ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೩೫

ಕೊಡ್ತೇವೆ."

   “ಸರಿ, ದುಡ್ದು ಇಟ್ಟೊಂಡಿರು. ಎಸ್ಟ್ರ್ರುಪಾಯಿ ಆಗಬೌದು ಅವುಸದಿಗೆ?" 
   " ಗೊತ್ತಿಲ್ಲಪ್ಪ, ಬಸ್ ಚಾರ್ಜ್ ಅಲ್ದೆ ಒಂಧ್ಹತ್ರುಪಾಯಿ ತಕ್ಕಂಡಿರ್ತಿನನಿ." 
    "ಅಂಗೇ ಮಾಡು.. ಬರೀ ಒಟೇಲಿ ಓಗ್ಬೇಡ.ಒಳಗೆ ಏನಾದರೂ ಆಗಿದ್ರೆ ತಿಂದ್ಕೊಂಡೋಗು. ರಸ್ತೆಗಂಟ ಕರಿಯ ಜತೆಗಿರ್ಲಿ." 
    "ಕರಿಯ ಯಾತಕ್ಕೆ? ಒಬ್ನೇ ಹೋಗ್ತಿನಿ."
     ಗೌಡರ ಮೂಗು ಹೌದೋ ಅಲ್ಲವೋ ಎನ್ನುವಂತೆ ಕುಣಿಯಿತು. 
     "ಯೋಳಿದ್ದು ಕೇಳು, ರಂಗ."  
     “ ಹೂಂ, ಅಪ್ಪ." 
      ಹದಿನೈದು ನಿಮಿಷಗಳಲ್ಲಿ ರಂಗಣ್ಣ ಸಿದ್ದನಾದ. ಅಂಗಳದಲ್ಲಿ ಕರಿಯ ಚಿಕ್ಕ ಒಡೆಯನ దారి ನೋಡಿದ.
     ಗೌಡರು ಪಲ್ಲಂಗದ ಮೇಲೆ ಕುಳಿತೇ ಮಗನನ್ನು ಬೀಳ್ಕೊಟ್ಟರು. 

ರಂಗನೆಂದ:

    " ಮೂರು ಘಂಟೆಗೆ ಕರಿಯನನ್ನ ರಸ್ತೆಗೆ ಕಳಿಸ್ಕೊಡಿ . ಬರುವಾಗ ಸಾಮಾನು ಗೀಮಾನು–" 
ಹ ಹ...." ಕಳಿಸೋವ," ಎಂದರು ಗೌಡರು.
     ರಂಗಣ್ಣ ಹೋದ ಬಳಿಕ ಗೌಡರು ಮೆಲ್ಲನೆದ್ದು ಗೋಡೆಯ ಗೂಟದ ಕಡೆಗೆ ನಡೆದರು. ಅವರಂತೂ ಬೆಳಗ್ಗಿನ ವೇಳೆ ತಿಂಡಿ ತೀರ್ಥ ಮುಟ್ಟುವ ಅಭ್ಯಾಸದವರಲ್ಲ. ಕಪ್ಪು ಬಣ್ಣದ ಕೋಟು ಧರಿಸಿದರು. ರುಮಾಲನ್ನು ತಲೆಗೆ ಸುತ್ತಿದರು. 
   ನೋಟವೆಲ್ಲ ಪ್ರಾಶ್ನಾರ್ಥಕ ಚಿಹ್ನವಾಗಿ ಒಳಬಾಗಿಲಲ್ಲಿ ನಿಂತ ನಾಗಮ್ಮನವರನ್ನು ಉದ್ದೇಶಿಸಿ, "ಬರ್ತೀನಿ ಈಗ," ಎಂದರು.
  ನಾಗಮ್ಮ ತಲೆಬಾಗಿಲವರೆಗೂ ಅಣ್ಣನನ್ನು ಹಿಂಬಾಲಿಸಿದರು. 
  ರಂಗಣ್ಣ ಅತ್ತೆಗೆ ಹೇಳದೆ ಹೊರಡುವವನಲ್ಲ ಎಲ್ಲಿಗೂ. ಆದರೆ ಈ ದಿನ ಅವಸರವಾಗಿ ಹೊರಟುಬಿಟ್ಟಿದ್ದ. 
  ನಾಗಮ್ಮ ಕೇಳಿದರು: 
   " ರಂಗ ಎಲ್ಲೋದ, ಅಣ್ಣ?”
   " ನಗರಕ್ಕೆ. ಇವತ್ತೇ ಬಂದ್ಬಿಡ್ತಾನೆ." 
    ಅಳುಕುತ್ತ ಅಳುಕುತ್ತ ನಾಗಮ್ಮ ಕೇಳಿದರು: "   
    "ನೀನು ಅಯ್ನೋರಲ್ಲಿಗೆ ಓಗ್ತಿದಿಯಾ ?"
   " ಹೂಂ, ಜಲ್ದಿ ಬಂದ್ಬಿಡ್ತೀನಿ. ಸುಬ್ಬೀನ ರವಷ್ಟು ನೋಡ್ಕೊ." 
   " ನೋಡ್ಕೊತೀನಣ್ಣ..." 
    ಅಣ್ಣ ಅಂಗಳ ದಾಟಿ ಹೋದ ಮೇಲೂ ನಾಗಮ್ಮ ಬಾಗಿಲಲ್ಲಿ ಕೆಲ ನಿಮಿಷ ಚೌಕಟ್ಟಿಗೊರಗಿ ನಿಂತರು. ಅವರಿಗನ್ನಿಸಿತು: ಯಾಕೊ ಸಪ್ಪಗಿದಾನಲ್ಲ ಅಣ್ಣ? ಮುನಿಯ ಸತ್ತ [ಕೊಲೆಯಾದ] ಕಾರಣದಿಂದ ಹೀಗೆ ಆಗಿರಬೇಕು. ಎಷ್ಟೆಂದರೂ ಪಟೇಲ, ಹಳ್ಳಿಗೆ ಹಿರಿಯ.