುಬ್ಬಿಗೆ ಏನೂ ಕೊಡೋದು ಬೇಡ ಅಂತಲೊ?” " ಏನೂ ಬೇಡ. ಈಗ ಜ್ವರ ಅಷ್ಟಿಲ್ಲ, ಸಾಯಂಕಾಲದೊಳಗೆ ಹೇಗೂ ಔಷಧಿ ಕೊಟ್ಟೇ