ಈ ಪುಟವನ್ನು ಪರಿಶೀಲಿಸಲಾಗಿದೆ

ನೋವು ಎಷ್ಟೋ ಜನ ಹಿಂದೆ ಮಾಡಿದ್ದಾರೆ; ಮುಂದೆಯೂ ಮಾಡುತ್ತಾರೆ. ಆದರೆ ಸುಬ್ಬಿಯ ಮೇಲೆ ತನಗೆ ಪ್ರೇಮ ಎಲ್ಲಿಯದು? ಇಲ್ಲ ಎಂದಾದ ಮೇಲೆ ಯಾಕೆ ಗಾಬರಿಯಾಗಬೇಕು ತಾನು? ರಂಗಣ್ಣ ದಿಬ್ಬದ ಮೇಲಿದ್ದ. ತಮ್ಮನ್ನು ಕಂಡಿದ್ದ. ಕಾಣಲಿ. ಸಲ್ಲದುದೇನನ್ನೂ ತಾವು ಮಾಡಿಲ್ಲವಲ್ಲ? ಅಷ್ಟಕ್ಕೂ ಪ್ರಕರಣ ಈಗ ಮುಗಿದಂತೆಯೇ. ಅಬ್ಬ! ಹೀಗೂ ಆಗಬಹುದೆಂದು ಯಾರು ಊಹಿಸಿದ್ದರು ?

     ಪದ್ಮನಾಭನಿಗೆ ಅವಮಾನವಾಗಿತು, ಆದರೆ ದೊಡ್ಡಮ್ಮ ಆರೋಪಗಳನ್ನೇನೂ ಸದ್ಯಃ ಹೊರಿಸಲಿಲ್ಲ! ರಂಗಣ್ಣನಿಗೂ ತನಗೂ ಒಂದು ಕಾಲದಲ್ಲಿ ಸ್ನೇಹವಿತ್ತು. ಮುಂದೆ ಅವನಾಗಿಯೇ ದೂರ ಹೋದ. ಆ ಕಾರಣಕ್ಕಾದರೂ ಸುಭದ್ರೆಯನ್ನು ಹತ್ತಿರಕ್ಕೆ ಸೆಳೆದುಕೊಂಡು ರಂಗಣ್ಣನ ಮಖ ಭಂಗ ಮಾಡಲು ತಾನು ಇಚ್ಛಿಸಿದೆ–ಎಂದರೆ, ಸ್ವಲ್ಪ ಮಟ್ಟಿಗೆ ಅದು ನಿಜವೇ.
     ರಂಗಣ್ಣನನ್ನು ಕೆರಳಿಸಿದೆ ಎಂದು ತಾನು ಸಮಾಧಾನಪಟ್ಟುಕೊಳ್ಳಬಹುದು–ಎಂದು ಕೊಂಡ ಪದ್ಮನಾಭ.

ಒಟ್ಟಿನಲ್ಲಿ?

      ವಿಚಾರಗಳ ಮೊತ್ತ ಪದ್ಮನಾಭನನ್ನು ಅಣಕಿಸಿತು: 
     " ಈ ಕೆಲಸ ನಾನು ಮಾಡಬಾರದಾಗಿತ್ತೂ."
      ಮತ್ತೆ ಮತ್ತೆ ಆ ಮಾತನ್ನು ಆತ ತನ್ನಷ್ಟಕ್ಕೆ ಆಡಿಕೊಂಡ.
      ಮಧಾಹ್ನ ಹಸಿವಾಗಿತ್ತು. ಎದ್ದು ಊಟಕ್ಕೆ ಹೋದನೋ ಸ್ವಾಭಿಮಾನಕ್ಕೆ ಕುಂದು-ಕಣ್ಣು ಮುಚ್ಚಿ ಮಲಗಿದ.
     ದೊಡ್ಡಮ್ಮ ಬಂದು ನೋಡಿದರು. ಆದರೆ ಮೈ ಮುಟ್ಟಿ ಮೊಮ್ಮಗನನ್ನು ಎಬ್ಬಿಸಲಿಲ್ಲ. ಲೋಟ ತುಂಬ ಹಾಲನ್ನು ಮೇಜಿನ ಮೇಲಿಟ್ಟು ಹೋದರು.
     ಕತ್ತಲಾದ ಮೇಲೆ ಅವರು ಬಂದು ಕರೆದಾಗ ತಕ್ಷಣವೇ ಏಳಲು ಪದ್ಮನಾಭ ಸಿದ್ದನಾಗಿದ್ದ. ಆದರೂ ತನಗೆ ಸೋಲಾಯಿತೆಂಬುದನ್ನು ತೋರಿಸಿಕೊಳ್ಳದೆಯೇ ಆತ ದೊಡ್ಡಮ್ಮನನ್ನು ಹಿಂಬಾಲಿಸಿದ್ದ.
    .....ಅಜ್ಜಿ----- ಮೊಮ್ಮಗನ ಪಾರಣೆಯಾಗುತ್ತಿದ್ದಂತೆ ಹೊರಗೆ ಗೋವಿ೦ದ ಹಾಗೂ ಇನ್ನೊಬ್ಬರ ಸ್ವರಗಳು ಕೇಳಿಸಿದುವು.
      ಅಪರಿಚಿತ ಧ್ವನಿ :
      “ಕೈ ಕಾಲು ತೊಳಕೊಂಡೇ ಒಳಗೆ ಹೋಗೋಣ."

ಗೋವಿ೦ದ: -

      " ಅ೦ಗಳದ ಮೂಲೇಲಿ ನೀರಿದೆ. బನ್ನಿ
      "ನಿಮ್ಮ ತಂದೆಯವರು ಇದ್ದಾರೇಂತ ಕಾಣುತ್ತೆ."
      " ಇಷ್ಟು ಹೊತ್ನಲ್ಲಿ ಎಲ್ಲರೂ ಮನೇಲಿರ್ತಾರೆ. ಬಹುಶಃ ಅಣ್ಣಯ್ಯ ಸಂಧ್ಯಾವ೦ದನೆಗೆ ಕೂತಿರಬೇಕು" -
       "ಕತ್ತಲಾದ್ಮೇಲೆ ಹಳ್ಳಿಗೆ ಬಂದ ಹಾಗಾಯ್ತು. ಸೋಮಪುರ ಎಕ್ಸ್ ಪ್ರೆಸ್ನನಲ್ಲೇ ಸೀಟು ಸಿಕ್ಕಿದ್ದಿದ್ರೆ ಸೂರ್ಯ ಮುಳುಗೋದಕ್ಕೆ ಒಂದು ಘಳಿಗೆ ಮುಂಚೇನೆ

ಬರ್ತಿದ್ದೆವೂ೦ತ