ಈ ಪುಟವನ್ನು ಪರಿಶೀಲಿಸಲಾಗಿದೆ

 ನೋವು ಕಾಣ್ತದೆ." “ ಹವ್ದು ತಾಳಿ.ಟವೆಲ್ ತರ್ತೀನಿ" " ಬೇಡಿ, ಗೋವಿಂದರಾವ್, ಟವೆಲು ಯಾಕೆ ? ತಾನೇ ಒಣಗ್ತದೆ".

ಆ ಸ್ವರದ ಪರಿಚಯ ಪದ್ಮನಾಭನಿಗಿರಲಿಲ್ಲ.
'ಗೋವಿಂದ ಯಾರನ್ನೋ ಕರಕೊಂಡು ಬಂದ ಹಾಗಿದೆ. ಕಣಿವೇಹಳ್ಳಿಯವರಲ್ಲಾಂತ ಕಾಣುತ್ತೆ.' 

ಮತ್ತೆ ಹೊರಗಿನಿಂದ ಮಾತುಗಳು ಕೇಳಿಸಿದುವು.

" ಬನ್ನಿ.ಕೂತ್ಕೊಳ್ಳಿ. ನಾನು ಈ ಯೂನಿಫಾರ್ಮ್ ಬಿಚ್ಚಿ ಬರ್ತೀನಿ." 

“ಹಹ್ಹ! ಆಗಲಿ ಗೋವಿಂದರಾವ್.” ಗೋವಿಂದ ಪದ್ಮನಾಭನ [ಹಾಗೂ ತನ್ನೆ] ಕೊಠಡಿಗೆ ಹೋದ.

ಅಷ್ಟರಲ್ಲಿ ಶ್ರೀನಿವಾಸಯ್ಯ ಪಡಸಾಲೆಗೆ ಬಂದರು. ಜಗಲಿಯಲ್ಲಿ ಯಾರೋ ಕುಳಿತಿದ್ದು ದನ್ನು ಕಂಡು [ಅಸ್ಪಷ್ಟ ಸಂಭಾಷಣೆ ಅವರಿಗೂ ಕೇಳಿಸಿತ್ತು.] ಅಲ್ಲಿಗೆ ನಡೆದರು. ಅಪರಿಚಿತ ಎದ್ದು ನಿಂತು, "ನಮಸ್ಕಾರ," ಎಂದು ಕೈಜೋಡಿಸಿದರು.
" ನಮಸ್ಕಾರ, ನಮಸ್ಕಾರ.ಗೋವಿಂದನ ಜತೆ ಬಂದಿರೊ? ತಮ್ಮ ಪರಿಚಯ ನನಗಿಲ್ಲ ಅಂತ ತೋರುತ್ತೆ."

ಶ್ರೀನಿವಾಸಯ್ಯ ಇನ್ನೊಂದು ಕುರ್ಚಿಯಲ್ಲಿ ಆಸೀನರಾದ ಮೇಲೆ ಬಂದವರು ಕುಳಿತು ಕೊಂಡರು, ಆತನೆಂದರು: "ಉಂಟು, ಇಲ್ಲ. ಹ್ಯಾಗೆ ಹೇಳಿದರೂ ಸರಿಯೇ."

ಎಲ್ಲೊ ಕಂಡಿದೀನಲ್ಲ–ಎನಿಸಿತು ಶ್ರೀನಿವಾಸಯ್ಯನವರಿಗೆ. ನೆನೆಪು ಮಾಡಿಕೊಳ್ಳುವ ಪ್ರಯತ್ನದಲ್ಲಿ ಹಣೆ ನೆರಿಗೆ ಕಟ್ಟಿತು. ಪ್ರಯೋಜನವಾಗಲಿಲ್ಲ.

ಆತನೆ ಮು೦ದುವರಿಸಿದರು: " ಮೂರು ವರ್ಷಗಳಿಗೆ ಹಿಂದೆ ತಾವೂ –ಈ ಊರಿನ ಗೌಡರೂ ನನ ಲ್ಲಿ ಆತಿಥ್ಯ ಸ್ವೀಕರಿಸಿದ್ದಿರಿ. ಅದನ್ನು ಆತಿಥ್ಯ ಅಂತ ಕರೀಬಹುದೋ ಬಾರದೊ ಅದು ಮಾತ್ರ ಗೊತ್ತಿಲ್ಲ. - ಶ್ರೀನಿವಾಸಯ್ಯ ಯೋಚಿಸಿದರು: ಮೂರು ವರ್ಷಗಳಿಗೆ ಹಿಂದೆ ತಾವೂ ಶಾಮೇಗೌಡರೂ ಜತೆಯಾಗಿ ಮಕ್ಕಳನ್ನು ಕಾಲೇಜುಗಳಿಗೆ ಸೇರಿಸುವುದಕ್ಕೋಸ್ಕರ ಭಾಗ್ಯನಗರಕ್ಕೆ ಹೋಗಿದ್ದರು. ಆತಿಥ್ಯ ಸ್ವೀಕರಿಸಿದ್ದರೆ ಅದು ಅಲ್ಲಿಯೇ ಇರಬೇಕು... .ಅಲ್ಲಿ – ಹಾಂ ! ಅಷ್ಟರಲ್ಲಿ ಗೋವಿಂದ ಮಾತನಾಡುತ್ತ ಅವರಿದ್ದಲ್ಲಿಗೆ ಬಂದ. " ಇವರು ನ್ಯೂ ಗಣೇಶ ಭವನದ ಮಾಲಿಕರು ಅಣ್ಣಯ್ಯ, ಗಣೇಶ ಭವನ ಗೊತ್ತಿಲ್ವೆ ? ನಗರದ ಬಸ್ಸ್ಟ್ಯಾಂಡ್ ದಕ್ಷಿಣದಲ್ಲಿ ಭೋಲಾಪಂತ್ ರಸ್ತೆಲಿದೆ. ನೀವಲ್ಲೇ ಹಿಂದೆ ಇಳ ಕೊ೦ಡಿದ್ರಿ.” " ಆ ಆತಿಥ್ಯವಾ ? ಹೊಹೊ ! ಸಂತೋಷ ಸಂತೋಷ !"

ಆ ಮನುಷ್ಯನೆಂದರು; 

“ನನ್ನ ಹೆಸರು ವಿಷ್ಣುಮೂರ್ತಿ ಅಂತ."